‘ನೀವು ತಿದ್ದಿಕೊಳ್ಳಲ್ಲ, ನನ್ನ ಟೈಮ್ ನಿಮ್ಮ ಮೇಲೆ ವೇಸ್ಟ್ ಮಾಡಲ್ಲ’; ಆರ್ಯವರ್ಧನ್ಗೆ ಕೈ ಮುಗಿದ ಸುದೀಪ್
‘ಎಲ್ಲವೂ ಗ್ರಹಗತಿಗಳಿಂದ ಆಗುತ್ತಿದೆ’ ಎಂಬ ಉತ್ತರ ಆರ್ಯವರ್ಧನ್ ಕಡೆಯಿಂದ ಬಂತು. ಈ ಮಾತನ್ನು ಕೇಳಿ ಸುದೀಪ್ ಅಚ್ಚರಿಗೊಂಡರು. ಅಲ್ಲದೆ, ಮುಂದೆ ಯಾವುದೇ ಮಾತನಾಡಬಾರದು ಎಂದು ನಿರ್ಧರಿಸಿದರು.
ಬಿಗ್ ಬಾಸ್ (Bigg Boss) ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಅವರು ಬೇರೆ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಒಟಿಟಿ ಸೀಸನ್ನಲ್ಲಿ ಎಲ್ಲರ ಮಾತು ಕೇಳಿಕೊಂಡಿದ್ದ ಅವರು, ಬದಲಾಗಿದ್ದಾರೆ. ಈಗ ಯಾರ ಮಾತನ್ನೂ ಕೇಳುತ್ತಿಲ್ಲ. ಬೇರೆಯವರಿಗೆ ಬುದ್ಧಿಮಾತು ಹೇಳುತ್ತಾ ದಿನ ಕಳೆಯುತ್ತಿದ್ದಾರೆ. ಇದರ ಜತೆಗೆ ಆರ್ಯವರ್ಧನ್ (Aravardhan Guruji) ಅವರು ಸಾಕಷ್ಟು ಅವಾಚ್ಯ ಶಬ್ದಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್ ವೀಕೆಂಡ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮನೆಯವರು ಹೌದು ಎಂದಿದ್ದಾರೆ.
‘ಎಷ್ಟೇ ಪ್ರಯತ್ನಪಟ್ರೂ ಆರ್ಯವರ್ಧನ್ಗೆ ಅವಾಚ್ಯ ಶಬ್ದಗಳನ್ನು ನಿಯಂತ್ರಿಸೋಕೆ ಆಗುತ್ತಿಲ್ಲ’ ಎಂಬ ಸ್ಟೇಟ್ಮೆಂಟ್ ಸುದೀಪ್ ನೀಡಿದ್ದಾರೆ. ಇದಕ್ಕೆ ಮನೆಯವರಿಂದ ‘ಹೌದು’ ಎಂಬ ಉತ್ತರ ಬಂತು. ‘ಆರ್ಯವರ್ಧನ್ಗೆ ಕೆಟ್ಟ ಶಬ್ದಗಳು ನಿಯಂತ್ರಣವೇ ಆಗುತ್ತಿಲ್ಲ. ಇದು ಸಾರ್ವಜನಿಕ ವೇದಿಕೆ. ಟಿವಿಯಲ್ಲಿ ಜನ ಇದನ್ನು ನೋಡ್ತಾ ಇರ್ತಾರೆ ಎಂದು ನಾನು ಅನೇಕ ಬಾರಿ ಅವರಿಗೆ ಹೇಳಿದ್ದೇನೆ’ ಎಂದರು ಪ್ರಶಾಂತ್.
‘ನಾನು ಹಳ್ಳಿಯವನು, ಅದಕ್ಕೆ ಆ ಶಬ್ದ ಬಳಸುತ್ತೀನಿ’ ಎಂದು ಸ್ಪಷ್ಟನೆ ನೀಡೋಕೆ ಹೋದರು ಆರ್ಯವರ್ಧನ್. ಇದಕ್ಕೆ ಸುದೀಪ್ ಸಿಟ್ಟಾದರು. ‘ಹಳ್ಳಿಯವನು ಎಂಬುದನ್ನು ಆಯುಧವನ್ನಾಗಿ ಮಾಡಿಕೊಳ್ಳಬೇಡಿ. ಎಲ್ಲ ಹಳ್ಳಿಯವರು ಆ ರೀತಿ ಇರಲ್ಲ. ಅಚ್ಚುಕಟ್ಟಾಗಿ ಕನ್ನಡ ಮಾತನಾಡುವವರೂ ಹಳ್ಳಿಯಲ್ಲಿ ಇದ್ದಾರೆ. ಅವರಿಗೆಲ್ಲ ನೀವು ಅವಮಾನ ಮಾಡ್ತಾ ಇದೀರಾ. ರಾಜ್ಕುಮಾರ್ ಅವರೂ ಹಳ್ಳಿಯಿಂದಲೇ ಬಂದವರು’ ಎಂದು ಸುದೀಪ್ ಖಡಕ್ ಆಗಿಯೇ ಉತ್ತರ ಕೊಟ್ಟರು.
‘ಎಲ್ಲವೂ ಗ್ರಹಗತಿಗಳಿಂದ ಆಗುತ್ತಿದೆ’ ಎಂಬ ಉತ್ತರ ಆರ್ಯವರ್ಧನ್ ಕಡೆಯಿಂದ ಬಂತು. ಈ ಮಾತನ್ನು ಕೇಳಿ ಸುದೀಪ್ ಅಚ್ಚರಿಗೊಂಡರು. ಅಲ್ಲದೆ, ಮುಂದೆ ಯಾವುದೇ ಮಾತನಾಡಬಾರದು ಎಂದು ನಿರ್ಧರಿಸಿದರು. ಈ ಸಂದರ್ಭದಲ್ಲಿ ಒಂದು ಬ್ರೇಕ್ ನೀಡಲಾಯಿತು. ಮನೆ ಒಳಗೆ ಆರ್ಯವರ್ಧನ್ ಮತ್ತೆ ಮತ್ತೆ ಗ್ರಹಗತಿ ವಾದವನ್ನು ಮುಂದಿಡೋಕೆ ಶುರು ಮಾಡಿದರು.
ಬ್ರೇಕ್ನ ನಂತರ ಬಂದ ಸುದೀಪ್ ‘ನಾನು ಇಷ್ಟು ಹೇಳಿದಮೇಲೂ ಮತ್ತದೇ ರೀತಿ ಮಾಡ್ತೀರಲ್ಲ. ನಿಮ್ಮನ್ನು ತಿದ್ದೋಕೆ ಆಗಲ್ಲ, ನೀವು ತಿದ್ದಿಕೊಳ್ಳುವುದೂ ಇಲ್ಲ. ನನ್ನ ಟೈಮ್ನ ನಿಮ್ಮ ಮೇಲೆ ವೇಸ್ಟ್ ಮಾಡಲ್ಲ. ನೀವು ಏನಾದರೂ ಮಾಡಿಕೊಳ್ಳಿ’ ಎಂದು ಕೈ ಮುಗಿದೇಬಿಟ್ಟರು ಸುದೀಪ್.
ಇದನ್ನೂ ಓದಿ: ‘ಬಿಗ್ ಬಾಸ್ ಶುರುವಾದಾಗ ನಾನು ಬಂದು ಪ್ರೀತಿ ಮಾಡಿ ಅಂತ ಹೇಳಿದ್ನಾ?’; ಸುದೀಪ್ ಪ್ರಶ್ನೆಗೆ ಕಂಗಾಲಾದ ರೂಪೇಶ್
ಆರ್ಯವರ್ಧನ್ ನಡೆದುಕೊಂಡ ರೀತಿ ಮನೆಯವರಿಗೆ ಸ್ವಲ್ಪವೂ ಇಷ್ಟ ಆಗಲಿಲ್ಲ. ಹೀಗಾಗಿ, ಆರ್ಯವರ್ಧನ್ ಬಗ್ಗೆ ಬೇಸರ ಹೊರಹಾಕಿದರು. ಅವರ ಗ್ರಹಗತಿ ಹೇಳಿಕೆಯಿಂದ ಬಹುತೇಕರಿಗೆ ಶಾಕ್ ಆಗಿದೆ. ಈ ಬಗ್ಗೆ ಮನೆ ಮಂದಿಯೂ ಹೇಳಿಕೊಂಡಿದ್ದಾರೆ.