Lakshana Serial: ಶ್ವೇತಾಳ ಕುತಂತ್ರಕ್ಕೆ ಪ್ರತಿತಂತ್ರ ಹೆಣೆದಿದ್ದಾಳೆ ನಕ್ಷತ್ರ, ಭಾರ್ಗವಿಯ ಗೆಜ್ಜೆ ರಹಸ್ಯ ಏನು?

ಶ್ವೇತಾ ನಾನು ಹರಕೆ ತೀರಿಸಲ್ಲ ಎಂದು ಹೇಳುವಾಗ ಶಕುಂತಳಾದೇವಿ ಅಲ್ಲಿಗೆ ಬರುತ್ತಾರೆ, ಅವರು ಬಂದ ಮೇಲೆ ಶ್ವೇತಾ ತನ್ನೀರಿನ ಶುದ್ಧದಿಂದ ಹಿಡಿದು ಉರುಳು ಸೇವೆಯನ್ನು ಮಾಡುತ್ತಾಳೆ.

Lakshana Serial: ಶ್ವೇತಾಳ ಕುತಂತ್ರಕ್ಕೆ ಪ್ರತಿತಂತ್ರ ಹೆಣೆದಿದ್ದಾಳೆ ನಕ್ಷತ್ರ, ಭಾರ್ಗವಿಯ ಗೆಜ್ಜೆ ರಹಸ್ಯ ಏನು?
Lakshana Serial
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 23, 2022 | 11:01 AM

ಕಲರ್ಸ್ ಕನ್ನಡ ವಾಹಿನಿಯ ಲಕ್ಷಣ ಧಾರವಾಹಿ (Lakshana Serial) ವಿಶಿಷ್ಟ ಹಾಗೂ ಕುತೂಹಲಭರಿತ ಕಥೆಯಿಂದ ವಿಕ್ಷಕರಿಗೆ ತುಂಬಾನೇ ಹತ್ತಿರವಾಗಿದೆ. ಅತ್ತೆ ಶಕುಂತಳಾದೇವಿಯನ್ನು ಒಲಿಸಿಕೊಳ್ಳಲು ಸ್ವಂತ ಅಕ್ಕ ಅಂತನೂ ನೋಡದೆ ಸೃಷ್ಟಿಯ ಮೇಲೆ ಕೈ ಮಾಡಿದ್ದು ಮಾತ್ರವಲ್ಲದೆ, ಸೃಷ್ಟಿಗೆ ಶಕುಂತಳಾದೇವಿ ಕೈಯಿಂದ ಬೈಗುಳ ಸಿಗುವ ಹಾಗೆ ಮಾಡಿದ್ದಾಳೆ ಶ್ವೇತಾ. ಈಕೆಯ ಈ ಕುತಂತ್ರ ಬುದ್ಧಿಗೆ ಸರಿಯಾದ ಪಾಠ ಕಲಿಸಲು ನಕ್ಷತ್ರ ಹೊಸ ತಂತ್ರವೊಂದನ್ನು ರೂಪಿಸಿದ್ದಾಳೆ. ಅಮ್ಮನ ಹೆಸರಿನಲ್ಲಿ ಪೂಜೆ ಮಾಡಿಸುತ್ತೇನೆ ಎಂದು ಹೇಳಿ ಅತ್ತೆಯ ಮುಂದೆ ಅನುಕಂಪಗಿಟ್ಟಿಸಿಕೊಂಡಿದ್ದಾಳೆ ಅಲ್ವಾ, ಅವಳಿಗೆ ಸರಿಯಾದ ಪಾಠ ನಾನು ಕಲಿಸುತ್ತೇನೆ.

ಅಕ್ಕ ಬಾ ನೀನು ನನ್ನ ಜೊತೆ, ಎಂದು ಹೇಳಿ ಸೃಷ್ಟಿಯನ್ನು ದೇವಾಲಯದ ಒಳಗಡೆ ಕರೆದುಕೊಂಡು ಹೋಗುತ್ತಾಳೆ ನಕ್ಷತ್ರ. ಶಕುಂತಳಾದೇವಿ ಮತ್ತು ಶ್ವೇತಾ ದೇವರ ದರ್ಶನ ಪಡೆಯುತ್ತಿರುವಲ್ಲಿಗೆ ಹೋದ ನಕ್ಷತ್ರ, ಅಮ್ಮ ಬೇಗ ಗುಣಮುಖವಾದರೆ ಉರುಳು ಸೇವೆ ಮಾಡುತ್ತೇನೆ ಎಂದು ಹೇಳಿದ್ಯಲ್ವಾ, ಅದಕ್ಕೆ ತಾನೆ ನೀವು ದೇವಸ್ಥಾನಕ್ಕೆ ಬಂದದ್ದು ಅಕ್ಕ ನನಗೆ ಎಲ್ಲಾ ವಿಷಯನೂ ಹೇಳಿದ್ದಾಳೆ. ಬಾ ಶ್ವೇತಾ ಉರುಳು ಸೇವೆ ಮಾಡು ಎಂದು ಹೇಳುತ್ತಾಳೆ.

ಈ ಮಾತನ್ನು ಕೇಳಿದ ಶ್ವೇತಾ ಒಂದು ಕ್ಷಣ ದಂಗಾಗಿ ಬಿಡುತ್ತಾಳೆ. ನನ್ನ ಪ್ಲಾನ್ ನನಗೇನೆ ಉಲ್ಟಾ ಹೊಡಿತಾ ಎಂದು ಯೋಚಿಸುತ್ತಾಳೆ. ಈಕೆಯ ಮೇಲೆ ಕುರುಡು ನಂಬಿಕೆಯಿರುವ ಶಕುಂತಳಾದೇವಿ, ನೀನು ತುಂಬಾ ಒಳ್ಳೆಯವಳು ಶ್ವೇತಾ. ತಾಯಿಗಾಗಿ ಎಷ್ಟೆಲ್ಲಾ ಕಷ್ಟ ಪಡುತ್ತೀಯಾ, ನೀನು ತುಂಬಾ ಗ್ರೇಟ್ ಡಿಯರ್ ಎಂದು ಹೇಳಿ, ಹೋಗು ಹರಕೆ ತೀರಿಸಿಕೊಂಡು ಬಾ ನಾನು ಇಲ್ಲೇ ನಿಂತಿರುತ್ತೇನೆ ಎಂದು ಹೇಳುತ್ತಾರೆ. ನಕ್ಷತ್ರಳ ಮಾತನ್ನು ಅರಗಿಸಿಕೊಳ್ಳಲಾಗದೆ ನಿಂತಿದ್ದ ಶ್ವೇತಾ, ಶಕುಂತಳಾದೇವಿ ಹೇಳಿದರೂ ಹರಕೆ ತೀರಿಸಲು ಹೋಗೋದಿಲ್ಲಾ. ಸ್ವತಃ ನಕ್ಷತ್ರಳೇ ಅವಳನ್ನು ಹೊರಗಡೆ ಕರೆದುಕೊಂಡು ಹೋಗಿ ಅಮ್ಮನ ಹೆಸರು ಉಪಯೋಗಿಸಿಕೊಂಡು ಅತ್ತೆಯ ಸಿಂಪತಿ ಗಳಿಸಲು ನೋಡುತ್ತೀಯಾ, ನಿನ್ನ ತಂತ್ರಕ್ಕೆ ನನ್ನ ಪ್ರತಿತಂತ್ರ ಇದ್ದೇ ಇರುತ್ತದೆ ಎಂದು ಹೇಳಿ ಬಾ ತನ್ನೀರಲ್ಲಿ ಸ್ನಾನ ಮಾಡಿ ಶುದ್ಧ ಆಗು ಎಂದು ಹೇಳುತ್ತಾಳೆ.

ಇದನ್ನು ಓದಿ: Lakshana Serial: ಶಕುಂತಳಾದೇವಿಯನ್ನು ಒಲಿಸಿಕೊಳ್ಳಲು ದೇವಸ್ಥಾನದಲ್ಲಿ ಶ್ವೇತಾಳ ಹೈಡ್ರಾಮಾ

ಈಕೆಯ ಮಾತಿಗೆ ಒಪ್ಪದ ಶ್ವೇತಾ ನಾನು ಹರಕೆ ತೀರಿಸಲ್ಲ ಎಂದು ಹೇಳುವಾಗ ಶಕುಂತಳಾದೇವಿ ಅಲ್ಲಿಗೆ ಬರುತ್ತಾರೆ, ಅವರು ಬಂದ ಮೇಲೆ ಶ್ವೇತಾ ತನ್ನೀರಿನ ಶುದ್ಧದಿಂದ ಹಿಡಿದು ಉರುಳು ಸೇವೆಯನ್ನು ಮಾಡುತ್ತಾಳೆ. ನಕ್ಷತ್ರಳಿಗೆ ಶಾಪ ಹಾಕುತ್ತಾ ಉರುಳು ಸೇವೆ ಮಾಡುತ್ತಾ ಹೇಗಾದರೂ ತನ್ನ ಹರಕೆಯನ್ನು ತೀರಿಸುತ್ತಾಳೆ. ಇದರಿಂದದರೂ ಆಕೆಯ ಮಾಡಿದ ಪಾಪಗಳಲ್ಲಿ ಎಳ್ಳಷ್ಟದರೂ ಪ್ರಾಯಶ್ಚಿತ ದೊರಕಬಹುದು. ಎಷ್ಟು ಉರುಳು ಸೇವೆ ಮಾಡಿದರೂ ಏನು ಪ್ರಯೋಜನ, ಆಕೆ ತನ್ನ ಹಳೆ ಚಾಲಿಯನ್ನು ಬಿಡಬೇಕಲ್ವಾ. ಇದೇ ಕಾರಣದಿಂದ ನಕ್ಷತ್ರ ಎಷ್ಟೇ ಗಟ್ಟಿಗಿತ್ತಿಯಾಗಿದ್ದರೂ ಹಾಗೂ ಶ್ವೇತಾಳ ತಂತ್ರಕ್ಕೆ ಪ್ರತಿತಂತ್ರ ಹೂಡಿ ಅವಳನ್ನು ಸೋಲಿಸಿದರೂ ಶ್ವೇತಾಳಿಂದ ತನ್ನ ಸಂಸಾರ ಹಾಳಗಬಹುದು ಎಂಬ ಭಯ ಇದ್ದೇ ಇದೆ.

ಶಕುಂತಳಾದೇವಿಯ ಬೆಂಬಲ ಯಾವತ್ತಿದ್ರೂ ಅದು ಶ್ವೇತಾಳಿಗೆ ಮಾತ್ರ. ಇದೇ ಕಾರಣದಿಂದ ನಕ್ಷತ್ರ ಭಯ ಪಡುತ್ತಿರುವುದು. ದುರಹಂಕಾರಿ ಶ್ವೇತಾಳ ಬಣ್ಣ ಯಾವಾಗ ಬಯಲಾಗುತ್ತೋ, ನಕ್ಷತ್ರ ಒಳ್ಳೆಯವಳು ಅವಳೇನು ತಪ್ಪು ಮಾಡಿಲ್ಲ ಎಂಬುದು ಶಕುಂತಳಾದೇವಿಗೆ ಯಾವಾಗ ಅರಿವಾಗುತ್ತದೋ ಎಂಬ ಕಥೆಯನ್ನು ಮುಂದೆ ನೋಡಬೇಕಾಗಿದೆ.

ಭರತನಾಟ್ಯದ ಗೆಜ್ಜೆಯ ಹಿಂದಿರುವ ರಹಸ್ಯವಾದರೂ ಏನು?

ಭಾರ್ಗವಿ ಭರತನಾಟ್ಯದ ಗೆಜ್ಜೆ ಹಾಗೂ ಸೀರೆಯನ್ನು ಕೈಯಲ್ಲಿ ಹಿಡಿದುಕೊಂಡು, ಗೆಜ್ಜೆಯ ಸದ್ದನ್ನು ಕೇಳುತ್ತಾ ಕಣ್ಣೀರು ಹಾಕುತ್ತಾ ವಾಸನೆ, ಒಂದೊಂದು ವಾಸನೆಯಲ್ಲೂ ನೆನಪುಗಳಿವೆ ಹಳೆಯ ನೆನಪುಗಳ ವಾಸನೆ, ಬದುಕು ಬರಡಾದ ಘಳಿಗೆಯ ವಾಸನೆ, ನಾನು ಯಾವುದನ್ನು ಮರೆತರೂ ಇದನ್ನು ಮಾತ್ರ ಮರೆಯೋಕೆ ಆಗಲ್ಲ. 25 ವರ್ಷಗಳ ಹಿಂದೆ ನಡೆದ ಘಟನೆ ಇನ್ನೂ ನನ್ನ ಕಣ್ಣ ಮುಂದೆ ಹಾಗೆ ಇದೆ ಎಂದು ಹೇಳಿ ಕೋಪದಲ್ಲಿ ನಿಂತಿರುತ್ತಾಳೆ.

ಭಾರ್ಗವಿಗೆ ಅಪಾರವಾಗಿ ನೋವುಂಟಾದ ಆ ಘಟನೆ ಯಾವುದು, ಇದೇ ಕಾರಣಕ್ಕ ಚಂದ್ರಶೇಖರ್ ಮೇಲೆ ದ್ವೇಷ ಇರುವಂತಹದ್ದು, ಈ ಎಲ್ಲಾ ಸಂಗತಿ ಮುಂದೆ ಬರುವ ಸಂಚಿಕೆಗಳಲ್ಲಿ ಗೋತ್ತಾಗಬೇಕಿದೆ. ಮಧುಶ್ರೀ

Published On - 1:34 pm, Sat, 22 October 22