BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

Bigg Boss Elimination | Aishwarya Pissay: ನೋಡನೋಡುತ್ತಿದ್ದಂತೆಯೇ ಬಿಗ್​ ಬಾಸ್​ ಮನೆಯಲ್ಲಿ ಒಂದು ವಾರ ಕಳೆದು ಹೋಗಿದೆ. ಎರಡನೇ ವಾರಕ್ಕೆ ಪೈಪೋಟಿಯ ಕಾವು ಹೆಚ್ಚಾಗಲಿದೆ.

BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ
ಐಶ್ವರ್ಯಾ ಪಿಸ್ಸೆ
TV9kannada Web Team

| Edited By: Madan Kumar

Oct 02, 2022 | 10:49 PM

ಕಿಚ್ಚ ಸುದೀಪ್​ ನಡೆಸಿಕೊಡುತ್ತಿರುವ ‘ಬಿಗ್​ ಬಾಸ್ ಕನ್ನಡ ಸೀಸನ್​ 9’​ ಶೋನಲ್ಲಿ (Bigg Boss Kannada Season 9) ಮೊದಲ ವಾರದ ಎಲಿಮಿನೇಷನ್​ ನಡೆದಿದೆ. ಒಂದೇ ವಾರಕ್ಕೆ ಯಾರು ಔಟ್​ ಆಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಬೈಕ್​ ರೇಸರ್​ ಐಶ್ವರ್ಯಾ ಪಿಸ್ಸೆ (Aishwarya Pissay) ಅವರು ಎಲಿಮಿನೇಟ್​ ಆಗಿದ್ದಾರೆ. ಮೊದಲ ವಾರ 12 ಜನರು ನಾಮಿನೇಟ್​ ಆಗಿದ್ದರು. ಆರ್ಯವರ್ಧನ್​, ದರ್ಶ್​, ದಿವ್ಯಾ ಉರುಡುಗ, ಐಶ್ವರ್ಯಾ ಪಿಸೆ, ಪ್ರಶಾಂತ್​ ಸಂಬರ್ಗಿ, ವಿನೋದ್​, ಅರುಣ್​ ಸಾಗರ್​, ​ನವಾಜ್​, ಸಾನ್ಯಾ ಅಯ್ಯರ್​, ಮಯೂರಿ, ರೂಪೇಶ್​ ಶೆಟ್ಟಿ, ಕ್ಯಾವ್ಯಶ್ರೀ ಮೇಲೆ ಎಲಿಮಿನೇಷನ್​ ತೂಗುಗತ್ತಿ ಇತ್ತು. ಶನಿವಾರದ ಎಪಿಸೋಡ್​ನಲ್ಲಿ ದಿವ್ಯಾ, ಅರುಣ್​, ವಿನೋದ್​ ಸೇಫ್​ ಆದರು. ಭಾನುವಾರದ ಸಂಚಿಕೆಯಲ್ಲಿ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​ ಎಂಬ ವಿಷಯವನ್ನು ಕಿಚ್ಚ ಸುದೀಪ್​ (Kichcha Sudeep) ತಿಳಿಸಿದರು.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶೋ ಪ್ರಸಾರ ಆಗುತ್ತಿದೆ. ಈ ಬಾರಿಯ ಕಾರ್ಯಕ್ರಮ ಕೊಂಚ ಡಿಫರೆಂಟ್​ ಆಗಿದೆ. ಈ ಹಿಂದಿನ ಸೀಸನ್​ಗಳಲ್ಲಿ ಸ್ಪರ್ಧಿಸಿದ ಕೆಲವರ ಜೊತೆಗೆ 9 ಮಂದಿ ಹೊಸ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಎರಡನೇ ವಾರದ ವೇಳೆಗೆ ಪೈಪೋಟಿ ಇನ್ನಷ್ಟು ಹೆಚ್ಚಲಿದೆ.

ಐಶ್ವರ್ಯಾ ಪಿಸ್ಸೆ ಅವರು ಸಿನಿಮಾ ಅಥವಾ ಕಿರುತೆರೆ ಕ್ಷೇತ್ರದಿಂದ ಬಂದವರಲ್ಲ. ಹಾಗಾಗಿ ಅವರು ಬಿಗ್​ ಬಾಸ್​ ಮನೆಯ ಎಂಟರ್​ಟೇನ್ಮೆಂಟ್​ ವಿಚಾರದಲ್ಲಿ ಹಿಂದೆ ಉಳಿದುಕೊಂಡಿದ್ದರು. ‘ನೀವು ಬೈಕ್​ ರೇಸರ್​. ಆದರೆ ನಿಮ್ಮ ಬೈಕ್​ ಯಾಕೆ ಇನ್ನೂ ನ್ಯೂಟ್ರಲ್​ನಲ್ಲೇ ಇದೆ’ ಎಂದು ಸುದೀಪ್​ ಅವರು ವೀಕೆಂಡ್​ ಎಪಿಸೋಡ್​ನಲ್ಲಿ ಪ್ರಶ್ನೆ ಮಾಡಿದ್ದರು. ವೀಕ್ಷಕರಿಂದ ಕಡಿಮೆ ವೋಟ್​ ಪಡೆದ ಐಶ್ವರ್ಯಾ ಪಿಸ್ಸೆ ಅವರು ಒಂದೇ ವಾರಕ್ಕೆ ಬಿಗ್​ ಬಾಸ್​ ಮನೆಯಿಂದ ಹೊರಬೀಳುವಂತೆ ಆಗಿದೆ.

ಸುಮಾರು 100 ದಿನಗಳ ಕಾಲ ಬಿಗ್​ ಬಾಸ್​ ಶೋ ನಡೆಯಲಿದೆ. ಫಿನಾಲೆ ತಲುಪಬೇಕು ಎಂಬುದು ಪ್ರತಿಯೊಬ್ಬ ಸ್ಪರ್ಧಿಯ ಆಶಯ ಆಗಿರುತ್ತದೆ. ಪ್ರತಿ ವಾರದ ಎಲಿಮಿನೇಷನ್​ನಿಂದ ಬಜಾವ್​ ಆಗುವುದು ಅಷ್ಟು ಸುಲಭ ಅಲ್ಲ. ಮೊದಲ ವಾರ ಸೇಫ್​ ಆದ ಎಲ್ಲ ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದಾರೆ. 17 ಜನರ ನಡುವೆ ಈಗ ಹಣಾಹಣಿ ಮುಂದುವರಿದಿದೆ.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada