‘ಭಾಷೆ ಬತ್ತಳಿಕೆ ಇಟ್ಕೊಂಡು ಆಡಿದ್ರೆ ನಿಮಗೆ ಒಳ್ಳೆಯದಾಗಲ್ಲ’; ರೂಪೇಶ್ ರಾಜಣ್ಣಗೆ ಸಂಬರ್ಗಿ ಎಚ್ಚರಿಕೆ
ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಹಲವು ವಿಚಾರಕ್ಕೆ ಜಗಳ ಆಗಿದ್ದೂ ಇದೆ. ಈಗ ಭಾಷೆ ವಿಚಾರಕ್ಕೆ ರೂಪೇಶ್ ಹಾಗೂ ಪ್ರಶಾಂತ್ ಮಧ್ಯೆ ಕಿತ್ತಾಟ ನಡೆದಿದೆ.
ರೂಪೇಶ್ ರಾಜಣ್ಣ (Roopesh Rajanna) ಅವರು ಕನ್ನಡ ಪರ ಹೋರಾಟದ ಮೂಲಕ ಗುರುತಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಹಾಗೂ ಆಂದೋಲನಗಳ ಮೂಲಕ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ರೂಪೇಶ್ ರಾಜಣ್ಣ ಅವರಿಂದ ಆಗಿತ್ತು. ಈಗ ಬಿಗ್ ಬಾಸ್ ಮನೆಯಲ್ಲೂ ಅವರು ಇದೇ ವಿಚಾರಕ್ಕೆ ಗುರುತಿಸಿಕೊಳ್ಳುತ್ತಿದ್ದಾರೆ. ದೊಡ್ಮನೆಯಲ್ಲಿ ಯಾರಾದರೂ ಬೇರೆ ಭಾಷೆ ಮಾತನಾಡಿದರೆ ಆ ಬಗ್ಗೆ ಧ್ವನಿ ಎತ್ತುತ್ತಾರೆ ರೂಪೇಶ್. ಈ ಬಗ್ಗೆ ಅವರು ಟೀಕೆಗೆ ಒಳಗಾದ ಉದಾಹರಣೆ ಕೂಡ ಇದೆ. ಈಗ ರೂಪೇಶ್ ರಾಜಣ್ಣ ಅವರು ಪ್ರಶಾಂತ್ ಸಂಬರ್ಗಿಯಿಂದ ಎಚ್ಚರಿಕೆ ಪಡೆದಿದ್ದಾರೆ. ಇಬ್ಬರ ನಡುವೆ ಸಿಕ್ಕಾಪಟ್ಟೆ ಹೀಟ್ ಅಲ್ಲಿ ಚರ್ಚೆ ನಡೆದಿದೆ.
ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿದ್ದಾರೆ. ಮನೆಯಿಂದ ಹೊರಗೆ ಆ್ಯಕ್ಟೀವ್ ಇದ್ದಷ್ಟು ಇಲ್ಲಿ ಆ್ಯಕ್ಟೀವ್ ಆಗಿಲ್ಲ. ಇದನ್ನು ಸ್ವತಃ ರೂಪೇಶ್ ಕೂಡ ಒಪ್ಪಿಕೊಂಡಿದ್ದಾರೆ. ಇನ್ನು, ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಹಲವು ವಿಚಾರಕ್ಕೆ ಜಗಳ ಆಗಿದ್ದೂ ಇದೆ. ಈಗ ಭಾಷೆ ವಿಚಾರಕ್ಕೆ ರೂಪೇಶ್ ಹಾಗೂ ಪ್ರಶಾಂತ್ ಮಧ್ಯೆ ಕಿತ್ತಾಟ ನಡೆದಿದೆ.
ರೂಪೇಶ್ ರಾಜಣ್ಣ ಅವರು ಪ್ರಶಾಂತ್ ಸಂಬರ್ಗಿ ಬಳಿ ಬಂದು ‘ನನ್ನಲ್ಲಿ ಏನಾದರೂ ಬದಲಾವಣೆ ಆಗಬೇಕೇ’ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಪ್ರಶಾಂತ್ ಸಂಬರ್ಗಿ, ‘ನಿಮ್ಮ ಬಳಿ ಇರೋದು ಒಂದೇ ಅಸ್ತ್ರ. ಅದು ಭಾಷೆಯ ಅಸ್ತ್ರ. ಬಿಗ್ ಬಾಸ್ ಮನೆಯಲ್ಲಿರುವ ಎಲ್ಲರಿಗೂ ಕನ್ನಡದ ಮೇಲೆ ಪ್ರೀತಿ ಇದೆ’ ಎಂದಿದ್ದಾರೆ. ಇದನ್ನು ಕೇಳಿ ರೂಪೇಶ್ ರಾಜಣ್ಣ ಸಿಟ್ಟಾಗಿದ್ದಾರೆ. ಇಬ್ಬರ ಮಧ್ಯೆ ಈ ವಿಚಾರವಾಗಿ ಚರ್ಚೆ ನಡೆದಿದೆ.
ಇದನ್ನೂ ಓದಿ: ನೀತಿ ಪಾಠ, ಹೋರಾಟದ ವಿಚಾರಕ್ಕೆ ಬೇಸರಗೊಂಡ ಸ್ಪರ್ಧಿಗಳು; ‘ಬಿಗ್ ಬಾಸ್’ನಲ್ಲಿ ಕಳಪೆ ಆದ ರೂಪೇಶ್ ರಾಜಣ್ಣ
‘ಭಾಷೆ ಬತ್ತಳಿಕೆ ಇಟ್ಕೊಂಡು ಆಡಿದ್ರೆ ನಿಮಗೆ ಒಳ್ಳೆಯದಾಗಲ್ಲ. ಇಷ್ಟು ಮಾತ್ರ ಹೇಳೋಕೆ ಆಗೋದು’ ಎಂದು ಪ್ರಶಾಂತ್ ಸಂಬರ್ಗಿ ಅವರು ರೂಪೇಶ್ ರಾಜಣ್ಣಗೆ ನೇರವಾಗಿ ಹೇಳಿದ್ದಾರೆ. ಈ ಮೊದಲು ಕೂಡ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಕಿತ್ತಾಟ ನಡೆದಿತ್ತು. ಅದೂ ಭಾಷೆ ವಿಚಾರಕ್ಕೆ ಅನ್ನೋದು ವಿಚಿತ್ರ. ಈ ವಾರದ ಎಲಿಮಿನೇಷನ್ಗೆ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಇಬ್ಬರೂ ನಾಮಿನೇಟ್ ಆಗಿದ್ದಾರೆ.