ಡಿವೋರ್ಸ್​ ಪತ್ರಕ್ಕೆ ಸಹಿ ಹಾಕಿಯೇ ಬಿಟ್ಟ ಭುವಿ; ವರುಧಿನಿ ಸಂಚು ಯಶಸ್ವಿ

ಹರ್ಷ ಹಾಗೂ ಭುವಿಗೆ ವಿಚ್ಛೇದನ ಕೊಡಿಸಬೇಕು ಎಂಬುದು ವರುಧಿನಿಯ ಪ್ಲ್ಯಾನ್ ಆಗಿತ್ತು. ಈ ಪತ್ರಕ್ಕೆ ಸಹಿ ಹಾಕಿಸಬೇಕು ಎಂದು ವರುಧಿನಿ ಸಾಕಷ್ಟು ಪ್ರಯತ್ನ ಮಾಡಿದ್ದಳು. ಈಗ ಹೊಸ ಎಪಿಸೋಡ್​ನಲ್ಲಿ ವರುಧಿನಿ ಪ್ಲ್ಯಾನ್ ಯಶಸ್ವಿ ಆಗಿರುವುದನ್ನು ತೋರಿಸಿದ್ದಾರೆ.

ಡಿವೋರ್ಸ್​ ಪತ್ರಕ್ಕೆ ಸಹಿ ಹಾಕಿಯೇ ಬಿಟ್ಟ ಭುವಿ; ವರುಧಿನಿ ಸಂಚು ಯಶಸ್ವಿ
ಭುವಿ-ವರು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 27, 2022 | 6:18 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
Image
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು

ಶೈಲಿ: ಫ್ಯಾಮಿಲಿ ಡ್ರಾಮಾ. ರತ್ನಮಾಲಾ ಮಾಲಾ ಸಂಸ್ಥೆಯ ಒಡತಿ. ಆಕೆಯ ಆಸ್ತಿ ಹೊಡೆಯಬೇಕು ಎಂದು ಹಿರಿ ಸೊಸೆ ಸಾನಿಯಾ ಕಣ್ಣು ಹಾಕಿದ್ದಾಳೆ. ಆದರೆ, ಈ ಆಸ್ತಿಯನ್ನು ಆಕೆ ಬರೆದಿದ್ದು ಭುವಿಗೆ. ಮಗ ಹರ್ಷ ಹಾಗೂ ಸೊಸೆ ಎಂದರೆ ರತ್ನಮಾಲಾಗೆ ಅಚ್ಚುಮೆಚ್ಚು.

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು? ಹರ್ಷ ಹಾಗೂ ಭುವಿಗೆ ವಿಚ್ಛೇದನ ಕೊಡಿಸಬೇಕು ಎಂಬುದು ವರುಧಿನಿಯ ಪ್ಲ್ಯಾನ್ ಆಗಿತ್ತು. ಈ ಪತ್ರಕ್ಕೆ ಸಹಿ ಹಾಕಿಸಬೇಕು ಎಂದು ವರುಧಿನಿ ಸಾಕಷ್ಟು ಪ್ರಯತ್ನ ಮಾಡಿದ್ದಳು. ಈಗ ಹೊಸ ಎಪಿಸೋಡ್​ನಲ್ಲಿ ವರುಧಿನಿ ಪ್ಲ್ಯಾನ್ ಯಶಸ್ವಿ ಆಗಿರುವುದನ್ನು ತೋರಿಸಿದ್ದಾರೆ.

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಭುವಿಯನ್ನು ಚಿಕ್ಕ ವಯಸ್ಸಿಂದ ನೋಡುತ್ತಾ ಬರುತ್ತಿದ್ದಾಳೆ ವರುಧಿನಿ. ಇಬ್ಬರೂ ಕ್ಲೋಸ್​ಫ್ರೆಂಡ್ಸ್. ಈಗ ಹರ್ಷ ಹಾಗೂ ಭುವಿ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ವರುಧಿನಿ ಮಾಡುತ್ತಾ ಬರುತ್ತಿದ್ದಾಳೆ. ಹರ್ಷ ಹಾಗೂ ಭುವಿ ಅನ್ಯೋನ್ಯವಾಗಿ ಇರುವುದನ್ನು ಸಹಿಸಿಕೊಳ್ಳೋಕೆ ವರುಧಿನಿಗೆ ಸಾಧ್ಯವೇ ಆಗುತ್ತಿಲ್ಲ. ಈಗ ಇಬ್ಬರಿಗೂ ವಿಚ್ಛೇದನ ಕೊಡಿಸಬೇಕು ಎಂಬುದು ವರು ಪ್ಲ್ಯಾನ್. ಇದು ಒಂದು ಹಂತಕ್ಕೆ ಯಶಸ್ವಿಯಾಗಿದೆ. ಒಂದೇ ಏಟಲ್ಲಿ ಎರಡು ಹಕ್ಕಿಯನ್ನು ಆಕೆ ಹೊಡೆದು ಮುಗಿಸಿದ್ದಾಳೆ. ಅಸಲಿ ವಿಚಾರ ಗೊತ್ತಾದರೆ ವರು ವಿರುದ್ಧ ಹರ್ಷ ತಿರುಗಿ ಬೀಳೋದು ಪಕ್ಕಾ.

ಅಸಲಿಗೆ ಆಗಿದ್ದೇನು?

ಹರ್ಷನನ್ನು ವರು ಪ್ರೀತಿಸುತ್ತಿದ್ದಾಳೆ. ಭುವಿಯ ಜತೆ ಆತನ ಮದುವೆ ನೆರವೇರಿದೆ. ಆದಾಗ್ಯೂ ಹರ್ಷನ ಮೇಲೆ ಇರುವ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ. ದಿನ ಕಳೆದಂತೆ ಆತನ ಮೇಲೆ ವರುಗೆ ಪ್ರೀತಿ ಹೆಚ್ಚುತ್ತಲೇ ಇದೆ. ಭುವಿ ಹಾಗೂ ಹರ್ಷ ಒಟ್ಟಿಗೆ ಇರೋದನ್ನು ಸಹಿಸಿಕೊಳ್ಳೋಕೆ ಆಕೆಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಇಬ್ಬರಿಗೂ ವಿಚ್ಛೇದನ ಕೊಡಿಸಲೇಬೇಕು ಎಂಬ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ. ಇದಕ್ಕಾಗಿ ಆಕೆ ಪ್ಲ್ಯಾನ್ ಒಂದನ್ನು ಮಾಡಿದ್ದಳು. ಈ ಪ್ಲ್ಯಾನ್ ಈಗ ಯಶಸ್ವಿ ಆಗುವ ಸೂಚನೆ ಸಿಕ್ಕಿದೆ.

ನೋಂದಣಿಯ ಗಿಮಿಕ್

ಹರ್ಷ ಹಾಗೂ ಭುವಿಯ ಮದುವೆ ನಡೆದು ಕೆಲ ತಿಂಗಳು ಕಳೆದಿದೆ. ಆದರೆ, ಇವರ ಮದುವೆ ನೋಂದಣಿ ಕಾರ್ಯ ನಡೆದಿರಲಿಲ್ಲ. ಈ ಕಾರಣಕ್ಕೆ ವರುಧಿನಿಯೇ ಮುಂದೆ ನಿಂತು ಈ ಕೆಲಸವನ್ನು ಮಾಡಿದ್ದಾಳೆ. ಈ ವೇಳೆ ಆಕೆ ಗಿಮಿಕ್ ಒಂದನ್ನು ಮಾಡಿದ್ದಾಳೆ. ಮದುವೆ ನೋಂದಣಿ ಪತ್ರದ ಜತೆಗೆ ಡಿವೋರ್ಸ್​ ಪತ್ರಕ್ಕೂ ಸಹಿ ಹಾಕಿಸಿದ್ದಾಳೆ. ಇದನ್ನು ಇಟ್ಟುಕೊಂಡು ಭುವಿಯನ್ನು ಆಟ ಆಡಿಸೋ ಪ್ಲ್ಯಾನ್​ನಲ್ಲಿ ಆಕೆ ಇದ್ದಾಳೆ. ಒಂದೊಮ್ಮೆ ಹರ್ಷನಿಗೆ ಅಸಲಿ ವಿಚಾರ ಗೊತ್ತಾದರೆ ವರುಧಿನಿಯ ಮೇಲೆ ಕೆಂಡಕಾರೋದು ಪಕ್ಕಾ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಹರ್ಷನ ಮಾತಿಗೆ ರತ್ನಮಾಲಾ ಕಣ್ಣೀರು

ಮಾಲಾ ಸಂಸ್ಥೆಗೆ ರತ್ನಮಾಲಾ ಒಡತಿ. ಆಕೆಯ ಹೆಸರಲ್ಲಿ ಎಲ್ಲಾ ಆಸ್ತಿಯೂ ಇತ್ತು. ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದವಳು ರತ್ನಮಾಲಾ. ಆದರೆ, ಈಗ ಆ ಆಸ್ತಿಯನ್ನು ಅವಳು ಭುವಿ ಹೆಸರಿಗೆ ಬರೆದಿದ್ದಾಳೆ. ಈ ಸತ್ಯ ಆಕೆ ಹಾಗೂ ವಕೀಲರಿಗೆ ಇಬ್ಬರಿಗೆ ಮಾತ್ರ ಗೊತ್ತಿದೆ. ಹರ್ಷನಿಗೆ ಕೋಪ ಜಾಸ್ತಿ. ಆತನ ಕೈಗೆ ಸಂಸ್ಥೆ ನೀಡಿದರೆ ಎಲ್ಲವೂ ನಾಶವಾಗಬಹುದು ಎಂಬ ಭಯ ರತ್ನಮಾಲಾಳನ್ನು ಹೆಚ್ಚಾಗಿ ಕಾಡುತ್ತಿದೆ. ಈ ಕಾರಣಕ್ಕೆ ಆಕೆ ಭುವಿಯ ಹೆಸರಿಗೆ ಆಸ್ತಿ ಬರೆದಿದ್ದಾಳೆ.

ಇದನ್ನೂ ಓದಿ: ‘ಕಂಪನಿ ನಡೆಸಿಕೊಂಡು ಹೋಗ್ತೀಯಾ?’; ರತ್ನಮಾಲಾ ಕೊಟ್ಟ ಜವಾಬ್ದಾರಿಗೆ ಹಿಗ್ಗಿದ ಸಾನಿಯಾ

ರತ್ನಮಾಲಾ ಮನೆಯಲ್ಲಿ ಫೋಟೋಶೂಟ್ ಇತ್ತು. ಈ ವೇಳೆ ಹರ್ಷ ‘ಆಸ್ತಿಯನ್ನು ಸೊಸೆಯ ಹೆಸರಿಗೆ ಬರೆದು ಮಗನನ್ನು ಅರ್ಧ ದಾರಿಯಲ್ಲಿ ಬಿಟ್ಟು ಹೋಗೋದು ಎಷ್ಟು ಸರಿ’ ಎಂದು ನಕ್ಕಿದ್ದಾನೆ. ಇದನ್ನು ಕೇಳಿ ರತ್ನಮಾಲಾಗೆ ಕರುಳು ಕಿವುಚಿದಂತೆ ಆಗಿದೆ. ಹರ್ಷನಿಗೆ ಇದೇ ಸತ್ಯ ಎಂಬ ವಿಚಾರ ಗೊತ್ತಿಲ್ಲ. ಈ ಮಾತನ್ನು ಕೇಳುತ್ತಿದ್ದಂತೆ ರತ್ನಮಾಲಾ ಕಣ್ಣೀರು ಹಾಕಿದ್ದಾಳೆ.

ಶ್ರೀಲಕ್ಷ್ಮಿ ಎಚ್.

Published On - 7:00 am, Wed, 26 October 22

29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ