‘ಕಳ್ಳ ಸ್ವಾಮೀಜಿ ಎನ್ನಬೇಕೆ?’ ಎಂದ ಸೋನು; ಆರ್ಯವರ್ಧನ್ ಗುರೂಜಿ ತಿರುಗೇಟಿಗೆ ವೈರಲ್ ಹುಡುಗಿ ಗಪ್ಚುಪ್
ಮನೆ ಮಂದಿ ಕುಳಿತು ಹರಟೆ ಹೊಡೆಯುತ್ತಿದ್ದರು. ಈ ವೇಳೆ ಆರ್ಯವರ್ಧನ್ಗೆ ‘ಡವ್ ರಾಜ್’ ಎಂಬ ಶಬ್ದ ಬಳಕೆ ಮಾಡಿದರು ಸೋನು. ಇದನ್ನು ಕೇಳಿ ಆರ್ಯವರ್ಧನ್ ಗುರೂಜಿ ಸಿಟ್ಟಾದರು. ‘ಡವ್ ರಾಜ’ ಅಂದ್ರೆ ಸರಿ ಇರಲ್ಲ ಎಂದು ನೇರವಾಗಿ ಹೇಳಿದರು.
‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಮೊದಲ ಸೀಸನ್ ಕೊನೆಯ ವಾರಕ್ಕೆ ಬಂದು ನಿಂತಿದೆ. ಈಗಿರುವ ಎಂಟು ಸ್ಪರ್ಧಿಗಳ ಪೈಕಿ ನಾಲ್ಕು ಮಂದಿ ಮಾತ್ರ ಟಿವಿ ಸೀಸನ್ಗೆ ತೆರಳಲಿದ್ದಾರೆ. ಕಡಿಮೆ ಸದಸ್ಯರು ಇರುವ ಕಾರಣಕ್ಕೆ ದೊಡ್ಮನೆ ಬಿಕೋ ಎನ್ನುತ್ತಿದೆ. ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆದರೂ ಜಗಳ ಮಾತ್ರ ಕಡಿಮೆ ಆಗುತ್ತಿಲ್ಲ. ಅದರಲ್ಲೂ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸುಖಾಸುಮ್ಮನೆ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಆರ್ಯವರ್ಧನ್ ಗುರೂಜಿ ಜತೆ ದೊಡ್ಡ ಜಗಳವನ್ನೇ ಮಾಡಿದ್ದಾರೆ.
ಮನೆ ಮಂದಿ ಕುಳಿತು ಹರಟೆ ಹೊಡೆಯುತ್ತಿದ್ದರು. ಈ ವೇಳೆ ಆರ್ಯವರ್ಧನ್ಗೆ ‘ಡವ್ ರಾಜ್’ ಎಂಬ ಶಬ್ದ ಬಳಕೆ ಮಾಡಿದರು ಸೋನು. ಇದನ್ನು ಕೇಳಿ ಆರ್ಯವರ್ಧನ್ ಗುರೂಜಿ ಸಿಟ್ಟಾದರು. ‘ಡವ್ ರಾಜ’ ಅಂದ್ರೆ ಸರಿ ಇರಲ್ಲ ಎಂದು ನೇರವಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋನು ಗೌಡ ‘ಹಾಗಿದ್ರೆ ನಾನು ನಿಮಗೆ ಕಳ್ಳ ಸ್ವಾಮೀಜಿ’ ಎಂದು ಹೇಳಲೇ ಎಂಬುದಾಗಿ ಕೇಳಿದ್ದಾರೆ. ಇದಕ್ಕೆ ಗುರೂಜಿ ಹೆಚ್ಚೇನು ಪ್ರತಿಕ್ರಿಯೆ ನೀಡಿಲ್ಲ. ಆದರೆ, ಮನೆ ಮಂದಿಗೆ ಈ ವಿಚಾರ ಹೆಚ್ಚು ಇಷ್ಟ ಆಗಿಲ್ಲ. ಈ ಬಗ್ಗೆ ಎಲ್ಲರೂ ಪ್ರಶ್ನೆ ಮಾಡಿದ್ದಾರೆ.
‘ಸೋನು ಅವರು ವಯಸ್ಸಿನಲ್ಲಿ ಹಿರಿಯರು. ಅವರಿಗೆ ನೀನು ಈ ರೀತಿ ಹೇಳಿದ್ದು ಸರಿ ಅಲ್ಲ’ ಎಂದು ಸಾನ್ಯಾ ಅಯ್ಯರ್ ಹೇಳಿದರು. ಇದಕ್ಕೆ ಸೋನು ಬೇಸರ ಮಾಡಿಕೊಂಡರು. ‘ಕಳ್ಳ ಸ್ವಾಮೀಜಿ ಎಂದು ಹೇಳಬೇಕೆ ಎಂಬುದಷ್ಟೇ ನನ್ನ ಪ್ರಶ್ನೆ. ನಾನು ಅವರಿಗೆ ಕಳ್ಳ ಸ್ವಾಮೀಜಿ ಎಂದು ಹೇಳಿಲ್ಲ’ ಎಂಬುದಾಗಿ ಸೋನು ವಾದ ಮಾಡೋಕೆ ಬಂದರು. ಈ ವಿಚಾರದಿಂದ ಗುರೂಜಿ ಸಿಟ್ಟಾದರು.
ಇದನ್ನೂ ಓದಿ: ‘ನನಗಾಗಿ 24ರ ಪ್ರಾಯದ ಹುಡುಗನನ್ನು ಕಳಿಸು’: ಸೋನು ಶ್ರೀನಿವಾಸ್ ಗೌಡ ವಿಶೇಷ ಮನವಿ
‘ಸುಖಾ ಸುಮ್ಮನೆ ನನ್ನ ಸುದ್ದಿಗೆ ಬರಬೇಡ. ನಾನು ನನ್ನದೇ ಲಿಮಿಟ್ನಲ್ಲಿ ಇರ್ತೀನಿ. ನನಗೆ ಸಿಟಿ ಲೈಫ್ ಒಗ್ಗಿಲ್ಲ. ಹೀಗಾಗಿ, ಹಳ್ಳಿ ಲೈಫ್ನಲ್ಲಿ ನಾನು ಬದುಕುತ್ತಾ ಇದ್ದೀನಿ. ನನ್ನ ಭಾಷೆಗಳು ಕೂಡ ಅದೇ ರೀತಿ ಇದೆ. ನಾನು ಬಳಕೆ ಮಾಡುವಷ್ಟು ಕೆಟ್ಟ ಶಬ್ದ ಯಾರೂ ಬಳಕೆ ಮಾಡೋಕೆ ಆಗಲ್ಲ. ಕೆಟ್ಟ ಶಬ್ದ ಹೆಚ್ಚು ಬಳಕೆ ಮಾಡುವ ಸ್ಪರ್ಧೆ ಇಟ್ಟರೆ ನಾನೇ ಮೊದಲು ಬರುತ್ತೇನೆ’ ಎಂದಿದ್ದಾರೆ ಗುರೂಜಿ. ಇದಕ್ಕೆ ಸೋನು ಗೌಡ ಗಪ್ಚುಪ್ ಆಗಿದ್ದಾರೆ.