‘ಬಿಗ್ ಬಾಸ್ ಶುರುವಾದಾಗ ನಾನು ಬಂದು ಪ್ರೀತಿ ಮಾಡಿ ಅಂತ ಹೇಳಿದ್ನಾ?’; ಸುದೀಪ್ ಪ್ರಶ್ನೆಗೆ ಕಂಗಾಲಾದ ರೂಪೇಶ್

‘ಸ್ಕ್ರೀನ್ ಪ್ಲೇ ಮಾಡ್ಕೊಂಡು, ಡೈಲಾಗ್ ಬರೆದುಕೊಂಡು ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಮಾಡೋಕೆ ಆಗಲ್ಲ’ ಎಂದು ಸ್ಟೇಟ್​ಮೆಂಟ್ ನೀಡಿದರು. ಇದಕ್ಕೆ ಎಲ್ಲರೂ ಹೌದು ಎಂಬ ಉತ್ತರ ನೀಡಿದರು.

‘ಬಿಗ್ ಬಾಸ್ ಶುರುವಾದಾಗ ನಾನು ಬಂದು ಪ್ರೀತಿ ಮಾಡಿ ಅಂತ ಹೇಳಿದ್ನಾ?’; ಸುದೀಪ್ ಪ್ರಶ್ನೆಗೆ ಕಂಗಾಲಾದ ರೂಪೇಶ್
ರೂಪೇಶ್-ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 03, 2022 | 2:41 PM

ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನ್ಯಾ ಐಯ್ಯರ್ ಮಧ್ಯೆ ಬಿಗ್ ಬಾಸ್ ಒಟಿಟಿಯಲ್ಲಿ ಒಳ್ಳೆಯ ಫ್ರೆಂಡ್​​ಶಿಪ್ ಬೆಳೆದಿತ್ತು. ಇದು ಟಿವಿ ಸೀಸನ್​ನಲ್ಲೂ ಮುಂದುವರಿದಿದೆ. ಇಬ್ಬರ ನಡುವಿನ ಫ್ರೆಂಡ್​ಶಿಪ್​ ಅನ್ನು ಕೆಲವರು ಪ್ರೀತಿ ಎಂದು ಬಣ್ಣಿಸಿದ್ದೂ ಇದೆ. ಇದಕ್ಕೆ ಈ ಜೋಡಿ ಈಗಾಗಲೇ ಹಲವು ಬಾರಿ ಸ್ಪಷ್ಟನೆ ನೀಡಿದೆ. ವೀಕೆಂಡ್​ನಲ್ಲಿ ಸುದೀಪ್ (Kichcha Sudeep) ಕೇಳಿದ ಪ್ರಶ್ನೆಗೆ ರೂಪೇಶ್ ಅಕ್ಷರಶಃ ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ ಸಖತ್ ಕನ್​ಫ್ಯೂಸ್ ಆಗಿ ಏನೇನೋ ಉತ್ತರ ನೀಡಿದ್ದಾರೆ. ಇದನ್ನು ನೋಡಿ ಮನೆಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ವೀಕೆಂಡ್​ನಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ಯೆಸ್ ಆರ್​ ನೋ ರೌಂಡ್ ಇರುತ್ತದೆ. ಕಳೆದ ವಾರವೂ ಈ ಸುತ್ತು ನಡೆದಿದೆ. ಸುದೀಪ್ ಅವರು ಒಂದು ಪ್ರಶ್ನೆ ಎತ್ತಿದರು. ‘ಸ್ಕ್ರೀನ್ ಪ್ಲೇ ಮಾಡ್ಕೊಂಡು, ಡೈಲಾಗ್ ಬರೆದುಕೊಂಡು ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಮಾಡೋಕೆ ಆಗಲ್ಲ’ ಎಂದು ಸ್ಟೇಟ್​ಮೆಂಟ್ ನೀಡಿದರು. ಇದಕ್ಕೆ ಎಲ್ಲರೂ ಹೌದು ಎಂಬ ಉತ್ತರ ನೀಡಿದರು. ‘ಎಲ್ಲರ ಮನಸ್ಥಿತಿ ಬೇರೆ ರೀತಿ ಇರುತ್ತದೆ. ಹೀಗಿರುವಾಗ ಇಲ್ಲಿ ಸ್ಕ್ರಿಪ್ಟ್​ ಎಲ್ಲಾ ಬರೆದುಕೊಂಡು ಲವ್ ಮಾಡೋಕೆ ಆಗಲ್ಲ’ ಎಂಬ ಉತ್ತರವನ್ನು ಪ್ರಶಾಂತ್ ಸಂಬರ್ಗಿ ನೀಡಿದರು.

ರೂಪೇಶ್ ಕೂಡ ಹೌದು ಎಂಬ ಉತ್ತರ ನೀಡಿದ್ದರು. ಸುದೀಪ್ ‘ಯೆಸ್ ಏಕೆ’ ಎಂದು ಅವರ ಬಳಿ ಪ್ರಶ್ನೆ ಮಾಡಿದರು. ‘ಪ್ರೀತಿ ಎಂದು ಹೆಚ್ಚು ದಿನ ನಾಟಕ ಮಾಡೋಕೆ ಆಗಲ್ಲ. ಪ್ರೀತಿ ಒಳಗಿಂದ ಹುಟ್ಟಬೇಕು’ ಎಂದು ಹೇಳುತ್ತಿದ್ದಂತೆ, ‘ನಿಜವಾಗಲೂ ಹೌದಾ’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಇದಕ್ಕೆ ರೂಪೇಶ್ ಗಲಿಬಿಲಿಗೆ ಒಳಗಾದರು.

‘ನಾಟಕ ಮಾಡಿಕೊಂಡು ಪ್ರೀತಿ ಮಾಡೋಕೆ ಆಗಲ್ಲ ಎಂದ್ರಲ್ಲ, ಇದನ್ನ ಅವರ ಮುಖ ನೋಡಿಕೊಂಡು ಹೇಳಿ’ ಎಂದು ಸುದೀಪ್ ಹೇಳಿದರು. ಅವರು ಎಂದರೆ ಯಾರು ಎಂಬ ಪ್ರಶ್ನೆ ರೂಪೇಶ್​ಗೆ ಮೂಡಿತು. ‘ಅವರು ಎಂದರೆ ಸಾನ್ಯಾನಾ’ ಎಂದು ಪ್ರಶ್ನೆ ಹಾಕಿದರು ರೂಪೇಶ್. ಹೀಗೆ ಹೇಳುತ್ತಿದ್ದಂತೆ ಮನೆ ಮಂದಿ ಎಲ್ಲರೂ ನಕ್ಕರು. ‘ಅವಳು ನನ್ನ ಬೆಸ್ಟ್​ಫ್ರೆಂಡ್ ಅಷ್ಟೇ’ ಎಂದು ರೂಪೇಶ್ ಮತ್ತೊಮ್ಮೆ ಸ್ಪಷ್ಟನೆ ನೀಡಿದರು.

 ಇದನ್ನೂ ಓದಿ: ರೂಪೇಶ್ ಶೆಟ್ಟಿ-ಸಾನ್ಯಾ ಮಧ್ಯೆ ಬಂದ ಕಾವ್ಯಶ್ರೀ ಗೌಡ; ಐಯ್ಯರ್ ಕಣ್ಣಲ್ಲಿ ತುಂಬಿತು ನೀರು

‘ಬಿಗ್ ಬಾಸ್ ಶುರುವಾದಾಗ ಪ್ರೀತಿ ಮಾಡಿ ಅಂತ ನಾನು ಬಂದು ಹೇಳಿಕೊಟ್ನಾ? ಅದು ಒಂದನ್ನು ಮಾಡಲ್ಲ ಅಂತ ಹೇಳಿ ಹೋಗಿದ್ರಿ’ ಎಂದು ಸುದೀಪ್ ಕಾಲೆಳೆದರು.  ಆಗ ರೂಪೇಶ್ ಮತ್ತಷ್ಟು ಗೊಂದಲಕ್ಕೆ ಸಿಲುಕಿದರು.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ