ತಾನೇ ಎಲ್ಲಾ ಎಂದು ಮೆರೆಯುತ್ತಿದ್ದ ಸಾನಿಯಾಳ ಎಂ.ಡಿ. ಪಟ್ಟ ಹೊರಟೇ ಹೋಯ್ತು; ಇದು ಹರ್ಷನ ರಿವೇಂಜ್

ಅರೆಸ್ಟ್ ಆದ ಕೆಲವೇ ಹೊತ್ತಿಗೆ ಹರ್ಷ ರಿಲೀಸ್ ಆಗಿದ್ದ. ದೂರನ್ನು ಸಾನಿಯಾಳೇ ಸುಟ್ಟು ಹಾಕಿದ್ದರಿಂದ ಹರ್ಷನನ್ನು ಬಿಡುಗಡೆ ಮಾಡಲಾಯಿತು. ಈಗ ಹರ್ಷನ ಸರದಿ.

ತಾನೇ ಎಲ್ಲಾ ಎಂದು ಮೆರೆಯುತ್ತಿದ್ದ ಸಾನಿಯಾಳ ಎಂ.ಡಿ. ಪಟ್ಟ ಹೊರಟೇ ಹೋಯ್ತು; ಇದು ಹರ್ಷನ ರಿವೇಂಜ್
ಸಾನಿಯಾ-ಹರ್ಷ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 22, 2022 | 6:30 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
Image
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು

ಶೈಲಿ: ಫ್ಯಾಮಿಲಿ ಡ್ರಾಮಾ. ರತ್ನಮಾಲಾ ಮಾಲಾ ಸಂಸ್ಥೆಯ ಒಡತಿ. ಆಕೆಯ ಆಸ್ತಿ ಹೊಡೆಯಬೇಕು ಎಂದು ಹಿರಿ ಸೊಸೆ ಸಾನಿಯಾ ಕಣ್ಣು ಹಾಕಿದ್ದಾಳೆ. ಆದರೆ, ಈ ಆಸ್ತಿಯನ್ನು ಆಕೆ ಬರೆದಿದ್ದು ಭುವಿಗೆ. ಮಗ ಹರ್ಷ ಹಾಗೂ ಸೊಸೆ ಎಂದರೆ ರತ್ನಮಾಲಾಗೆ ಅಚ್ಚುಮೆಚ್ಚು.

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು? ಸಾನಿಯಾಳನ್ನು ಕೆಲಸದಿಂದ ತೆಗೆಯಲೇಬೇಕು ಎಂದು ಹರ್ಷ ಪ್ಲ್ಯಾನ್ ರೂಪಿಸಿದ್ದ. ಈ ಮೂಲಕ ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎನ್ನುವ ಹಠಕ್ಕೆ ಬಿದ್ದಿದ್ದ. ಇತ್ತ, ವರುಧಿನಿ ಹರ್ಷ ಹಾಗೂ ಭುವಿಗೆ ವಿಚ್ಛೇದನ ಕೊಡಿಸುವ ಆಲೋಚನೆಯಲ್ಲಿದ್ದಳು.

ಕನ್ನಡತಿ’ ಧಾರಾವಾಹಿಯಲ್ಲಿ ಈಗ ಫ್ಯಾಮಿಲಿ ಡ್ರಾಮಾ ಹೈಲೈಟ್ ಆಗುತ್ತಿದೆ. ರತ್ನಮಾಲಾ ಕಟ್ಟಿದ ಮಾಲಾ ಸಂಸ್ಥೆಯ ಎಂಡಿ ಪಟ್ಟಕ್ಕಾಗಿ ಮನೆಯವರ ಮಧ್ಯೆಯೇ ಕಲಹ ಶುರುವಾಗಿದೆ. ಈ ಹುದ್ದೆಗಾಗಿ ಎಲ್ಲರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಸಾನಿಯಾ ಹಠ ಹಿಡಿದು ಈ ಹುದ್ದೆಗೆ ಏರಿದ್ದಳು. ರಾತ್ರಿ ಬೆಳಗಾಗುವುದರೊಳಗೆ ಈ ಪಟ್ಟ ಸಾನಿಯಾ ಕೈಯಲ್ಲಿ ಇತ್ತು. ಆದರೆ, ಈಗ ಕಾಲ ಬದಲಾಗಿದೆ. ಹರ್ಷ ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡಿದ್ದ. ಆದರೆ, ಈಗ ಆತ ಇದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಸಾನಿಯಾ ವಿರುದ್ಧ ದ್ವೇಷಕ್ಕೆ ಬಿದ್ದಿದ್ದಾನೆ. ಆತ ಸಾನಿಯಾಳನ್ನು ಎಂ.ಡಿ. ಪಟ್ಟದಿಂದ ಕಿತ್ತೆಸಿದಿದ್ದಾನೆ. ಅಷ್ಟೇ ಅಲ್ಲ ಆ ಹುದ್ದೆಗೆ ತಾನೇ ಏರಿದ್ದಾನೆ.

ಭುವಿಯನ್ನು ಕೆಲಸದಿಂದ ತೆಗೆಯಬೇಕು ಎಂದು ಸಾನಿಯಾ ಹಠ ಹಿಡಿದಿದ್ದಳು. ಹಲವು ಪಿತೂರಿಗಳನ್ನು ಮಾಡಿ ಆ ಕೆಲಸದಲ್ಲಿ ಯಶಸ್ವಿ ಆಗಿದ್ದಳು. ಭುವಿ ಕೆಲಸ ಹೋಗುವುದರ ಹಿಂದೆ ಸಾನಿಯಾ ಕೈವಾಡ ಇದೆ ಎಂಬ ವಿಚಾರ ತಿಳಿದ ಹರ್ಷ ಆಕೆಯ ಹಣೆಗೆ ಗನ್ ಇಟ್ಟಿದ್ದ. ಒಂದು ಬುಲೆಟ್ ಗೋಡೆಗೂ ಹಾರಿತ್ತು. ಈ ವಿಚಾರದಲ್ಲಿ ಸಾಕಷ್ಟು ರಂಪಾಟ ಸೃಷ್ಟಿ ಆಗಿತ್ತು. ‘ತನಗೆ ಜೀವ ಬೆದರಿಕೆ ಇದೆ. ಹರ್ಷ ಕೊಲ್ಲೋಕೆ ಪ್ರಯತ್ನಿಸಿದ್ದ’ ಎಂದು ಸಾನಿಯಾ ದೂರು ನೀಡಿದ್ದಳು. ಈ ದೂರು ಕೆಲಸ ಮಾಡಿತ್ತು. ಹರ್ಷ ಅರೆಸ್ಟ್​ ಆಗಿದ್ದ.

ಅರೆಸ್ಟ್ ಆದ ಕೆಲವೇ ಹೊತ್ತಿಗೆ ಹರ್ಷ ರಿಲೀಸ್ ಆಗಿದ್ದ. ದೂರನ್ನು ಸಾನಿಯಾಳೇ ಸುಟ್ಟು ಹಾಕಿದ್ದರಿಂದ ಹರ್ಷನನ್ನು ಬಿಡುಗಡೆ ಮಾಡಲಾಯಿತು. ಈಗ ಹರ್ಷನ ಸರದಿ. ಆತ ರಿವೇಂಜ್ ತೀರಿಸಿಕೊಳ್ಳೋಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ. ಪ್ರಮುಖ ವಕೀಲರನ್ನು ಕರೆಸಿ, ಕಂಪೆನಿಯ ನಿಯಮಗಳ ಪ್ರಕಾರವೇ ಸಾನಿಯಾಳನ್ನು ತೆಗೆಸಿ, ತಾನೇ ಎಂಡಿ ಆಗಿದ್ದಾನೆ.

ಹರ್ಷನಿಗೆ ಗೊತ್ತಾಗಲಿದೆ ಅಸಲಿ ವಿಚಾರ?

ರತ್ನಮಾಲಾಗೆ ತೊಂದರೆ ಇಲ್ಲ ಎಂಬ ಕಾರಣ ನೀಡಿ ತಾನೇ ಎಲ್ಲಾ ಜವಾಬ್ದಾರಿಗಳನ್ನು ಹರ್ಷ ವಹಿಸಿಕೊಂಡಿದ್ದಾನೆ. ‘ರತ್ನಮಾಲಾಗೆ ಅನಾರೋಗ್ಯ ಕಾಡಿದೆ. ಇಂತಹ ಸಂದರ್ಭದಲ್ಲಿ ಅವರು ಯಾರ ಹೆಸರಿಗೆ ವಿಲ್ ಬರೆದಿಡುತ್ತಾರೋ ಅವಳು ಈ ಜವಾಬ್ದಾರಿ ವಹಿಸಿಕೊಳ್ಳಬೇಕು. ಒಂದೊಮ್ಮೆ ಅವರು ವಿಲ್ ಬರೆದಿಲ್ಲ ಎಂದಾದರೆ ಅವರ ಮಗನಿಗೆ ಈ ಅಧಿಕಾರ ಸೇರಬೇಕು’ ಎಂದು ವಕೀಲರು ಹೇಳಿದ್ದಾರೆ. ಹೀಗಾಗಿ ತಾನೇ ಎಂಡಿ ಪಟ್ಟಕ್ಕೇರಿದ್ದಾನೆ. ಭುವಿ ಹೆಸರಿಗೆ ರತ್ನಮಾಲಾ ಆಸ್ತಿ ಬರೆದಿಟ್ಟಿದ್ದಾಳೆ ಎಂಬ ವಿಚಾರ ಯಾರಿಗೂ ತಿಳಿದಿಲ್ಲ. ಈಗ ಹರ್ಷ ತೆಗೆದುಕೊಂಡಿರುವ ನಿರ್ಧಾರದಿಂದ ಅಸಲಿ ವಿಚಾರ ಗೊತ್ತಾಗಬಹುದು.

ಮಾಲಾ ಸಂಸ್ಥೆಗೆ ಎಂಡಿಯಾಗಿ ಭುವಿಯನ್ನು ನೇಮಕ ಮಾಡಲು ರತ್ನಮಾಲಾ ನಿರ್ಧರಿಸಿದ್ದಾಳೆ. ಇದು ಹರ್ಷನಿಗೆ ಗೊತ್ತಿಲ್ಲ. ಒಂದೊಮ್ಮೆ ಗೊತ್ತಾದರೆ ಆತ ಹೇಗೆ ಪ್ರತಿಕ್ರಿಯೆ ನೀಡಬಹುದು ಎಂಬುದು ವೀಕ್ಷಕರ ಊಹೆ. ತನಗೆ ಬಿಟ್ಟು ಭುವಿ ಹೆಸರಿಗೆ ತಾಯಿ ಆಸ್ತಿ ಬರೆದಿದ್ದಾಳೆ ಎಂದರೆ ಆತನಿಗೆ ಸಹಿಸಿಕೊಳ್ಳಲು ಆಗದೆ ಇರಬಹುದು.

ವರುಧಿನಿ ಹೊಸ ಪ್ಲ್ಯಾನ್

ಹರ್ಷ ಹಾಗೂ ಭುವಿಗೆ ವಿಚ್ಛೇದನ ಕೊಡಿಸಬೇಕು ಎಂದು ವರುಧಿನಿ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ಮದುವೆ ರಿಜಿಸ್ಟ್ರೇಷನ್ ಹೆಸರಲ್ಲಿ ವಿಚ್ಛೇದನದ ಪತ್ರವನ್ನು ಜತೆಗಿಟ್ಟು ಡಿವೋರ್ಸ್ ಕೊಡಿಸೋ ಪ್ಲ್ಯಾನ್​ನಲ್ಲಿ ಆಕೆ ಇದ್ದಾಳೆ. ಸ್ವಲ್ಪ ಹೆಚ್ಚು ಕಡಿಮೆ ಆದರೂ ವರುಧಿನಿಗೆ ಸಂಕಷ್ಟ ಎದುರಾಗೋದು ಗ್ಯಾರಂಟಿ.

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM