ಹೊಂಗನಸು: ಪಕ್ಕದಲ್ಲೇ ಕುಳಿತು ಲೆಕ್ಕ ಹೇಳಿಕೊಟ್ಟ ರಿಷಿ; ವಸೂಧರಾ ಎದೆಯಲ್ಲಿ ಢವ ಢವ

Honganasu Serial Update: ಗೌತಮ್ ತನ್ನ ಪ್ರೀತಿಯನ್ನು ವಸೂಧರಾಗೆ ಹೇಳುವುದು ಹೇಗೆ ಎಂದು ಒದ್ದಾಡುತ್ತಿದ್ದ. ಆಕೆಗೆ ಹೇಗಾದರೂ ಮಾಡಿ ಪ್ರಪೋಸ್ ಮಾಡಲೇ ಬೇಕೆಂದು ಕಾಲೇಜಿಗೆ ಹೊರಟ.

ಹೊಂಗನಸು: ಪಕ್ಕದಲ್ಲೇ ಕುಳಿತು ಲೆಕ್ಕ ಹೇಳಿಕೊಟ್ಟ ರಿಷಿ; ವಸೂಧರಾ ಎದೆಯಲ್ಲಿ ಢವ ಢವ
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 11, 2022 | 9:45 AM

ಜಗತಿಗೆ ತನ್ನ ಮನೆಯಿಂದ ಹೊರ ಹೋಗುವಂತೆ ಸ್ವತಃ ಮಹೇಂದ್ರನೇ ಹೇಳಿದ. ಪತಿಯ ಮಾತು ಕೇಳಿ ಶಾಕ್ ಆದ ಜಗತಿ ಮರು ಮಾತಾಡದೇ ಮನೆಯಿಂದ ಹೊರ ನಡೆದಳು. ಮಹೇಂದ್ರನೇ ಪತ್ನಿಯನ್ನು ಆಕೆಯ ಮನೆಗೆ ಸೇರಿಸಿದ. ಆದರೆ ಜಗತಿ ಮೇಡಂನ ಮನೆಯಿಂದ ಹೊರ ಹೋಗುವಂತೆ ಮಹೇಂದ್ರ ಸರ್ ಯಾಕೆ ಹೇಳಿದರು ಎನ್ನುವ ಗೊಂದಲದಲ್ಲಿದ್ದಾಳೆ ವಸೂಧರಾ. ಈ ಬಗ್ಗೆ ಮಹೇಂದ್ರ ಬಳಿ ಕೇಳಿದಳು. ಮಹೇಂದ್ರ ತನ್ನ ಮನದಲ್ಲಿದ್ದ ಮಾತನ್ನು ವಸೂಧರಾ ಮುಂದೆ ಹೇಳಿಕೊಂಡ. ಜಗತಿ ಗರ್ವದಿಂದ, ಗೌರವದಿಂದ ಮನೆಯಲ್ಲಿ ತಲೆ ಎತ್ತಿ  ಓಡಾಡಬೇಕು. ರಿಷಿ, ಜಗತಿಯನ್ನು ತಾಯಿ ಎಂದು ಒಪ್ಪಿಕೊಳ್ಳಬೇಕು. ಆಗ ಮಾತ್ರ ಜಗತಿ ಆ ಮನೆಯಲ್ಲಿ ಇರಲು ಸಾಧ್ಯ ಎಂದು ಹೇಳಿದ. ಜಗತಿ ತನ್ನ ಪುತ್ರ ರಿಷಿಗೆ ಸರ್ ಅಂತ ಕರೆಯುವಾಗ ಎಷ್ಟು ನೋವಾಗುತ್ತೆ ಗೊತ್ತಾ ಎಂದು ಮಹೇಂದ್ರ ತನ್ನ ನೋವನ್ನು ಹೊರಹಾಕಿದ.

ಇತ್ತ ರಿಷಿ ಕೂಡ ಜಗತಿ ಮತ್ತು ವಸೂಧರಾ ಇಬ್ಬರೂ ದಿಢೀರ್ ಮನೆಯಿಂದ ಹೊರ ಹೋದ ಬಗ್ಗೆ ಯೋಚಿಸುತ್ತಿದ್ದ. ಅಷ್ಟೊತ್ತಿಗೆ ಧರಣಿಯನ್ನು ನೋಡಿದ ರಿಷಿ ‘ತುಂಬಾ ಡಲ್ ಆಗಿದ್ದೀರಾ ಅತ್ತಿಗೆ ಯಾಕೆ’ ಎಂದು ಕೇಳಿದ. ಅದಕ್ಕೆ ಧರಣಿ ‘ಅಂದುಕೊಳ್ಳದೆ ಇರೋ ಸಂತೋಷ ಹೀಗೆ ಬಂದು ಹೋಯಿತು’ ಎಂದು ಹೇಳಿದಳು. ಅತ್ತಿಗೆಯ ಮಾತು ರಿಷಿಯ ಮನ ಚುಚ್ಚಿತು. ಅಷ್ಟರಲ್ಲೇ ರಿಷಿ ಜಗತಿ ಇದ್ದ ಮನೆಗೆ ಎಂಟ್ರಿ ಕೊಟ್ಟ.

ರಿಷಿ ಎಂಟ್ರಿ ಜಗತಿಗೆ ಅಚ್ಚರಿ ಮೂಡಿಸಿತು. ಆದರೆ ರಿಷಿ ತನ್ನ ತಂದೆಗೆ ಮಾತ್ರೆ ಕೊಡಲೆಂದು ಬಂದಿದ್ದ. ತಂದೆಗೆ ಮಾತ್ರೆ ನೀಡಿದ ರಿಷಿ ಈ ನಡುವೆ ನಿಮ್ಮನ್ನು ನೀವು ನೋಡಿಕೊಳ್ಳುತ್ತಿಲ್ಲ. ಹೇಳದೆ ಕೇಳದೆ ಹೊರಗೆ ಬರ್ತೀರಾ ಎಂದು ಜಗತಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ. ಇದಕ್ಕೆ ತಿರುಗೇಟು ನೀಡಿದ ಮಹೇಂದ್ರ ನನಗೂ ಬೇಕಾದವರೂ ಇದ್ದಾರೆ ಎಂದು ಹೇಳಿದ. ಬಳಿಕ ರಿಷಿ, ‘ನೀವು ಬರುವವರೆಗೂ ಕಾರಲ್ಲೇ ಕಾಯುತ್ತಿರುತ್ತೇನೆ’ ಎಂದು ಹೇಳಿ ಜಗತಿ ಮನೆಯಲ್ಲಿ ಕೂರದೇ ಹೊರಟು ಹೋದ.

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ಮನೆಗೆ ಬಂದ ರಿಷಿ ತಂದೆ ಬಳಿ ‘ನಿಮಗೆ ಕೇಳಿದ್ದನ್ನೆಲ್ಲ ಕೊಡಲು ಸಾಧ್ಯವಾಗದೇ ಇರಬಹುದು ಆದರೆ ಒಂಟಿತನ ಕಮ್ಮಿ ಮಾಡಬಹುದು’ ಎಂದು ಹೇಳಿದ. ಆದರೆ ಮಹೇಂದ್ರ ತನಗೆ ಒಂಟಿತನ ಅಭ್ಯಾಸವಾಗಿದೆ ಎಂದು ಹೇಳಿ ಮಲಗಿದ. ಮತ್ತೊಂದೆಡೆ ಗೌತಮ್ ತನ್ನ ಪ್ರೀತಿಯನ್ನು ವಸೂಧರಾಳಿಗೆ ಹೇಳುವುದು ಹೇಗೆ ಎಂದು ಒದ್ದಾಡುತ್ತಿದ್ದ. ವಸೂಧರಾಳಿಗೆ ಹೇಗಾದರೂ ಮಾಡಿ ಪ್ರಪೋಸ್ ಮಾಡಲೇ ಬೇಕೆಂದು ಗೌತಮ್ ಗೆಳೆಯ ರಿಷಿ ಜೊತೆ ಕಾಲೇಜಿಗೆ ಹೊರಟ.

ರಿಷಿ ಕಾಲೇಜಿಗೆ ಎಂಟ್ರಿ ಕೊಡುತ್ತಿದ್ದಂತೆ ವಸೂಧರಾಳನ್ನು ನೋಡಿದ. ಮ್ಯಾತ್ಸ್ ಪ್ರಾಬ್ಲಮ್ ಬಗೆಹರಿಸಲು ಆಗದೆ ಒದ್ದಾಡುತ್ತಿದ್ದಳು. ವಸೂಧರಾ ಪಕ್ಕದಲ್ಲೇ ಕುಳಿತು ರಿಷಿ ಲೆಕ್ಕ ಹೇಳಿಕೊಟ್ಟ. ಆದರೆ ವಸೂಧರಾ ತನ್ನದೇ ಲೋಕದಲ್ಲಿ ತೇಲುತ್ತಿದ್ದಳು. ವಸೂಧರಾಳನ್ನು ನೋಡಿದ ರಿಷಿ, ‘ಎಲ್ಲಿ ಕಳೆದು ಹೋಗಿದಿಯಾ, ನಾನು ಹೇಳಿಕೊಟ್ಟ ಲೆಕ್ಕ ಆರ್ಥ ಆಯಿತಾ’ ಎಂದು ಕೇಳಿದ. ವಸೂಧರಾ ಇಲ್ಲ ಎಂದು ಹೇಳಿದಳು. ಅಷ್ಟರಲ್ಲೇ ಕ್ಲಾಸ್ ಪ್ರಾರಂಭ ಆಯಿತು ಎಂದು ರಿಷಿ ಹೊರಟು ಹೋದ. ಇತ್ತ ಗೌತಮ್ ಪ್ರಪೋಸ್ ಮಾಡಲು ಕಾಯುತ್ತಿದ್ದಾನೆ. ಈ ಬಾರಿಯಾದರೂ ವಸೂಧರಾಗೆ ತನ್ನ ಪ್ರೀತಿಯನ್ನು ಹೇಳುತ್ತಾನಾ? ವಸೂಧರಾ ರಿಯಾಕ್ಷನ್ ಹೇಗಿರುತ್ತೆ ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ