AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನುಬಂಧ’ ಕಾರ್ಯಕ್ರಮದಲ್ಲಿ ಅವಾರ್ಡ್ ಗೆದ್ದ ವಂಶಿಕಾಳ ಸಂತಸ ಹೇಗಿತ್ತು ನೋಡಿ

ಈ ಮೊದಲೇ ಅವಾರ್ಡ್ ಫಂಕ್ಷನ್ ನಡೆದಿತ್ತು. ಈ ಕಾರ್ಯಕ್ರಮ ಅಕ್ಟೋಬರ್ 7, 8 ಹಾಗೂ 9ರಂದು ಪ್ರಸಾರ ಕಂಡಿದೆ. ಈ ಫಂಕ್ಷನ್​​ನಲ್ಲಿ ವಂಶಿಕಾ ಅವಾರ್ಡ್ ಗೆದ್ದಿದ್ದಾಳೆ.

‘ಅನುಬಂಧ’ ಕಾರ್ಯಕ್ರಮದಲ್ಲಿ ಅವಾರ್ಡ್ ಗೆದ್ದ ವಂಶಿಕಾಳ ಸಂತಸ ಹೇಗಿತ್ತು ನೋಡಿ
vanshika
TV9 Web
| Edited By: |

Updated on: Oct 10, 2022 | 4:45 PM

Share

ನಟ, ನಿರೂಪಕ ಮಾಸ್ಟರ್ ಆನಂದ್ (Master Anand) ಮಗಳು ವಂಶಿಕಾ (Vanshika) ಕಶ್ಯಪ್  ರಾಜ್ಯಾದ್ಯಂತ ಫುಲ್ ಫೇಮಸ್. ಸಖತ್ ಚೂಟಿಯಾಗಿ ಮಾತನಾಡುವ ಅವಳನ್ನು ಕಂಡರೆ ಎಲ್ಲರಿಗೂ ಸಖತ್ ಇಷ್ಟ. ಅವಳ ಮಾತನ್ನು ಇಷ್ಟಪಡದವರೇ ಇಲ್ಲ. ಅವಳು ನಿರೂಪಣೆಗೆ ಇಳಿದರಂತೂ ಮುಗಿಯಿತು, ವೀಕ್ಷಕರು ನಗುವಿನ ಅಲೆಯಲ್ಲಿ ತೆಲೋದು ಗ್ಯಾರಂಟಿ. ಈಗ ‘ಅನುಬಂಧ’ ಕಾರ್ಯಕ್ರಮದಲ್ಲಿ ವಂಶಿಕಾ ಅವಾರ್ಡ್ ಗೆದ್ದಿದ್ದಾಳೆ. ಈ ಖುಷಿಯ ಕ್ಷಣದ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

ಕಲರ್ಸ್ ಕನ್ನಡ ವಾಹಿನಿ ಪ್ರತಿ ವರ್ಷ ‘ಅನುಬಂಧ’ ಅವಾರ್ಡ್ ಕಾರ್ಯಕ್ರಮ ಆಯೋಜನೆ ಮಾಡುತ್ತದೆ. ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ನಟಿಸುವ ಕಲಾವಿದರಿಗೆ ಇದೊಂದು ರೀತಿಯಲ್ಲಿ ಕುಟುಂಬದ ಕಾರ್ಯಕ್ರಮ ಇದ್ದಂತೆ. ಈ ಮೊದಲೇ ಅವಾರ್ಡ್ ಫಂಕ್ಷನ್ ನಡೆದಿತ್ತು. ಈ ಕಾರ್ಯಕ್ರಮ ಅಕ್ಟೋಬರ್ 7, 8 ಹಾಗೂ 9ರಂದು ಪ್ರಸಾರ ಕಂಡಿದೆ. ಈ ಫಂಕ್ಷನ್​​ನಲ್ಲಿ ವಂಶಿಕಾ ಅವಾರ್ಡ್ ಗೆದ್ದಿದ್ದಾಳೆ.

ಇದನ್ನೂ ಓದಿ
Image
ಕಿರುತೆರೆಯಿಂದ ಹಿರಿತೆರೆಗೆ ಮಾಸ್ಟರ್ ಆನಂದ್ ಮಗಳು ವಂಶಿಕಾ; ಮಾತಿನ ಮಲ್ಲಿಗೆ ಸಿನಿಮಾ ಆಫರ್
Image
‘ನನ್ನಮ್ಮ ಸೂಪರ್​ ಸ್ಟಾರ್​’ ವಿನ್ನರ್​ ವಂಶಿಕಾ-ಯಶಸ್ವಿನಿ; ಟ್ರೋಫಿ ಜೊತೆ ಸಿಕ್ಕಿರುವ ಬಹುಮಾನದ ಹಣ ಎಷ್ಟು?
Image
ರಶ್ಮಿಕಾ ರೀತಿಯಲ್ಲಿ ಸೂಪರ್ ಆಗಿ​ ಡಾನ್ಸ್ ಮಾಡಿದ ವಂಶಿಕಾ; ‘ಪುಷ್ಪ ಪಾರ್ಟ್​ 10’ನಲ್ಲಿ ನೀನೇ ಇರ್ತೀಯಾ ಎಂದ ಸೃಜನ್
Image
‘ಮಗಳು ವಂಶಿಕಾಳಿಂದ ಜನರು ನನ್ನನ್ನು ಮತ್ತೆ ಪ್ರೀತಿಸುತ್ತಿದ್ದಾರೆ’; ಮಾಸ್ಟರ್​ ಆನಂದ್ ಭಾವುಕ ನುಡಿ

ವಂಶಿಕಾಗೆ ‘ಜನ ಮೆಚ್ಚಿದ ಹೊಸ ಪರಿಚಯ’ (NON-FICTION) (ನನ್ನಮ್ಮ ಸೂಪರ್ ಸ್ಟಾರ್) ಅವಾರ್ಡ್ ಸಿಕ್ಕಿದೆ. ನಟಿ ಆಶಿಕಾ ರಂಗನಾಥ್ ಅವರು ಈ ಅವಾರ್ಡ್​ ಅನ್ನು ವಂಶಿಕಾಗೆ ನೀಡಿದ್ದಾರೆ. ವಂಶಿಕಾ ಇನ್ನೂ ಚಿಕ್ಕವಳು. ಇಷ್ಟು ಸಣ್ಣ ವಯಸ್ಸಿಗೆ ಅವರು ದೊಡ್ಡ ಮಟ್ಟದ ಜನಪ್ರಿಯೆ ಪಡೆದಿದ್ದಾಳೆ.

‘ನನ್ನಮ್ಮ ಸೂಪರ್​ ಸ್ಟಾರ್​ 2’ಗೆ ವಂಶಿಕಾ ನಿರೂಪಕಿ

‘ಕಲರ್ಸ್​ ಕನ್ನಡ’ ವಾಹಿನಿಯ ‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಆಕೆಗೆ ಭರಪೂರ ಜನಪ್ರಿಯತೆ ಸಿಕ್ಕಿತು. ಆ ಬಳಿಕ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲೂ ವಂಶಿಕಾ ಧೂಳೆಬ್ಬಿಸಿದಳು. ಈ ಎರಡೂ ಶೋಗಳನ್ನು ವಿನ್​ ಆಗಿರುವ ಆಕೆಗೆ ಈಗ ನಿರೂಪಕಿಯಾಗಿ ಬಡ್ತಿ ಸಿಗುತ್ತಿದೆ! ಹೌದು, ‘ನನ್ನಮ್ಮ ಸೂಪರ್​ ಸ್ಟಾರ್​ 2’ ನಿರೂಪಣೆ ಮಾಡಲು ವಂಶಿಕಾ ಸಜ್ಜಾಗುತ್ತಿದ್ದಾಳೆ. ಶೀಘ್ರದಲ್ಲೇ ಈ ಶೋ ಆರಂಭ ಆಗಲಿದೆ. ವಂಶಿಕಾಗೆ ನಿರಂಜನ್​ ದೇಶಪಾಂಡೆ ಸಾಥ್​ ನೀಡಲಿದ್ದಾರೆ.

‘ನನ್ನಮ್ಮ ಸೂಪರ್​ ಸ್ಟಾರ್​’ ಮೊದಲ ಸೀಸನ್​ ಅನ್ನು ನಟಿ ಅನುಪಮಾ ಗೌಡ ನಿರೂಪಣೆ ಮಾಡಿದ್ದರು. ಆದರೆ ಈಗ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಸ್ಪರ್ಧಿಯಾಗಿದ್ದಾರೆ. ಅವರು ದೊಡ್ಮನೆಗೆ ಎಂಟ್ರಿ ನೀಡಿರುವುದರಿಂದ ‘ನನ್ನಮ್ಮ ಸೂಪರ್​ ಸ್ಟಾರ್ 2​’ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಸ್ಥಾನಕ್ಕೆ ವಂಶಿಕಾ ಮತ್ತು ನಿರಂಜನ್​ ದೇಶಪಾಂಡೆ ಬಂದಿದ್ದಾರೆ.

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!