ರೂಪೇಶ್ ಶೆಟ್ಟಿ-ಸಾನ್ಯಾ ಮಧ್ಯೆ ಬಂದ ಕಾವ್ಯಶ್ರೀ ಗೌಡ; ಐಯ್ಯರ್ ಕಣ್ಣಲ್ಲಿ ತುಂಬಿತು ನೀರು

‘ಬೆಳಗ್ಗೆ ಯಾಕೆ ಮಾತನಾಡೋಕೆ ಬರಲಿಲ್ಲ’ ಎಂದು ರೂಪೇಶ್ ಶೆಟ್ಟಿ ಕೇಳಿದರು. ಇದಕ್ಕೆ ಸಾನ್ಯಾ ಬೇಸರದಲ್ಲಿಯೇ ಉತ್ತರ ನೀಡಿದರು. ಈ ವೇಳೆ ಅವಳ ಕಣ್ಣಲ್ಲಿ ನೀರಿತ್ತು.

ರೂಪೇಶ್ ಶೆಟ್ಟಿ-ಸಾನ್ಯಾ ಮಧ್ಯೆ ಬಂದ ಕಾವ್ಯಶ್ರೀ ಗೌಡ; ಐಯ್ಯರ್ ಕಣ್ಣಲ್ಲಿ ತುಂಬಿತು ನೀರು
ಸಾನ್ಯಾ-ಕಾವ್ಯಾಶ್ರೀ-ರೂಪೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 01, 2022 | 6:30 AM

‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಸ್ವರೂಪಕ್ಕೂ ‘ಬಿಗ್ ಬಾಸ್​ ಕನ್ನಡ ಸೀಸನ್ 9’ರ ಸ್ವರೂಪಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಒಟಿಟಿಯಲ್ಲಿ ಅನೇಕರು ಗಾಯಗೊಂಡಿದ್ದರಿಂದ ಸದಸ್ಯರ ಸಂಖ್ಯೆ ಬೇಗ ಕಡಿಮೆ ಆಯಿತು. ಆದರೆ, ಟಿವಿ ಸೀಸನ್​​ನಲ್ಲಿ ಸದ್ಯಕ್ಕೆ ಆರೀತಿ ಇಲ್ಲ. ಬರೋಬ್ಬರಿ 18 ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಇದೆ. ಒಟಿಟಿಯಲ್ಲಿ ರೂಪೇಶ್ (Roopesh Sheetty) ಹಾಗೂ ಸಾನ್ಯಾ ಕ್ಲೋಸ್ ಇದ್ದರು. ಆದರೆ, ಟಿವಿ ಸೀಸನ್​ನಲ್ಲಿ ಆ ರೀತಿ ಇಲ್ಲ. ಇವರ ಮಧ್ಯೆ ಕಾವ್ಯಶ್ರೀ ಗೌಡ ಎಂಟ್ರಿ ಆಗಿದೆ. ಇದಕ್ಕೆ ಸಾನ್ಯಾ ಬೇಸರಗೊಂಡಿದ್ದಾರೆ.

ಈ ವಾರ ಹೊಸ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಅದರ ಅನುಸಾರ ಜೋಡಿ ಮಾಡಬೇಕು. ಹೊಸಬರು ಹಾಗೂ ಹಳಬರು ಜೋಡಿ ಆಗಬೇಕು. ರೂಪೇಶ್ ಹಾಗೂ ಕಾವ್ರಶ್ರೀ ಗೌಡ ಅವರು ಜೋಡಿ ಆದರು. ಇಬ್ಬರ ನಡುವೆ ಆಪ್ತತೆ ಬೆಳೆದಿದೆ. ರೂಪೇಶ್ ಅವರು ತಾಯಿ ಕಳೆದುಕೊಂಡ ವಿಚಾರ ಹೇಳಿಕೊಂಡು ಅತ್ತಿದ್ದಾರೆ. ಈ ವೇಳೆ ಕಾವ್ಯಶ್ರೀ ಗೌಡ ಸಮಾಧಾನ ಮಾಡಿದ್ದರು. ಇಬ್ಬರು ಒಂದು ವಾರಗಳ ಕಾಲ ಸಾಕಷ್ಟು ಸಮಯ ಕಳೆದಿದ್ದಾರೆ.

ಕಾವ್ಯಶ್ರೀ ಜತೆ ರೂಪೇಶ್ ಕ್ಲೋಸ್ ಆಗುತ್ತಿದ್ದಂತೆ ಸಾನ್ಯಾ ಐಯ್ಯರ್​ಗೆ ಬೇಸರ ಆಗಿದೆ. ಅನೇಕ ಸಂದರ್ಭದಲ್ಲಿ ಸಾನ್ಯಾ ಹಾಗೂ ರೂಪೇಶ್​ ಒಟ್ಟಾಗಿ ಇರಬೇಕು ಅಂದುಕೊಂಡರೂ ಅದು ಸಾಧ್ಯವಾಗುತ್ತಿರಲಿಲ್ಲ. ಇದು ಸಾನ್ಯಾಗೆ ಸಾಕಷ್ಟು ಬೇಸರ ಮೂಡಿಸಿದೆ. ಶುಕ್ರವಾರದ (ಸೆಪ್ಟೆಂಬರ್ 30) ಎಪಿಸೋಡ್​ನಲ್ಲಿ ಜೋಡಿ ಟಾಸ್ಕ್ ಮುಗಿದಿದೆ. ಸಾನ್ಯಾ ಹಾಗೂ ರೂಪೇಶ್ ಈ ವಿಚಾರವಾಗಿ ಮಾತನಾಡಿದ್ದಾರೆ.

‘ಬೆಳಗ್ಗೆ ಯಾಕೆ ಮಾತನಾಡೋಕೆ ಬರಲಿಲ್ಲ’ ಎಂದು ರೂಪೇಶ್ ಶೆಟ್ಟಿ ಕೇಳಿದರು. ಇದಕ್ಕೆ ಸಾನ್ಯಾ ಬೇಸರದಲ್ಲಿಯೇ ಉತ್ತರ ನೀಡಿದರು. ಈ ವೇಳೆ ಅವಳ ಕಣ್ಣಲ್ಲಿ ನೀರಿತ್ತು. ‘ನೀನು ಅವಳ ಜೊತೆ ಇದ್ದೆ. ಹೀಗಾಗಿ ನಾನು ಅಲ್ಲಿಗೆ ಬರೋಕೆ ಹೋಗಿಲ್ಲ’ ಎಂಬ ಮಾತನ್ನು ಹೇಳಿದ್ದಾರೆ ಸಾನ್ಯಾ. ‘ಆ ರೀತಿ ಏನು ಇಲ್ಲ. ಅದು ಜೋಡಿ ಟಾಸ್ಕ್​ ಆಗಿತ್ತು. ಹೀಗಾಗಿ ಅವಳ ಜೊತೆ ಇದ್ದೆ ಅಷ್ಟೇ’ ಎಂಬ ಮಾತನ್ನು ರೂಪೇಶ್ ಹೇಳಿದರು.

ಇದನ್ನೂ ಓದಿ: BBK 9: ‘ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್’; ಏನಿದು ಸಮಾಚಾರ?

ನೀವಿಬ್ಬರೂ ಕ್ಲೋಸ್ ಆದರೆ ನನ್ನ ಕಥೆ ಏನು ಎಂಬರ್ಥ ಬರುವ ರೀತಿಯಲ್ಲಿ ಸಾನ್ಯಾ ಮಾತನಾಡಿದರು. ಇದಕ್ಕೆ ರೂಪೇಶ್​ ನೇರವಾಗಿ ಉತ್ತರಿಸಿದರು. ‘ನಾನು ಯಾರು ಹೇಳು, ರೂಪೇಶ್ ಶೆಟ್ಟಿ. ನೀನು ಯಾರು ಹೇಳು’ ಎಂದು ರೂಪೇಶ್ ಕೇಳಿದರು. ‘ನಾನು ರೂಪೇಶ್ ಐಯ್ಯರ್’ ಎಂದರು ಸಾನ್ಯಾ. ಅಮ್ಮ ಹೇಳಿದ ಮಾತು ನೆನಪಿದೆಯೇ ಎಂದು ಕೇಳಿದರು ರೂಪೇಶ್​. ‘ಅಮ್ಮ ಸಾನ್ಯಾ ಐಯ್ಯರ್ ಶೆಟ್ಟಿ’ ಎಂದು ಕರೆಯೋಕೆ ಓಕೆ ಎಂದಿದ್ದರು ಎಂದರು ಸಾನ್ಯಾ. ಇಬ್ಬರೂ ನಕ್ಕರು.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ