AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ

ಹರ್ಷ ದುಡುಕಿನ ಸ್ವಭಾವದವನು. ಇತ್ತೀಚೆಗೆ ಆತ ನಡೆದುಕೊಂಡ ರೀತಿಗೆ ಇಡೀ ಮನೆ ಅಲ್ಲೋಲ ಕಲ್ಲೋಲವಾಗಿದೆ. ಸಾನಿಯಾ ಹಣೆಗೆ ಗನ್​ ಇಟ್ಟಿದ್ದನು ಹರ್ಷ. ಗನ್​ನಿಂದ ಹಾರಿದ ಬುಲೆಟ್ ಗೋಡೆಗೆ ಅಂಟಿತ್ತು. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
ಹರ್ಷ-ರತ್ನಮಾಲಾ
TV9 Web
| Edited By: |

Updated on: Oct 11, 2022 | 7:00 AM

Share

ಕನ್ನಡತಿ’ (Kannadathi Serial) ಧಾರವಾಹಿಯಲ್ಲಿ ಕೌಟುಂಬಿಕ ವಿಚಾರ ಹೈಲೈಟ್ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಒಂದೊಂದು ಪಾತ್ರ ಒಂದೊಂದು ರೀತಿಯಲ್ಲಿ ಮೂಡಿ ಬರುತ್ತಿದೆ. ಹರ್ಷ ಸದಾ ಸಿಟ್ಟು ಮಾಡುತ್ತಲೇ ಇರುವ ವ್ಯಕ್ತಿ. ಆತನ ಕೋಪ ಯಾರನ್ನು ಬೇಕಿದ್ದರೂ ಸುಟ್ಟು ಬಿಡಬಹುದು. ಆತನ ಪತ್ನಿ ಭುವನೇಶ್ವರಿ ಶಾಂತ ಸ್ವಭಾವದವಳು. ಆಕೆಗೆ ತಾಳ್ಮೆ ಹೆಚ್ಚು. ಈ ಕಾರಣಕ್ಕೆ ಅವಳು ವೀಕ್ಷಕರಿಗೆ ಸಾಕಷ್ಟು ಇಷ್ಟ ಆಗುತ್ತಾಳೆ. ಸಾನಿಯಾ ಸದಾ ಮಾಸ್ಟರ್ ಪ್ಲ್ಯಾನ್ ಮಾಡುತ್ತಲೇ ಇರುವವಳು. ಸಂಚು ರೂಪಿಸುವುದರಲ್ಲಿ ಆಕೆಯದ್ದು ಎತ್ತಿದ ಕೈ. ಮನೆಯ ಯಜಮಾನಿ ರತ್ನಮಾಲಾಳದ್ದು ಭುವನೇಶ್ವರಿ ರೀತಿಯದ್ದೇ ಸ್ವಭಾವ. ಆಕೆ ಸದಾ ಮಗನ ಬಗ್ಗೆಯೇ ಆಲೋಚಿಸುತ್ತಾಳೆ. ಈಗ ಆಕೆಗೆ ಹರ್ಷನ ಬಗ್ಗೆ ಚಿಂತೆ ಕಾಡುತ್ತಿದೆ. ಮುಂದೇನು ಎನ್ನುವ ಪ್ರಶ್ನೆಯನ್ನು ಆಕೆ ಕೇಳಿಕೊಳ್ಳುತ್ತಿದ್ದಾಳೆ.

ಹರ್ಷ ದುಡುಕಿನ ಸ್ವಭಾವದವನು. ಇತ್ತೀಚೆಗೆ ಆತ ನಡೆದುಕೊಂಡ ರೀತಿಗೆ ಇಡೀ ಮನೆ ಅಲ್ಲೋಲ ಕಲ್ಲೋಲವಾಗಿದೆ. ಸಾನಿಯಾ ಹಣೆಗೆ ಗನ್​ ಇಟ್ಟಿದ್ದನು ಹರ್ಷ. ಗನ್​ನಿಂದ ಹಾರಿದ ಬುಲೆಟ್ ಗೋಡೆಗೆ ಅಂಟಿತ್ತು. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹರ್ಷನ ವರ್ತನೆ ರತ್ನಮಾಲಾಗೆ ಇಷ್ಟವಾಗಿಲ್ಲ. ಆಕೆ ಹರ್ಷನ ವಿರುದ್ಧ ಕೂಗಾಡಿದ್ದಾಳೆ. ಇದು ಹರ್ಷನಿಗೆ ಇಷ್ಟವಾಗಿಲ್ಲ. ಸಾನಿಯಾ ತಪ್ಪು ಮಾಡಿದ್ದರೂ ತನ್ನ ತಾಯಿ ನನಗೆ ಏಕೆ ಬಯ್ಯುತ್ತಾಳೆ ಅನ್ನೋ ಗೊಂದಲ ಹರ್ಷನನ್ನು ಕಾಡುತ್ತಿದೆ.

ಸಾನಿಯಾಳನ್ನು ಕೆಲಸದಿಂದ ಇಳಿಸುವ ಬಗ್ಗೆ ರತ್ನಮಾಲಾ ಯಾವಾಗೋ ನಿರ್ಧರಿಸಿ ಆಗಿದೆ. ‘ಸಾನಿಯಾ ನಡೆದುಕೊಂಡ ರೀತಿ ನನಗೆ ಅಚ್ಚರಿ ಎನಿಸಿಲ್ಲ. ಆಕೆ ಅಧಿಕಾರದಲ್ಲಿ ಮುಂದುವರಿಯುವವಳು ಅಲ್ಲವೇ ಅಲ್ಲ. ತನ್ನ ಪಾಪದ ಕೊಡಕ್ಕೆ ಮತ್ತೊಂದಷ್ಟು ಪಾಪವನ್ನು ಆಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾಳೆ’ ಎಂದು ರತ್ನಮಾಲಾ ತನ್ನ ಗೆಳತಿ ಬಳಿ ಹೇಳಿಕೊಂಡಿದ್ದಾಳೆ. ಆಕೆಗೆ ಅಚ್ಚರಿ ಎನಿಸಿದ್ದು ಹರ್ಷನ ನಡೆ. ಹರ್ಷನ ವರ್ತನೆ ಬಗ್ಗೆ ಆಕೆಗೆ ಅತೀವವಾಗಿ ಚಿಂತೆ ಕೂಡ ಕಾಡುತ್ತಿದೆ.

ಇದನ್ನೂ ಓದಿ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

‘ಹರ್ಷ ಬದಲಾಗಿದ್ದಾನೆ ಎಂದು ಭಾವಿಸಿದ್ದೆ. ಆದರೆ, ಆತ ಬದಲಾಗಿಲ್ಲ. ಆತ ಯಾಕೆ ಈ ರೀತಿ ಮಾಡುತ್ತಿದ್ದಾನೆ ಅನ್ನೋದು ನನಗೆ ನಿಜಕ್ಕೂ ತಿಳಿಯುತ್ತಿಲ್ಲ. ಹರ್ಷ ಕಲಿಯೋದು ಸಾಕಷ್ಟಿದೆ. ಅದನ್ನು ಆತ ಭುವಿಯಿಂದನೇ ಕಲಿಯಬೇಕು. ಎಲ್ಲಾ ಆಸ್ತಿ ಭುವಿ ಹೆಸರಿಗೆ ಬರೆದಾಗ ನನಗೆ ಪಾಪಪ್ರಜ್ಞೆ ಕಾಡುತ್ತಿತ್ತು. ಆದರೆ, ಹರ್ಷ ನಡೆದುಕೊಂಡ ರೀತಿಯಿಂದ ನನಗೆ ಒಂದು ವಿಚಾರ ಖಚಿತವಾಗಿದೆ. ನಾನು ತೆಗೆದುಕೊಂಡ ನಿರ್ಧಾರ ಸರಿ ಇದೆ’ ಎಂದು ರತ್ನಮಾಲಾ ತನ್ನ ಗೆಳತಿಗೆ ಹೇಳಿದ್ದಾಳೆ.

ಕ್ಷಮೆ ಕೇಳ್ತಾನೆ ಹರ್ಷ?

ಮನೆಗೆ ಬಂದ ಜರ್ನಲಿಸ್ಟ್ ಮೇಲೆ ಹರ್ಷ ಕೂಗಾಡಿದ್ದ. ಕ್ಯಾಮೆರಾಮೆನ್​​ ಅನ್ನು ತಳ್ಳಿದ್ದ. ಈ ಕಾರಣಕ್ಕೆ ಪತ್ರಕರ್ತೆಗೆ ಹರ್ಷ ಕ್ಷಮೆ ಕೇಳಬೇಕು ಎಂಬುದು ರತ್ನಮಾಲಾ ಆಶಯ. ಈ ಕಾರಣಕ್ಕೆ ಮನೆಯಿಂದ ಹೊರಗೆ ಹೋದ ಪತ್ರಕರ್ತೆ ಹಾಗೂ ಕ್ಯಾಮೆರಾ ಪರ್ಸನ್​​ ಅನ್ನು ರತ್ನಮಾಲಾ ಮತ್ತೆ ಕರೆಸಿದ್ದಾಳೆ.

‘ಈ ಮೊದಲು ನಡೆದಂತೆ ಯಾವುದೂ ನಡೆಯುವುದಿಲ್ಲ. ನಿಮಗೆ ಸಂದರ್ಶನ ಕೊಡೋಕೆ ನಾನು ನಿಮ್ಮನ್ನು ಇಲ್ಲಿಗೆ ಕರೆಸಿಲ್ಲ. ಹರ್ಷನಿಂದ ನಾನು ನಿಮಗೆ ಕ್ಷಮೆ ಕೇಳಿಸಬೇಕಿದೆ. ಹೀಗಾಗಿ, ನಿಮ್ಮನ್ನು ನಾನು ಕರೆಸಿದೆ. ಹರ್ಷ ನಿಮ್ಮ ಬಳಿ ಕ್ಷಮೆ ಕೇಳ್ತಾನೆ’ ಎಂದು ರತ್ನಮಾಲಾ ಹೇಳಿದ್ದಾಳೆ. ಈ ಮಾತನ್ನು ಕೇಳಿ ಪತ್ರಕರ್ತೆಗೆ ಆಶ್ಚರ್ಯವಾಗಿದೆ. ಹರ್ಷ ನಿಜಕ್ಕೂ ಕ್ಷಮೆ ಕೇಳ್ತಾನ ಅನ್ನೋದು ಸದ್ಯದ ಕುತೂಹಲ.

ಶ್ರೀಲಕ್ಷ್ಮಿ ಎಚ್.