AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಂಪನಿ ನಡೆಸಿಕೊಂಡು ಹೋಗ್ತೀಯಾ?’; ರತ್ನಮಾಲಾ ಕೊಟ್ಟ ಜವಾಬ್ದಾರಿಗೆ ಹಿಗ್ಗಿದ ಸಾನಿಯಾ

ರತ್ನಮಾಲಾಳನ್ನು ಕೊಲ್ಲಲು ಸಾನಿಯಾ ಮುಂದಾಗಿದ್ದಳು. ಈ ಕಾರಣಕ್ಕೆ ಆಕೆಯನ್ನು ಕೆಲಸದಿಂದ ತೆಗೆದುಹಾಕಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ ರತ್ನಮಾಲಾ. ಆದರೆ, ಈ ವೇಳೆಯೇ ಹೊಸ ಟ್ವಿಸ್ಟ್​ ಸಿಕ್ಕಿದೆ.

‘ಕಂಪನಿ ನಡೆಸಿಕೊಂಡು ಹೋಗ್ತೀಯಾ?’; ರತ್ನಮಾಲಾ ಕೊಟ್ಟ ಜವಾಬ್ದಾರಿಗೆ ಹಿಗ್ಗಿದ ಸಾನಿಯಾ
ರತ್ನಮಾಲಾ-ಸಾನಿಯಾ
TV9 Web
| Edited By: |

Updated on: Oct 18, 2022 | 7:01 AM

Share

‘ಕನ್ನಡತಿ’ (Kannadathi Serial) ಧಾರಾವಾಹಿಗೆ ದೊಡ್ಡ ಟ್ವಿಸ್ಟ್​ ನೀಡಲಾಗಿದೆ. ಧಾರಾವಾಹಿಯ ಪ್ರಮುಖ ಪಾತ್ರ ರತ್ನಮಾಲಾಗೆ ಮರೆವಿನ ಕಾಯಿಲೆ ಶುರುವಾಗಿತ್ತು. ಅದು ಈಗ ಮಿತಿಮೀರಿದೆ. ಯಾರನ್ನೇ ನೋಡಿದರೂ ಆಕೆಗೆ ಭುವಿಯನ್ನು ಕಂಡಂತೆ ಆಗುತ್ತಿದೆ. ಈಗ ಸಾನಿಯಾಳನ್ನೇ ಭುವಿ ಎಂದುಕೊಂಡು ಹೊಸ ಜವಾಬ್ದಾರಿಯನ್ನೇ ನೀಡಿಬಿಟ್ಟಿದ್ದಾಳೆ ಅವಳು. ರತ್ನಮಾಲಾ ಕೊಟ್ಟ ಜವಾಬ್ದಾರಿ ಕೇಳಿ ಸಾನಿಯಾ ಹಿರಿಹಿರಿ ಹಿಗ್ಗಿದ್ದಾಳೆ. ಇತ್ತ ರತ್ನಮಾಲಾಗೆ ಅನುಮಾನ ಶುರುವಾಗಿದೆ. ತಾನು ಯಾರ ಜೊತೆ ಮಾತನಾಡುತ್ತಿದ್ದೇನೆ ಎಂಬ ಅನುಮಾನ ಆಕೆಗೆ ಹೆಚ್ಚಾಗಿದೆ.

ರತ್ನಮಾಲಾ ಎಚ್ಚರತಪ್ಪಿ ಬಿದ್ದಿದ್ದಳು. ಆಕೆಗೆ ಕಾಡಿದ ಕಾಯಿಲೆಯೇ ಇದಕ್ಕೆ ಕಾರಣ ಎಂಬುದು ಮನೆಯವರಿಗೆ ಗೊತ್ತಾಗಿದೆ. ಮಾಲಾ ಸಂಸ್ಥೆಯ ವಾರ್ಷಿಕ ಸಭೆ ಸಂದರ್ಭದಲ್ಲಿಯೇ ರತ್ನಮಾಲಾ ಕುಸಿದು ಬಿದ್ದಿದ್ದಳು. ಆಕೆಗೆ ಒಂದು ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಕೊಠಡಿ ಒಳಗೆ ಸಾನಿಯಾ ತೆರಳಿದ್ದಾಳೆ. ಆ ಸಮಯಕ್ಕೆ ಸರಿಯಾಗಿ ರತ್ನಮಾಲಾಗೆ ಎಚ್ಚರವಾಗಿದೆ. ಸಾನಿಯಾಳನ್ನು ನೋಡಿದ ರತ್ನಮಾಲಾಗೆ ಭುವಿಯನ್ನು ಕಂಡಂತೆ ಆಗಿದೆ. ಈ ಕಾರಣಕ್ಕೆ ಅತೀ ಪ್ರೀತಿಯಿಂದ ಮಾತನಾಡಿದ್ದಾಳೆ ರತ್ನಮಾಲಾ. ಇದನ್ನು ಕಂಡು ಸಾನಿಯಾ ನಿಜಕ್ಕೂ ಖುಷಿಪಟ್ಟಿದ್ದಾಳೆ.

ಮಾಲಾ ಶಿಕ್ಷಣ ಸಂಸ್ಥೆಗೆ ಸಾನಿಯಾ ಎಂಡಿ. ಆದರೆ, ಆಕೆಯ ದುರ್ಬುದ್ಧಿಯಿಂದ ಕೆಲಸಕ್ಕೆ ಕುತ್ತು ಬರುವ ಸೂಚನೆ ಸಿಕ್ಕಿದೆ. ತನ್ನ ಸ್ಥಾನ ಯಾವಾಗ ಬೇಕಾದರೂ ಹೋಗಬಹುದು ಎಂಬುದು ಆಕೆಗೆ ಗೊತ್ತಾಗಿದೆ. ಸಾನಿಯಾ ಮಾಡುವ ಕೆಟ್ಟ ಕೆಲಸಗಳೆಲ್ಲವೂ ರತ್ನಮಾಲಾಗೆ ತಿಳಿದು ಹೋಗಿದೆ. ಸ್ವತಃ ರತ್ನಮಾಲಾಳನ್ನು ಕೊಲ್ಲಲು ಸಾನಿಯಾ ಮುಂದಾಗಿದ್ದಳು. ಈ ಕಾರಣಕ್ಕೆ ಆಕೆಯನ್ನು ಕೆಲಸದಿಂದ ತೆಗೆದುಹಾಕಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ ರತ್ನಮಾಲಾ. ಆದರೆ, ಈ ವೇಳೆಯೇ ಹೊಸ ಟ್ವಿಸ್ಟ್​ ಸಿಕ್ಕಿದೆ.

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
Image
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ರತ್ನಮಾಲಾ ಮಲಗಿದ್ದ ಕೋಣೆಗೆ ಸಾನಿಯಾ ತೆರಳಿದ್ದಳು. ಆಗ ರತ್ನಮಾಲಾಗೆ ಎಚ್ಚರವಾಗಿದೆ. ಸಾನಿಯಾ ನೋಡುತ್ತಿದ್ದಂತೆ ಭುವಿಯನ್ನು ಕಂಡಂತೆ ಆಗಿದೆ. ‘ಬಾರಮ್ಮ ಬಾ. ಕುಳಿತುಕೋ. ನನ್ನ ಕಾಲ ಮೇಲೆ ಮಲಗಿಕೋ ಬಾ. ನಿನ್ನಂಥವರು ನಮ್ಮ ಕಂಪನಿಗೆ ಬೇಕು. ನಿನ್ನಂತವರ ಜಾಣತನದ ಅವಶ್ಯಕತೆ ಈ ಕಂಪನಿಗೆ ಇದೆ’ ಎಂದಿದ್ದಾಳೆ ರತ್ನಮಾಲಾ. ಇದನ್ನು ಕೇಳಿ ಸಾನಿಯಾ ಕುಣಿದು ಕುಪ್ಪಳಿಸಿದ್ದಾಳೆ. ನಿಜವಾಗಲೂ ಈ ಮಾತನ್ನು ರತ್ನಮಾಲಾಳೇ ಹೇಳುತ್ತಿದ್ದಾಳಾ ಎಂಬ ಅನುಮಾನ ಆಕೆಗೆ ಮೂಡಿದೆ. ಇದೇ ವೇಳೆ ರತ್ನಮಾಲಾಗೂ ಒಂದು ಅನುಮಾನ ಶುರುವಾಗಿದೆ.

‘ನಮ್ಮ ಕಂಪನಿಯನ್ನು ಮುನ್ನಡೆಸಿಕೊಂಡು ಹೋಗುತ್ತೀಯಾ’ ಎಂದು ರತ್ನಮಾಲಾ ಕೇಳಿದ ಪ್ರಶ್ನೆಗೆ ಸಾನಿಯಾ ಸಂತಸ ವ್ಯಕ್ತಪಡಿಸಿದ್ದಾಳೆ ನಿಜ. ಆ ಸಂದರ್ಭದಲ್ಲಿ, ರತ್ನಮಾಲಾಗೆ ಸಾನಿಯಾ, ಭುವಿ ರೀತಿ ಕಾಣಿಸಿದ್ದಾಳೆ. ಹೀಗಾಗಿ, ಎಂಡಿ ಪಟ್ಟ ಹಾಗೂ ಕಂಪನಿಯ ಜವಾಬ್ದಾರಿ ಸಿಕ್ಕ ನಂತರ ಭುವಿ ಏಕೆ ಇಷ್ಟೊಂದು ಸಂಭ್ರಮಿಸುತ್ತಿದ್ದಾಳೆ ಎಂದು ರತ್ನಮಾಲಾಗೆ ಅನ್ನಿಸಿದಂತಿದೆ. ಭುವಿಯ ಬಗ್ಗೆ ರತ್ನಮಾಲಾ ತಪ್ಪು ತಿಳಿದುಕೊಳ್ಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಸಾನಿಯಾಗೆ ನಿಜ ವಿಚಾರ ಗೊತ್ತಾಗಲೂಬಹುದು.

ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ

ರತ್ನಮಾಲಾ ಮಲಗಿರುವ ಕೋಣೆಯ ಹೊರಗೇ ಭುವಿ ಇದ್ದಾಳೆ. ಅವಳು ಯಾವುದೇ ಕ್ಷಣದಲ್ಲೂ ರತ್ನಮಾಲಾ ಇರುವ ರೂಂನ ಒಳಗೆ ಬರಬಹುದು. ಆಗ ರತ್ನಮಾಲಾಗೆ ತನ್ನ ತಪ್ಪು ಅರಿವಾಗಬಹುದು. ಒಂದೊಮ್ಮೆ ‘ನಿನ್ನನ್ನು ಭುವಿ ಎಂದು ತಪ್ಪಾಗಿ ತಿಳಿದುಕೊಂಡೆ’ ಎಂದು ರತ್ನಮಾಲಾ ಹೇಳಿದ್ದೇ ಆದಲ್ಲಿ, ಸಾನಿಯಾಗೆ ಅಸಲಿ ವಿಚಾರ ಗೊತ್ತಾಗಲಿದೆ. ಮುಂದೆ ಅಧಿಕಾರ ಯಾರ ಕೈಗೆ ಹಸ್ತಾಂತರ ಆಗಲಿದೆ ಎಂಬುದು ಪಕ್ಕಾ ಆಗಲಿದೆ. ಅದಕ್ಕೆ ತಕ್ಕಂತೆ ಸಾನಿಯಾ ಸ್ಟ್ರ್ಯಾಟಜಿ ಬದಲಿಸಬಹುದು. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ
ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು