AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakshana Serial: ಶ್ವೇತಾಳನ್ನು ಮನೆಗೆ ಕರೆತರುವ ನಿರ್ಧಾರಕ್ಕೆ ಭೂಪತಿಗೆ ಒಪ್ಪಿಗೆಯಿಲ್ಲ

ನೋಡಿ ಶ್ವೇತಾಗೂ ಅವರದೇ ಆದ ಮನೆ ಇದೆ, ತಂದೆ ತಾಯಿ ಇದ್ದಾರೆ. ಆಕೆ ನಮ್ಮ ಮನೆಗೆ ಬರುವುದು ಬೇಡ. ಅವಳಿಗೆ ವಠಾರದಲ್ಲಿ ಇರಲು ಆಗದಿದ್ದರೆ ಬೇರೆ ಮನೆ ಮಾಡಿ ಕೊಡೊಣಾ. ಇಲ್ಲಿಂದಲೇ ಸಹಾಯ ಮಾಡುವ ಆದರೆ ಶ್ವೇತಾ ನಮ್ಮ ಮನೆಗೆ ಬರುವುದು ಬೇಡ ಎಂದು ಅಮ್ಮನಿಗೆ ಭೂಪತಿ ಹೇಳುತ್ತಾನೆ.

Lakshana Serial: ಶ್ವೇತಾಳನ್ನು ಮನೆಗೆ ಕರೆತರುವ ನಿರ್ಧಾರಕ್ಕೆ ಭೂಪತಿಗೆ ಒಪ್ಪಿಗೆಯಿಲ್ಲ
Bhupathi does not agree with the decision to bring Shweta home
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Oct 25, 2022 | 12:19 PM

Share

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಲಕ್ಷಣ ಧಾರವಾಹಿಯು ವಿಭಿನ್ನ ಕಥಾಹಂದರದ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ. ದೇವಸ್ಥಾನದಲ್ಲಿ ಶ್ವೇತಾ ಮಾಡಿದರುವಂತಹ ರಾದ್ಧಂತವನ್ನು ನೆನೆದು ಈಕೆ ನಮ್ಮ ಮನೆಗೆ ಕಾಲಿಟ್ಟರೆ ನನ್ನ ಸಂಸಾರವನ್ನು ಖಂಡಿತವಾಗಿಯು ನಾಶ ಮಾಡುತ್ತಾಳೆ ಎಂದು ಮನದಲ್ಲೆ ಮಾತನಾಡಿಕೊಂಡಿರುತ್ತಾಳೆ. ಅಷ್ಟರಲ್ಲಿ ಭೂಪತಿ ಕೂಡಾ ಕೋಣೆಯೊಳಗೆ ಬರುತ್ತಾನೆ. ಅವನನ್ನು ಕಂಡು ಮನದಲ್ಲಿನ ದುಗುಡ ತಡೆಯಳಾರದೆ, ಅತ್ತೆ ಶ್ವೇತಾಳನ್ನು ಮನೆಗೆ ಕರೆತರಬೇಕು ಎಂದು ನಿರ್ಧಾರ ಮಾಡಿದ್ದಾರೆ.

ಅವಳು ಈ ಮನೆಗೆ ಬಂದರೆ ಮನೆ ನೆಮ್ಮದಿಯೇ ಹಾಳಗುತ್ತದೆ ಎಂದು ಹೇಳುವ ಸಂದರ್ಭದಲ್ಲಿ ಶಕುಂತಳಾದೇವಿ ಅವರ ಮಧ್ಯೆ ಬರುತ್ತಾರೆ. ನಕ್ಷತ್ರಳ ಮಾತಿಗೆ ಕೋಪಗೊಂಡು ನನ್ನ ಮಗನಿಗೆ ಛಾಡಿ ಹೇಳುತ್ತೀಯಾ, ನಿನಗೆ ಈ ಬುದ್ಧಿ ಬೇರೆ ಇದ್ಯಾ, ಶ್ವೇತಾ ನನ್ನ ಸೊಸೆ ಅವಳನ್ನು ಮನೆಗೆ ಕರೆದುಕೊಂಡು ಬರಲು ನನಗೆ ಯಾರ ಪರ್ಮಿಷನ್ ಕೂಡಾ ಅಗತ್ಯ ಇಲ್ಲ ಎಂದು ಶ್ವೇತಾಳನ್ನು ವಹಿಸಿಕೊಂಡು ಮಾತನಾಡುತ್ತಾರೆ.

ನಕ್ಷತ್ರ ಸತ್ಯ ಹೇಳ ಬಂದರು ಶ್ವೇತಾಳ ಮೇಲಿನ ಕುರುಡು ನಂಬಿಕೆಯಿಂದ ಆಕೆಯ ಮಾತನ್ನು ಕೇಳಲು ಶಕುಂತಳಾದೇವಿ ತಯಾರಿರುವುದಿಲ್ಲ. ನಕ್ಷತ್ರಳ ಮಾತನ್ನು ಕೇಳದಿದ್ದರೆ ಏನಂತೆ ತಾಯಿ ಮಗನ ಮಾತನ್ನು ಕೇಳಲೇ ಬೇಕಲ್ವಾ. ಭೂಪತಿಗೂ ಶ್ವೇತಾ ಅವರ ಮನೆಗೆ ಬರಲು ಇಷ್ಟ ಇರುವುದಿಲ್ಲ. ಕಡ್ಡಿ ಮುರಿದಂತೆ ಈ ಮಾತನ್ನು ಅಮ್ಮನ ಬಳಿ ಹೇಳುತ್ತಾನೆ. ನನಗೆ ಮದುವೆಯಾಗಿದೆ. ಹೀಗಿರುವಾಗ ಶ್ವೇತಾ ಮನೆಗೆ ಬಂದರೆ ನನ್ನ ಹೆಂಡತಿಗೆ ಮುಜುಗರ ಆಗುತ್ತಲ್ವಾ ಎಂದು ಹೇಳುತ್ತಾನೆ. ಇದಾದ ಬಳಿಕ ನನ್ನ ಮಗ ನಕ್ಷತ್ರಳ ಕಾರಣಕ್ಕೆ ಬದಲಾಗುತ್ತಿದ್ದಾನೆ ಎಂದು ಯೋಚನೆ ಮಾಡುತ್ತಾ ಕುಳಿತಿರುವ ಶಕುಂತಳಾದೇವಿ ಬಳಿ ಬಂದು ನಿಮ್ಮ ಜೊತೆ ಮಾತನಾಡಬೇಕು ಎಂದು ಭೂಪತಿ ಹೇಳುತ್ತಾನೆ.

ಇದನ್ನು ಓದಿ: Lakshana Serial: ಶ್ವೇತಾಳ ಕುತಂತ್ರಕ್ಕೆ ಪ್ರತಿತಂತ್ರ ಹೆಣೆದಿದ್ದಾಳೆ ನಕ್ಷತ್ರ, ಭಾರ್ಗವಿಯ ಗೆಜ್ಜೆ ರಹಸ್ಯ ಏನು?

ನಾನು ಯಾರಿಂದಲೂ ಪ್ರಭಾವ ಬೀರಿಲ್ಲ ಅಮ್ಮ. ನೋಡಿ ಶ್ವೇತಾಗೂ ಅವರದೇ ಆದ ಮನೆ ಇದೆ, ತಂದೆ ತಾಯಿ ಇದ್ದಾರೆ. ಆಕೆ ನಮ್ಮ ಮನೆಗೆ ಬರುವುದು ಬೇಡ. ಅವಳಿಗೆ ವಠಾರದಲ್ಲಿ ಇರಲು ಆಗದಿದ್ದರೆ ಬೇರೆ ಮನೆ ಮಾಡಿ ಕೊಡೊಣಾ. ಇಲ್ಲಿಂದಲೇ ಸಹಾಯ ಮಾಡುವ. ನೋಡಿ ಅಮ್ಮ ನನಗೂ ಈಗ ಮದುವೆ ಆಗಿದೆ ಮನೆಯಲ್ಲಿ ಹೆಂಡತಿ ಇದ್ದಾಳೆ. ಹೀಗಿರುವಾಗ ಶ್ವೇತಾಳನ್ನು ಮನೆಗೆ ಕರೆದುಕೊಂಡು ಬಂದರೆ ಅಕ್ಕ ಪಕ್ಕದ ಮನೆಯವರು ನಮ್ಮ ಬಗ್ಗೆ ಏನೆಲ್ಲಾ ಮಾತನಾಡಬಹುದು. ನಿಮ್ಮ ಬಗ್ಗೆನೂ ಏನೆಲ್ಲಾ ಮಾತನಾಡಬಹುದು, ನಮ್ಮ ಫ್ಯಾಮಿಲಿ ಬಗ್ಗೆನೂ ಇಲ್ಲಸಲ್ಲದ ಮಾತುಗಳನ್ನು ಆಡಿಕೊಳ್ಳಬಹುದು. ಇವಿಷ್ಟು ನನಗನಿಸಿದ್ದು ಅಮ್ಮ. ಇನ್ನು ನಿರ್ಧಾರ ನಿಮಗೆ ಬಿಟ್ಟಿದ್ದು ಎಂದು ಭೂಪತಿ ಅಮ್ಮನ ಬಳಿ ಹೇಳುತ್ತಾನೆ. ಭೂಪತಿಯ ಈ ಮಾತುಗಳನ್ನು ದೂರದಲ್ಲೇ ನಿಂತು ಕೇಳಿಸಿಕೊಂಡ ನಕ್ಷತ್ರ ತುಂಬಾ ಖುಷಿ ಪಡುತ್ತಾಳೆ. ಮಗನ ಮಾತಿಗಾದರೂ ಶ್ವೇತಾಳನ್ನು ಮನೆಗೆ ಕರೆತರುವ ನಿರ್ಧಾರವನ್ನು ಶಕುಂತಳಾದೇವಿ ಕೈ ಬಿಡುತ್ತಾರಾ ಎನ್ನುವುದನ್ನು ಮುಂದೆ ನೋಡಬೇಕಾಗಿದೆ. ಮಧುಶ್ರೀ

Published On - 12:19 pm, Tue, 25 October 22

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ