AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puri Jagannadh: ‘ಬಾಕ್ಸ್​ ಆಫೀಸ್​ ಲೆಕ್ಕ ಸುಳ್ಳು ಹೇಳ್ತಾರೆ, ಅಸಹ್ಯ ಆಗತ್ತೆ’: ನಿರ್ದೇಶಕ ಪುರಿ ಜಗನ್ನಾಥ್ ಆಡಿಯೋ ವೈರಲ್​

Puri Jagannadh Audio Leak: ‘ಪ್ರಾಮಾಣಿಕತೆ ಇಲ್ಲದ ವಿತರಕರ ಜೊತೆ ವ್ಯವಹಾರ ಮಾಡಿ ನನಗೆ ಸಾಕಾಗಿದೆ. ಇವರೆಲ್ಲ ಬಾಕ್ಸ್​ ಆಫೀಸ್​ ಲೆಕ್ಕಾಚಾರದಲ್ಲಿ ಮೋಸ ಮಾಡ್ತಾರೆ’ ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ.

Puri Jagannadh: ‘ಬಾಕ್ಸ್​ ಆಫೀಸ್​ ಲೆಕ್ಕ ಸುಳ್ಳು ಹೇಳ್ತಾರೆ, ಅಸಹ್ಯ ಆಗತ್ತೆ’: ನಿರ್ದೇಶಕ ಪುರಿ ಜಗನ್ನಾಥ್ ಆಡಿಯೋ ವೈರಲ್​
ಪುರಿ ಜಗನ್ನಾಥ್
TV9 Web
| Edited By: |

Updated on:Oct 25, 2022 | 10:23 AM

Share

ನಿರ್ದೇಶಕ ಕಮ್​ ನಿರ್ಮಾಪಕ ಪುರಿ ಜಗನ್ನಾಥ್​ (Puri Jagannadh) ಅವರು ಈಗ ಹತಾಶರಾಗಿದ್ದಾರೆ. ಅವರು ಭಾರಿ ನಿರೀಕ್ಷೆ ಇಟ್ಟುಕೊಂಡು ಮಾಡಿದ್ದ ‘ಲೈಗರ್​’ (Liger) ಸಿನಿಮಾ ಹೀನಾಯವಾಗಿ ಸೋತಿತು. ವಿಜಯ್​ ದೇವರಕೊಂಡ, ಅನನ್ಯಾ ಪಾಂಡೆ ಅವರಂತಹ ಸ್ಟಾರ್​ ಕಲಾವಿದರು ಇದ್ದರೂ ಕೂಡ ಆ ಸಿನಿಮಾ ಹಿಟ್​ ಆಗಲಿಲ್ಲ. ಈಗ ಪುರಿ ಜಗನ್ನಾಥ್​ ಅವರಿಗೆ ಹೊಸ ತಲೆ ಬಿಸಿ ಶುರುವಾಗಿದೆ. ತಮ್ಮ ಹಣವನ್ನು ವಾಸಪ್​ ನೀಡಿ ಎಂದು ಅನೇಕ ವಿತರಕರು ಬೆನ್ನುಬಿದ್ದಿದ್ದಾರೆ. ಪದೇ ಪದೇ ಫೋನ್​ ಮಾಡಿ ಟಾರ್ಚರ್​ ನೀಡುತ್ತಿರುವ ವಿತರಕರು ಮತ್ತು ಪ್ರದರ್ಶಕರಿಗೆ ಪುರಿ ಜಗನ್ನಾಥ್​ ಕ್ಲಾಸ್​ ತೆಗೆದುಕೊಂಡಿದ್ದಾರೆ. ಅದರ ಆಡಿಯೋ ಕ್ಲಿಪ್​ ವೈರಲ್​ ಆಗಿದೆ. ‘ಇವರೆಲ್ಲ ಬಾಕ್ಸ್​ ಆಫೀಸ್​ (Box Office Collection) ವಿಚಾರದಲ್ಲಿ ಸುಳ್ಳು ಲೆಕ್ಕ ಕೊಡ್ತಾರೆ’ ಎಂದು ಅವರು ಆರೋಪಿಸಿದ್ದಾರೆ.

ಚಿತ್ರರಂಗದಲ್ಲಿ ಪುರಿ ಜಗನ್ನಾಥ್​ ಅವರು ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ‘ಲೈಗರ್​’ ಸಿನಿಮಾದ ಸೋಲಿನಿಂದ ಅವರಿಗೆ ಸಖತ್ ಹಿನ್ನಡೆ ಆಗಿದೆ. ಅದನ್ನೇ ನೆಪವಾಗಿ ಇಟ್ಟುಕೊಂಡು ಅನೇಕ ವಿತರಕರು ಹಣ ವಾಪಸ್​ ನೀಡಬೇಕು ಎಂದು ಹಠ ಹಿಡಿದಿದ್ದಾರೆ. ಅಲ್ಲದೇ ಬ್ಲಾಕ್​ ಮೇಲ್​ ಮಾಡುತ್ತಿದ್ದಾರೆ ಕೂಡ. ಇದರಿಂದ ಬೇಸರಗೊಂಡಿರುವ ಪುರಿ ಜಗನ್ನಾಥ್​ ಅವರು ಕಳಿಸಿರುವ ವಾಯ್ಸ್​ ನೋಟ್​ ಲೀಕ್​ ಆಗಿದೆ.

ಪುರಿ ಜಗನ್ನಾಥ್​ ಅವರ ಇಮೇಜ್​ ಹಾಳು ಮಾಡುವ ಉದ್ದೇಶದಿಂದ ಯಾರೋ ಇದನ್ನು ಲೀಕ್​ ಮಾಡಿದ್ದಾರೆ. ಆದ್ರೆ ಈ ಆಡಿಯೋ ಕ್ಲಿಪ್​ ಕೇಳಿಸಿಕೊಂಡ ಬಳಿಕ ನೆಟ್ಟಿಗರು ಪುರಿ ಜಗನ್ನಾಥ್​ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ‘ನನಗೆ ನೀವು ಬ್ಲಾಕ್​ ಮೇಲ್​ ಮಾಡುತ್ತೀರಾ? ನಾನು ಯಾರಿಗೂ ಹಣ ವಾಪಸ್​ ನೀಡಬೇಕು ಎಂಬುದಿಲ್ಲ. ಆದರೂ ಕೂಡ ನೈತಿಕತೆಯ ದೃಷ್ಟಿಯಿಂದ ನಾನು ವಾಪಸ್​ ಕೊಡುತ್ತಿದ್ದೇನೆ. ಹೀಗೆಲ್ಲ ಬೆದರಿಕೆ ಹಾಕಿದರೆ ಖಂಡಿತವಾಗಿಯೂ ಹಣ ವಾಪಸ್​ ಕೊಡಲ್ಲ’ ಎಂದು ಪುರಿ ಜಗನ್ನಾಥ್​ ಹೇಳಿದ್ದಾರೆ.

ಇದನ್ನೂ ಓದಿ
Image
‘ಲೈಗರ್’ ಸಿನಿಮಾದ ಖಳನಟ ವಿಶ್​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ
Image
Liger Movie: ಪುನೀತ್​ ಸಮಾಧಿಗೆ ವಿಜಯ್​ ದೇವರಕೊಂಡ ಭೇಟಿ; ‘ಲೈಗರ್​’ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಟ
Image
Liger: ‘ಲೈಗರ್ ಸಿನಿಮಾ ಬ್ಲಾಕ್​ ಬಸ್ಟರ್​’: ರಿಲೀಸ್​ಗೂ ಮುನ್ನ ಘೋಷಿಸಿದ ವಿಜಯ್​ ದೇವರಕೊಂಡ
Image
Vijay Devarakonda: ಒಂದೇ ದಿನದಲ್ಲಿ 5 ಕೋಟಿ​ಗಿಂತ ಹೆಚ್ಚು ಬಾರಿ ವೀಕ್ಷಣೆ ಕಂಡ ‘ಲೈಗರ್​’ ಟ್ರೇಲರ್​

‘ಪ್ರಾಮಾಣಿಕತೆ ಇಲ್ಲದ ವಿತರಕರ ಜೊತೆ ವ್ಯವಹಾರ ಮಾಡಿ ನನಗೆ ಸಾಕಾಗಿದೆ. ಇವರೆಲ್ಲ ಬಾಕ್ಸ್​ ಆಫೀಸ್​ ಲೆಕ್ಕಾಚಾರದಲ್ಲಿ ಮೋಸ ಮಾಡ್ತಾರೆ. ಲೈಗರ್​ ಚಿತ್ರವನ್ನು ಉತ್ತರ ಭಾರತದಲ್ಲಿ ವಿತರಣೆ ಮಾಡಿದ ಅನಿಲ್​ ಥಡಾನಿ ಅವರು ನಮಗೆ ಸರಿಯಾದ ಲೆಕ್ಕ ನೀಡ್ತಾರೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಅದು ಹೆಚ್ಚಾಗಿತ್ತು. ಅದಕ್ಕಾಗಿಯೇ ನಾನು ಅವರ ಜೊತೆ ಕುಳಿತು ಮಾತನಾಡಲು ಇಷ್ಟಪಡುತ್ತೇನೆ. ಆದರೆ ಇಲ್ಲಿನ ನಮ್ಮ ವಿತರಕರನ್ನು ನೋಡಿದರೆ ನನಗೆ ಅಸಹ್ಯ ಆಗುತ್ತದೆ’ ಎಂದು ಪುರಿ ಜಗನ್ನಾಥ್​ ಹೇಳಿರುವುದು ಚರ್ಚೆಗೆ ಕಾರಣ ಆಗಿದೆ.

ಈ ಕುರಿತು ರಾಮ್​ ಗೋಪಾಲ್​ ವರ್ಮಾ ಸೇರಿದಂತೆ ಟಾಲಿವುಡ್​ನ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ಪುರಿ ಜಗನ್ನಾಥ್​ ಅವರಿಗೆ ಬೆಂಬಲ ಸೂಚಿಸಿದ್ದಾರೆ. ವಿತರಕರ ವಾಟ್ಸಪ್​ ಗ್ರೂಪ್​ಗಳಲ್ಲಿ ಪುರಿ ಜಗನ್ನಾಥ್​ ವಿರುದ್ಧ ಹರಿದಾಡುತ್ತಿರುವ ಮೆಸೇಜ್​ನ ಸ್ಕ್ರೀನ್​ ಶಾಟ್​ ಅನ್ನು ರಾಮ್​ ಗೋಪಾಲ್​ ವರ್ಮಾ ಬಹಿರಂಗಪಡಿಸಿದ್ದಾರೆ.​

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:22 am, Tue, 25 October 22

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ