‘ನಾಯಕ ಆಗೋ ಜಾಗದಲ್ಲಿ ಜೋಕರ್​ ಆಗಬೇಡಿ’; ಅರುಣ್ ಸಾಗರ್​ಗೆ ಸುದೀಪ್ ಎಚ್ಚರಿಕೆ

ಅರುಣ್ ಸಾಗರ್-ನವಾಜ್ ಹಾಗೂ ಆರ್ಯವರ್ಧನ್ ಗುರೂಜಿ-ದರ್ಶ್ ಆಟಕ್ಕೆ ಇಳಿದಿದ್ದರು. ಈ ಆಟ ಅವರಿಗೆ ಕಷ್ಟ ಎನಿಸಿತ್ತು. ಈ ವೇಳೆ ಕಾಮಿಡಿ ಮಾಡುತ್ತಾ ಸಮಯ ಕಳೆದಿದ್ದರು.

‘ನಾಯಕ ಆಗೋ ಜಾಗದಲ್ಲಿ ಜೋಕರ್​ ಆಗಬೇಡಿ’; ಅರುಣ್ ಸಾಗರ್​ಗೆ ಸುದೀಪ್ ಎಚ್ಚರಿಕೆ
ಅರುಣ್ ಸಾಗರ್-ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 01, 2022 | 10:07 PM

‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ 18 ಸ್ಪರ್ಧಿಗಳು ಒಂದು ವಾರ ಪೂರ್ಣಗೊಳಿಸಿದ್ದಾರೆ. ಈ ವಾರ ಒಂದಷ್ಟು ಫನ್ ಇತ್ತು, ಕಿತ್ತಾಟ ಇತ್ತು. ವೀಕೆಂಡ್​ನಲ್ಲಿ ಸುದೀಪ್ ಅವರು ಬಂದು ಎಲ್ಲ ಸ್ಪರ್ಧಿಗಳ ಜತೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ ಒಂದಷ್ಟು ಜನರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ಪೈಕಿ ಅರುಣ್ ಸಾಗರ್​ಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಅರುಣ್ ಸಾಗರ್ ನಡೆದುಕೊಂಡ ರೀತಿಯೇ ಕಾರಣ. ಇದಕ್ಕೆ ಸುದೀಪ್ (Sudeep) ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಅರುಣ್ ಸಾಗರ್ (Arun Sagar) ಕ್ಷಮೆ ಕೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈ ವಾರ ಟಾಸ್ಕ್​ ಒಂದನ್ನು ನೀಡಲಾಗಿತ್ತು. ತ್ರಿಕೋನಾಕಾರದ ಬಾಕ್ಸ್​ನಲ್ಲಿ ಬಾಲ್​ಗಳನ್ನು ಜೋಡಿಸಿ ಪಿರಾಮಿಡ್ ಆಕಾರ ಮಾಡಬೇಕು.ಅರುಣ್ ಸಾಗರ್-ನವಾಜ್ ಹಾಗೂ ಆರ್ಯವರ್ಧನ್ ಗುರೂಜಿ-ದರ್ಶ್ ಆಟಕ್ಕೆ ಇಳಿದಿದ್ದರು. ಈ ಆಟ ಅವರಿಗೆ ಕಷ್ಟ ಎನಿಸಿತ್ತು. ಈ ವೇಳೆ ಕಾಮಿಡಿ ಮಾಡುತ್ತಾ ಸಮಯ ಕಳೆದಿದ್ದರು. ಅವರು ಜೋಕರ್​ನಂತೆ ನಡೆದುಕೊಂಡಿದ್ದರು. ಇದು ಮನೆಯವರ ಕೋಪಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ
Image
‘ಅವರು ಅಂದ್ರೆ ನಂಗೆ ತುಂಬಾ ಇಷ್ಟ’; ಐಶ್ವರ್ಯಾ ಬಳಿಕ ದೀಪಿಕಾ ಕಡೆ ವಾಲಿದ್ರಾ ಸೈಕ್ ನವಾಜ್​?
Image
ರೂಪೇಶ್ ಶೆಟ್ಟಿ-ಸಾನ್ಯಾ ಮಧ್ಯೆ ಬಂದ ಕಾವ್ಯಶ್ರೀ ಗೌಡ; ಐಯ್ಯರ್ ಕಣ್ಣಲ್ಲಿ ತುಂಬಿತು ನೀರು
Image
ನೀತಿ ಪಾಠ, ಹೋರಾಟದ ವಿಚಾರಕ್ಕೆ ಬೇಸರಗೊಂಡ ಸ್ಪರ್ಧಿಗಳು; ‘ಬಿಗ್ ಬಾಸ್​’ನಲ್ಲಿ ಕಳಪೆ ಆದ ರೂಪೇಶ್ ರಾಜಣ್ಣ
Image
ಅರುಣ್​ ಸಾಗರ್​ ಪುತ್ರಿಯ ‘ಕೆಜಿಎಫ್​ 2’ ಸಾಂಗ್​ ಸೂಪರ್​ ಹಿಟ್​; ಒಂದು ದಿನದೊಳಗೆ 4.7 ಮಿಲಿಯನ್​ ವೀಕ್ಷಣೆ

ಕಳಪೆ ಕೊಡುವಾಗ ಅನೇಕರು ಅರುಣ್ ಸಾಗರ್ ಬಗ್ಗೆ ಈ ವಿಚಾರದಲ್ಲಿ ಕಮೆಂಟ್ ಮಾಡಿದ್ದರು. ಸಾನ್ಯಾ, ರೂಪೇಶ್ ಶೆಟ್ಟಿ ಇದೇ ವಿಚಾರಕ್ಕೆ ಅರುಣ್ ಸಾಗರ್​ಗೆ ಕಳಪೆ ನೀಡಿದರು. ಇದಕ್ಕೆ ಅರುಣ್ ಸಾಗರ್ ಸಿಟ್ಟಾಗಿದ್ದರು. ರೂಪೇಶ್​ ವಿರುದ್ಧ ಪರೋಕ್ಷವಾಗಿ ಅರುಣ್ ಸಾಗರ್ ಸಿಡುಕಿದ್ದರು.

ಈ ಬಗ್ಗೆ ಸುದೀಪ್ ವೀಕೆಂಡ್​ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಅರುಣ್ ಸಾಗರ್ ಅವರೇ ನೀವು ಫೆಂಟಾಸ್ಟಿಕ್ ಎಂಟರ್​ಟೇನರ್​. ಮನೆ ಒಳಗೆ ಇರುವ ಎಲ್ಲವನ್ನೂ ಸುಲಭವಾಗಿ ತೆಗೆದುಕೊಳ್ಳಬೇಡಿ. ಟಾಸ್ಕ್​ನ ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಆದರೆ, ವಿದೂಷಕನಾದ್ರಿ. ನಾಯಕ ಆಗೋ ಜಾಗದಲ್ಲಿ ಜೋಕರ್ ಆಗಬೇಡಿ. ಜೋಕರ್ ಆಗೋ ಜಾಗದಲ್ಲಿ ನಾಯಕನಾಗಬೇಡಿ’ ಎಂದು ಸುದೀಪ್ ಎಚ್ಚರಿಕೆ ನೀಡಿದರು. ಅರುಣ್ ಸಾಗರ್ ಅವರಿಗೆ ತಪ್ಪಿನ ಅರಿವಾಗಿದೆ.

Published On - 9:51 pm, Sat, 1 October 22

ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!