Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​

Darsh Chandrappa: ಎಲ್ಲರ ಜೊತೆಗೂ ದರ್ಶ್ ಚಂದ್ರಪ್ಪ​ ಹೆಚ್ಚು ಬೆರೆಯುತ್ತಿರಲಿಲ್ಲ. ಮನರಂಜನೆ ನೀಡುವಂತಹ ವಿಶೇಷ ಗುಣವೂ ಅವರಲ್ಲಿ ಕಂಡುಬರಲಿಲ್ಲ. ಇದರಿಂದ ಅವರಿಗೆ ಹಿನ್ನಡೆ ಆಯಿತು.

Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
ದರ್ಶ್ ಚಂದ್ರಪ್ಪ
Follow us
TV9 Web
| Updated By: ಮದನ್​ ಕುಮಾರ್​

Updated on:Oct 16, 2022 | 10:42 PM

ಪ್ರತಿ ವಾರ ಬಿಗ್​ ಬಾಸ್​ ಮನೆಯಿಂದ ಒಬ್ಬರು ಔಟ್​ ಆಗಲೇಬೇಕು. ಇದು ಈ ಶೋ ನಿಯಮ. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಕಾರ್ಯಕ್ರಮ ಈಗ ಮೂರು ವಾರಗಳನ್ನು ಪೂರೈಸಿದೆ. ಮೂರನೇ ವಾರದಲ್ಲಿ ನಟ ದರ್ಶ್ ಚಂದ್ರಪ್ಪ (Darsh Chandrappa) ಅವರು ಎಲಿಮಿನೇಟ್​ ಆಗಿದ್ದಾರೆ. ಕೊನೆವರೆಗೂ ಪೈಪೋಟಿ ನೀಡಬೇಕು ಎಂದುಕೊಂಡು ಬಂದಿದ್ದ ಅವರ ಆಟ ಬಹಳ ಬೇಗ ಅಂತ್ಯವಾಗಿದೆ. ಕಿಚ್ಚ ಸುದೀಪ್​ (Kichcha Sudeep) ಅವರು ಭಾನುವಾರದ (ಅ.16) ಸಂಚಿಕೆಯಲ್ಲಿ ಎಲಿಮಿನೇಷನ್​ ಘೋಷಿಸಿದರು. ಡೇಂಜರ್​ ಝೋನ್​ನಲ್ಲಿ ಇದ್ದ ನಟಿ ಮಯೂರಿ ಅವರು ಸೇಫ್​ ಆದರು. ಇದರಿಂದ ಅವರು ನಿಟ್ಟುಸಿರು ಬಿಟ್ಟಿದ್ದಾರೆ.

ತುಂಬ ಉತ್ಸಾಹದಲ್ಲಿಯೇ ದರ್ಶ್​ ಅವರು ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದರು. ಮೊದಲ ದಿನವೇ ಅವರು ಆಕ್ರಮಣಕಾರಿಯಾಗಿ ಆಟ ಶುರು ಮಾಡಿದ್ದರು. ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ಪ್ರಶಾಂತ್​ ಸಂಬರ್ಗಿ ಅವರನ್ನೇ ಟಾರ್ಗೆಟ್​ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಬರುಬರುತ್ತಾ ದರ್ಶ್​ ಸೈಲೈಂಟ್​ ಆಗಲು ಆರಂಭಿಸಿರು. ಅದೇ ಅವರಿಗೆ ಮುಳುವಾಯಿತು.

ಮೂರನೇ ವಾರದಲ್ಲಿ ರೂಪೇಶ್​ ರಾಜಣ್ಣ, ಪ್ರಶಾಂತ್​ ಸಂಬರ್ಗಿ, ದರ್ಶ್​, ದಿವ್ಯಾ ಉರುಡುಗ, ಮಯೂರಿ, ವಿನೋದ್​ ಗೊಬ್ಬರಗಾಲ, ದೀಪಿಕಾ ದಾಸ್​, ರೂಪೇಶ್​ ಶೆಟ್ಟಿ, ಅಮೂಲ್ಯ ಗೌಡ ಹಾಗೂ ಅನುಪಮಾ ಗೌಡ ಅವರು ನಾಮಿನೇಟ್​ ಆಗಿದ್ದರು. ಅಂತಿಮವಾಗಿ ದರ್ಶ್​ ಅವರು ಮನೆಯಿಂದ ಹೊರಬರಬೇಕಾಯಿತು.

ಇದನ್ನೂ ಓದಿ
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ
Image
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು

ಎಲ್ಲರ ಜೊತೆಗೂ ದರ್ಶ್​ ಹೆಚ್ಚು ಬೆರೆಯುತ್ತಿರಲಿಲ್ಲ. ಮನರಂಜನೆ ನೀಡುವಂತಹ ವಿಶೇಷ ಗುಣವೂ ಅವರಲ್ಲಿ ಕಂಡುಬರಲಿಲ್ಲ. ಹಾಗಾಗಿ ವೀಕ್ಷಕರಿಂದ ಅವರಿಗೆ ಕಡಿಮೆ ವೋಟ್​ ಬಿದ್ದಿರಬಹುದು. ಎಲಿಮಿನೇಟ್​ ಆದ ದರ್ಶ್​ ಅವರು ಕೂಲ್​ ಆಗಿಯೇ ದೊಡ್ಮನೆಯಿಂದ ಹೊರಬಂದಿದ್ದಾರೆ. ಅವರ ಮುಂದಿನ ​ಜರ್ನಿಗೆ ಶುಭವಾಗಲಿ ಎಂದು ಎಲ್ಲರೂ ಹಾರೈಸಿದ್ದಾರೆ.

ಎಲಿಮಿನೇಟ್​ ಆಗಿ ಮನೆಯಿಂದ ಹೊರಬರುವುದಕ್ಕೂ ಮುನ್ನ ಮುಂದಿನ ವಾರಕ್ಕೆ ಒಬ್ಬರನ್ನು ನೇರವಾಗಿ ನಾಮಿನೇಟ್​ ಮಾಡುವ ಅಧಿಕಾರ ದರ್ಶ್​ ಅವರಿಗೆ ಸಿಕ್ತು. ಅವರು ರೂಪೇಶ್​ ಶೆಟ್ಟಿ ಹೆಸರನ್ನು ಸೂಚಿಸಿದರು. ಆ ಮೂಲಕ ರೂಪೇಶ್​ ಶೆಟ್ಟಿಗೆ ನಾಲ್ಕನೇ ವಾರ ಚಾಲೆಂಜಿಂಗ್ ಆಗುವಂತೆ ಮಾಡಿದ್ದಾರೆ ದರ್ಶ್​.

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆದಂತೆಲ್ಲ ಆಟದ ಕಾವು ಹೆಚ್ಚುತ್ತದೆ. ದೊಡ್ಮನೆಯ ವಾತಾವರಣಕ್ಕೆ ಹೊಂದಿಕೊಂಡ ಎಲ್ಲರೂ ಇನ್ನಷ್ಟು ಚೆನ್ನಾಗಿ ಆಡಬೇಕು ಎಂಬ ಹುಮ್ಮಸ್ಸು ಪಡೆಯುತ್ತಾರೆ. ಆ ಹುಮ್ಮಸ್ಸಿನೊಂದಿಗೆ 4ನೇ ವಾರ ಶುರುವಾಗುತ್ತಿದೆ. ಎಲ್ಲರೂ ತಮ್ಮದೇ ತಂತ್ರಗಳನ್ನು ಬಳಸಿ ಆಟ ಮುಂದುವರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:41 pm, Sun, 16 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ