BBK9: ‘ರಾಕೇಶ್​ ಎಲ್ಲ ಸುಖ ಅನುಭವಿಸ್ತಾನೆ, ಆದ್ರೆ ಅದನ್ನು ಅನುಭವಿಸುವ ಶಕ್ತಿ ನನಗಿಲ್ಲ’: ಆರ್ಯವರ್ಧನ್​

Aryavardhan Guruji | Rakesh Adiga: ‘ರೂಮ್​ ಅಂದ್ರೆ ಅರ್ಥ ಮಾಡಿಕೊಳ್ಳಿ ಸರ್​’ ಅಂತ ಆರ್ಯವರ್ಧನ್​ ಹೇಳಿದಾಗ, ‘ನೇರವಾಗಿ ಹೇಳಿ’ ಎಂದು ರಾಕೇಶ್ ಒತ್ತಾಯಿಸಿದರು.​ ಗುರೂಜಿ ಹೇಳಿದ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

BBK9: ‘ರಾಕೇಶ್​ ಎಲ್ಲ ಸುಖ ಅನುಭವಿಸ್ತಾನೆ, ಆದ್ರೆ ಅದನ್ನು ಅನುಭವಿಸುವ ಶಕ್ತಿ ನನಗಿಲ್ಲ’: ಆರ್ಯವರ್ಧನ್​
ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ
Follow us
TV9 Web
| Updated By: ಮದನ್​ ಕುಮಾರ್​

Updated on: Oct 10, 2022 | 2:35 PM

ಸಂಖ್ಯಾಶಾಸ್ತ್ರದ ಮೂಲಕ ಗುರುತಿಸಿಕೊಂಡ ಆರ್ಯವರ್ಧನ್​ ಗುರೂಜಿ (Aryavardhan Guruji) ಅವರಿಗೆ ಬಿಗ್​ ಬಾಸ್​ ಮನೆಯಲ್ಲಿ ಬೇರೆಯದೇ ಇಮೇಜ್​ ಸಿಕ್ಕಿದೆ. ಮೊದಲು ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ಸ್ಪರ್ಧಿಸಿ ಫಿನಾಲೆವರೆಗೂ ಬಂದ ಅವರು ನಂತರ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ಕ್ಕೆ (Bigg Boss Kannada Season 9) ಎಂಟ್ರಿ ಪಡೆದುಕೊಂಡರು. ಅವರ ವ್ಯಕ್ತಿತ್ವವೇ ಡಿಫರೆಂಟ್​ ಆಗಿದೆ. ಅದು ದೊಡ್ಮನೆಯ ಎಲ್ಲರಿಗೂ ನಗು ಉಕ್ಕಿಸುತ್ತಿದೆ. ಬಿಗ್​ ಬಾಸ್​ ಹೇಳುವುದೇ ಒಂದು, ಆದರೆ ಆರ್ಯವರ್ಧನ್​ ಅರ್ಥ ಮಾಡಿಕೊಳ್ಳುವುದೇ ಮತ್ತೊಂದು. ಆ ಕಾರಣದಿಂದ ಅವರ ಫನ್ನಿ ಎನಿಸುತ್ತಾರೆ. ಕಿಚ್ಚ ಸುದೀಪ್​ (Kichcha Sudeep) ನಡೆಸಿಕೊಡುವ ‘ಸೂಪರ್ ಸಂಡೇ ವಿತ್​ ಸುದೀಪ’ ಸಂಚಿಕೆಯ​ ಯೆಸ್​ ಅಥವಾ ನೋ ಸುತ್ತಿನಲ್ಲಿ ಪ್ರತಿ ಬಾರಿ ಆರ್ಯವರ್ಧನ್​ ಅವರು ಏನೇನೋ ಉತ್ತರ ನೀಡಿ ನಗು ಉಕ್ಕಿಸುತ್ತಾರೆ. ಈ ವಾರವೂ (ಅ.9) ಅದು ಮುಂದುವರಿಯಿತು.

‘ನೀವು ಯಾರಂತೆ ಆಗಲು ಇಷ್ಟಪಡುವುದಿಲ್ಲ’ ಎಂದು ಸುದೀಪ್​ ಪ್ರಶ್ನೆ ಕೇಳಿದರು. ಆಗ ಅನೇಕರಿಂದ ಬೇರೆ ಬೇರೆ ಉತ್ತರ ಬಂದವು. ‘ಪ್ರಶಾಂತ್​ ಸಂಬರ್ಗಿ ಆಗಲು ನಾವು ಇಷ್ಟಪಡುವುದಿಲ್ಲ’ ಎಂದು ಅನೇಕರು ಹೇಳಿದರು. ಅದಕ್ಕೆ ಸೂಕ್ತ ಕಾರಣವನ್ನೂ ನೀಡಿದರು. ‘ನಾನು ರಾಕೇಶ್​ ರೀತಿ ಆಗಲ್ಲ’ ಎಂದು ಆರ್ಯವರ್ಧನ್​ ಹೇಳಿದರು. ಆದರೆ ಅದಕ್ಕೆ ಅವರು ನೀಡಿದ ಕಾರಣ ಮಾತ್ರ ಸಿಕ್ಕಾಪಟ್ಟೆ ಫನ್ನಿ ಆಗಿತ್ತು.

‘ರಾಕೇಶ್​ ಎಲ್ಲ ಸುಖವನ್ನೂ ಅನುಭವಿಸುತ್ತಾನೆ. ಆದರೆ ನನಗೆ ಅಷ್ಟೊಂದು ಶಕ್ತಿ ಇಲ್ಲ. ಅವನು ನನ್ನ ಬಳಿ ಪರ್ಸನಲ್​ ಆಗಿ ಹೇಳಿಕೊಂಡ ಮಾತನ್ನೆಲ್ಲ ನಾನು ಇಲ್ಲ ಹೇಳೋಕೆ ಆಗಲ್ಲ. ಅಷ್ಟು ಓಪನ್​ ಆಗಿ ಮಾತನಾಡಿದ್ದಾನೆ. ಒಂದು ವಾರ ನಾನು ಮತ್ತು ಅವನು ಫ್ರೀ ಆಗಿ ಇದ್ದಾಗ, ರೂಮಲ್ಲಿ ಒಂದಷ್ಟು ವಿಚಾರ ಹಂಚಿಕೊಂಡಿದ್ವಿ. ಅವನು ಹೇಳಿದ್ದು ಕೇಳಿದ್ರೆ ಭಯ ಆಗತ್ತೆ. ರೂಮ್​ ಅಂದ್ರೆ ಅರ್ಥ ಮಾಡಿಕೊಳ್ಳಿ. ಎಲ್ಲವನ್ನೂ ಇಲ್ಲಿ ಹೇಳೋಕೆ ಕಷ್ಟ ಆಗತ್ತೆ. ಅದನ್ನೆಲ್ಲ ಅವನು ಮರೆತಿರಬಹುದು. ನಾನು ಮರೆತಿಲ್ಲ’ ಎಂದು ಆರ್ಯವರ್ಧನ್ ಹೇಳಿದರು.

ಇದನ್ನೂ ಓದಿ
Image
‘ಬಿಗ್ ಬಾಸ್ ಕನ್ನಡ ಸೀಸನ್ 9’ ಸೇರಿದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ
Image
ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬೈಕ್ ರೇಸರ್ ಐಶ್ವರ್ಯಾ, ‘ಮಂಗಳಗೌರಿ ಮದುವೆ’ ಖ್ಯಾತಿಯ ಕಾವ್ಯಶ್ರೀ
Image
ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್​; ಇವರ ವಿಶೇಷತೆಗಳೇನು?
Image
ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ

ಎಷ್ಟೇ ಬಾಯಿ ಬಿಡಿಸಿದರೂ ರಾಕೇಶ್​ ಹೇಳಿಕೊಂಡಿದ್ದ ಆ ಮಾತು ಏನು ಎಂಬುದನ್ನು ಆರ್ಯವರ್ಧನ್​ ಬಹಿರಂಗಪಡಿಸಲಿಲ್ಲ. ‘ನೇರವಾಗಿ ಹೇಳಿ’ ಎಂದು ಸ್ವತಃ ರಾಕೇಶ್​ ಹೇಳಿದರೂ ಕೂಡ ಆರ್ಯವರ್ಧನ್ ಬಾಯಿ ಬಿಡಲಿಲ್ಲ. ಒಟ್ಟಿನಲ್ಲಿ ಅವರ ಮಾತುಗಳನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

ತಾವು ಆರ್ಯವರ್ಧನ್​ ರೀತಿ ಆಗಲ್ಲ ಎಂದು ಅನೇಕರು ಹೇಳಿದ್ದಾರೆ. ಕಾವ್ಯಶ್ರೀ ಗೌಡ, ಅರುಣ್ ಸಾಗರ್, ವಿನೋದ್​ ಗೊಬ್ಬರಗಾಲ, ರಾಕೇಶ್​ ಮುಂತಾದವರ ಕಡೆಯಿಂದ ಈ ಅಭಿಪ್ರಾಯ ಬಂತು. ‘ಇವರಿಗೆ ಗ್ರಹಗತಿ, ನಕ್ಷತ್ರ ಎಲ್ಲ ಅರ್ಥ ಆಗತ್ತೆ. ಆದ್ರೆ ಟಾಸ್ಕ್​ ಅರ್ಥ ಆಗಲ್ಲ ಅಂದ್ರೆ ಹೆಂಗೆ?’ ಎಂದು ರಾಕೇಶ್​ ಪ್ರಶ್ನಿಸಿದರು. ಹಾಗಾಗಿ ತಾವು ಆರ್ಯವರ್ಧನ್​ ರೀತಿ ಆಗಲು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ