ಅನುಪಮಾ ಆಟ ನೋಡಿ ಬಿಗ್ ಬಾಸ್ ಸ್ಕ್ರಿಪ್ಟೆಡ್ ಎಂದ ಆರ್ಯವರ್ಧನ್; ಇದರ ಅಸಲಿಯತ್ತೇನು?
ಪ್ರತಿ ವೀಕೆಂಡ್ನಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಒಂದಷ್ಟು ಪ್ರಶ್ನೆ ಕೇಳುತ್ತಾರೆ. ಈ ವಾರ ‘ಈ ಬಾರಿಯ ಬಿಗ್ ಬಾಸ್ನಲ್ಲಿ ಟಾಪ್ 2 ಯಾರು ಆಗಬಹುದು’ ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಅನೇಕರು ಗುರೂಜಿ ಹೆಸರನ್ನು ತೆಗೆದುಕೊಂಡರು.
‘ಬಿಗ್ ಬಾಸ್’ (Bigg Boss) ಮನೆಯಲ್ಲಿ ನಡೆಯುವ ಎಲ್ಲಾ ಜಗಳಗಳು ಹಾಗೂ ಪ್ರೀತಿ-ಪ್ರೇಮ ಹುಟ್ಟಿಕೊಳ್ಳುವ ವಿಚಾರ ಸ್ಕ್ರಿಪ್ಟೆಡ್ ಎಂಬ ಆರೋಪ ಈ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ, ಇದನ್ನು ವಾಹಿನಿಯವರು ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ. ಒಂದು ವರ್ಗದ ವೀಕ್ಷಕರು ಇದನ್ನು ಒಪ್ಪುವುದಿಲ್ಲ. ಈಗ ಅಚ್ಚರಿ ಎಂಬಂತೆ ಮನೆ ಒಳಗೆ ತೆರಳಿದ ಸ್ಪರ್ಧಿಯೇ ಬಿಗ್ ಬಾಸ್ ಸ್ಕ್ರಿಪ್ಟೆಡ್ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ಹೇಳಿಕೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಈ ರೀತಿ ಹೇಳಿದವರು ಬೇರಾರು ಅಲ್ಲ ಆರ್ಯವರ್ಧನ್ ಗುರೂಜಿ (Aryavardhan Guruji). ಅವರು ಹೀಗೆ ಹೇಳೋಕೆ ಕಾರಣ ಅನುಪಮಾ ಗೌಡ ಅವರು ನೀಡಿದ ಆ ಒಂದು ಹೇಳಿಕೆ.
ಪ್ರತಿ ವೀಕೆಂಡ್ನಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಒಂದಷ್ಟು ಪ್ರಶ್ನೆ ಕೇಳುತ್ತಾರೆ. ಈ ವಾರ ‘ಈ ಬಾರಿಯ ಬಿಗ್ ಬಾಸ್ನಲ್ಲಿ ಟಾಪ್ 2 ಯಾರು ಆಗಬಹುದು’ ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಅನೇಕರು ಗುರೂಜಿ ಹೆಸರನ್ನು ತೆಗೆದುಕೊಂಡರು. ಆದರೆ, ಗುರೂಜಿ ಪಾಳಿ ಬಂದಾಗ ಅವರು ನೀಡಿದ ಉತ್ತರ ಶಾಕಿಂಗ್ ಆಗಿತ್ತು. ಸುದೀಪ್ ಎದುರೇ ಈ ರೀತಿ ಅವರು ಹೇಳುತ್ತಾರೆ ಎಂದು ಯಾರೆಂದರೆ ಯಾರೂ ಕೂಡ ಊಹಿಸಿರಲಿಲ್ಲ.
ಕಳೆದ ವಾರ ಚಿನ್ನದ ಗಣಿ ಟಾಸ್ಕ್ ನೀಡಲಾಗಿತ್ತು. ಕ್ಯಾಪ್ಟನ್ಸಿ ಟಾಸ್ಕ್ಗಾಗಿ ನಡೆದ ಆಟದಿಂದ ಅನುಪಮಾ ಅವರು ಮೊದಲೇ ಔಟ್ ಆಗಿದ್ದರು. ಆದರೆ, ಕೊನೆಯಲ್ಲಿ ಸಿಕ್ಕ ಟ್ವಿಸ್ಟ್ನಿಂದ ಅನುಪಮಾ ಅವರು ಕ್ಯಾಪ್ಟನ್ಸಿ ರೇಸ್ಗೆ ಮತ್ತೆ ಎಂಟ್ರಿ ಪಡೆದರು. ಅಂತಿಮವಾಗಿ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ದೀಪಿಕಾ ದಾಸ್, ಅನುಪಮಾ ಗೌಡ ಹಾಗೂ ರೂಪೇಶ್ ಶೆಟ್ಟಿ ಇದ್ದರು. ‘ಅನುಪಮಾ ಅವರನ್ನು ಮತ್ತೆ ಕರೆತರಬೇಕು ಎಂಬ ಉದ್ದೇಶದಿಂದಲೇ ಟ್ವಿಸ್ಟ್ ನೀಡಲಾಗಿದೆ. ಇವೆಲ್ಲ ಮ್ಯಾಚ್ಫಿಕ್ಸಿಂಗ್’ ಎಂಬ ಆರೋಪ ಮಾಡಿದರು ಆರ್ಯವರ್ಧನ್. ಗುರೂಜಿ ಮಾತು ಕೇಳಿ ಸುದೀಪ್ ಕೂಡ ಸಿಟ್ಟಾದರು.
ಇದನ್ನೂ ಓದಿ: ಬಿಗ್ ಬಾಸ್ನಿಂದ ಹೊರ ನಡೆಯಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ; ಈ ವೀಕೆಂಡ್ನಲ್ಲೇ ಎಲಿಮಿನೇಷನ್?
ಗುರೂಜಿ ಈ ರೀತಿ ಹೇಳಿಕೆ ನೀಡೋಕೆ ಕಳೆದವಾರ ಅನುಪಮಾ ಕೊಟ್ಟ ಒಂದು ಹೇಳಿಕೆಯೇ ಕಾರಣ. ಕಳೆದ ವಾರ ಆರ್ಯವರ್ಧನ್ ಗುರೂಜಿ ಕ್ಯಾಪ್ಟನ್ ಆಗಿದ್ದರು. ‘ರೂಪೇಶ್ ಹಾಗೂ ರಾಕೇಶ್ ಸಹಾಯದಿಂದ ಆರ್ಯವರ್ಧನ್ ಕ್ಯಾಪ್ಟನ್ ಆಗಿದ್ದಾರೆ’ ಎಂಬ ಆರೋಪವನ್ನು ಅನುಪಮಾ ಮಾಡಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಆರ್ಯವರ್ಧನ್ ಮ್ಯಾಚ್ ಫಿಕ್ಸಿಂಗ್ ಹೇಳಿಕೆ ನೀಡಿದ್ದರು.