ಚಿಕ್ಕಚಿಕ್ಕ ವಿಚಾರಕ್ಕೂ ಕಿರಿಕ್; ರೂಪೇಶ್-ಸಾನ್ಯಾ ಓಟಕ್ಕೆ ಹಿನ್ನಡೆ ಆಗುತ್ತಾ ಅಸಮಾಧಾನ?

ಒಬ್ಬರನ್ನು ಬಿಟ್ಟು ಒಬ್ಬರು ತಿಂಡಿ ತಿಂದ ವಿಚಾರಕ್ಕೆ, ಊಟ ಮಾಡಿದ ವಿಚಾರಕ್ಕೆ ಕಿತ್ತಾಟ ಆಗುತ್ತಿದೆ. ಈ ವೇಳೆ ಇಬ್ಬರೂ ಅಸಮಾಧಾನ ಹೊರಹಾಕಿದ್ದಾರೆ. ಈಗ ಸೆಪ್ಟೆಂಬರ್ 24ರ ಎಪಿಸೋಡ್​ನಲ್ಲೂ ಇದು ಮುಂದುವರಿದಿದೆ.

ಚಿಕ್ಕಚಿಕ್ಕ ವಿಚಾರಕ್ಕೂ ಕಿರಿಕ್; ರೂಪೇಶ್-ಸಾನ್ಯಾ ಓಟಕ್ಕೆ ಹಿನ್ನಡೆ ಆಗುತ್ತಾ ಅಸಮಾಧಾನ?
ರೂಪೇಶ್​-ಸಾನ್ಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 24, 2022 | 9:13 PM

ಸಾನ್ಯಾ ಐಯ್ಯರ್ (Sanya Iyer) ಹಾಗೂ ರೂಪೇಶ್ ಶೆಟ್ಟಿ ಇಬ್ಬರೂ ‘ಬಿಗ್ ಬಾಸ್​ ಒಟಿಟಿ’ಯಿಂದ (Bigg Boss OTT) ಎಲ್ಲರ ಗಮನ ಸೆಳೆಯುತ್ತಾ ಬರುತ್ತಿದ್ದಾರೆ. ಇವರ ಪ್ರಯಾಣ ಟಿವಿ ಸೀಸನ್​ನಲ್ಲೂ ಮುಂದುವರಿದಿದೆ. ಇಬ್ಬರ ಕೆಮಿಸ್ಟ್ರಿ ಅನೇಕರಿಗೆ ಇಷ್ಟವಾಗಿದೆ. ಇವರ ಹೆಸರಲ್ಲಿ ಅನೇಕ ಅಭಿಮಾನಿ ಬಳಗ ಕೂಡ ಹುಟ್ಟಿಕೊಂಡಿದೆ. ಆದರೆ, ಇತ್ತೀಚೆಗೆ ಇವರು ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಇವರ ಓಟಕ್ಕೆ ಅಸಮಾಧಾನವೇ ಹಿನ್ನಡೆ ಉಂಟು ಮಾಡಬಹುದು ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

ಬಿಗ್ ಬಾಸ್​ನಲ್ಲಿ ರೂಪೇಶ್ ಹಾಗೂ ಸಾನ್ಯಾ ನಡುವೆ ಯೋಚನೆಗಳು ಹೊಂದಿಕೆ ಆದವು. ಹೀಗಾಗಿ ಇಬ್ಬರೂ ಕ್ಲೋಸ್ ಆದರು. ಇಬ್ಬರ ನಡುವಿನ ರಿಲೇಶನ್​ಶಿಪ್ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವದಂತಿ ಹಬ್ಬಿದ್ದೂ ಇದೆ. ಆದರೆ, ಈ ವಿಚಾರದಲ್ಲಿ ಈ ಜೋಡಿ ಅನೇಕ ಬಾರಿ ಸ್ಪಷ್ಟನೆ ನೀಡಿದೆ. ‘ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ. ಇದನ್ನು ಹೊರತುಪಡಿಸಿ ಬೇರೇನು ಇಲ್ಲ’ ಎಂಬ ಹೇಳಿಕೆಯನ್ನು ಇವರು ಸಾಕಷ್ಟು ಬಾರಿ ನೀಡಿದ್ದಾರೆ. ರೂಪೇಶ್ ಅವರಂತೂ ಈ ಬಗ್ಗೆ ಪದೇಪದೇ ಒತ್ತಿ ಹೇಳಿದ್ದಾರೆ. ಇತ್ತೀಚೆಗೆ ಇವರ ಮಧ್ಯೆ ಆಗಾಗ ಜಗಳ ಹುಟ್ಟಿಕೊಳ್ಳುತ್ತಲೇ ಇದೆ.

ಒಬ್ಬರನ್ನು ಬಿಟ್ಟು ಒಬ್ಬರು ತಿಂಡಿ ತಿಂದ ವಿಚಾರಕ್ಕೆ, ಊಟ ಮಾಡಿದ ವಿಚಾರಕ್ಕೆ ಕಿತ್ತಾಟ ಆಗುತ್ತಿದೆ. ಈ ವೇಳೆ ಇಬ್ಬರೂ ಅಸಮಾಧಾನ ಹೊರಹಾಕಿದ್ದಾರೆ. ಈಗ ಸೆಪ್ಟೆಂಬರ್ 24ರ ಎಪಿಸೋಡ್​ನಲ್ಲೂ ಇದು ಮುಂದುವರಿದಿದೆ. ಇದು ಪದೇಪದೇ ಮರುಕಳಿಸುತ್ತಿರುವುದು ಅನೇಕರಿಗೆ ಬೇಸರ ಮೂಡಿಸಿದೆ. ಈ ರೀತಿ ಆಗಬಾರದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ರೂಪೇಶ್ ಹಾಗೂ ಸಾನ್ಯಾ ತುಂಬಾನೇ ಆಪ್ತವಾಗಿದ್ದರು. ಈ ವಿಚಾರದಲ್ಲಿ ಸುದೀಪ್ ಅವರು ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದರು. ಈ ಘಟನೆ ರೂಪೇಶ್ ಶೆಟ್ಟಿ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಕೆಲವೊಂದು ವಿಚಾರದಲ್ಲಿ ಸಾನ್ಯಾ ಇಂದ ಅಂತರ ಕಾಯ್ದುಕೊಳ್ಳಲು ಅವರು ಪ್ರಯತ್ನಿಸಿದ್ದಿದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಚಿಕ್ಕಚಿಕ್ಕ ವಿಚಾರಕ್ಕೂ ಅಸಮಾಧಾನ ತೋಡಿಕೊಳ್ಳುವುದನ್ನು ಇವರು ತಿದ್ದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ರೂಪೇಶ್​ ರಾಜಣ್ಣಗೆ ನಿಯತ್ತಿದೆ, ಮೌಲ್ಯಗಳಿವೆ’; ಕೊನೆಗೂ ಒಪ್ಪಿಕೊಂಡ ಪ್ರಶಾಂತ್ ಸಂಬರ್ಗಿ

ರೂಪೇಶ್ ಹಾಗೂ ಸಾನ್ಯಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರಿಗೆ ಈಗ ಸಿಗುತ್ತಿರುವ ಬೆಂಬಲ ಹೀಗೆಯೇ ಮುಂದುವರಿದರೆ ಈ ಜೋಡಿ ಫಿನಾಲೆ ತಲುಪೋದು ಪಕ್ಕಾ ಎಂಬ ಅಭಿಪ್ರಾಯವೂ ಇದೆ. ಆದರೆ, ಈಗ ಇವರ ಓಟಕ್ಕೆ ಇವರೇ ಬ್ರೇಕ್ ಹಾಕಿಕೊಳ್ಳುತ್ತಿದ್ದಾರೆ.