AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರು ಅಂದ್ರೆ ನಂಗೆ ತುಂಬಾ ಇಷ್ಟ’; ಐಶ್ವರ್ಯಾ ಬಳಿಕ ದೀಪಿಕಾ ಕಡೆ ವಾಲಿದ್ರಾ ಸೈಕ್ ನವಾಜ್​?

ಬಿಗ್ ಬಾಸ್​ಗೆ ಬಂದ ಆರಂಭದಲ್ಲೇ ನವಾಜ್ ಅವರು ಐಶ್ವರ್ಯಾ ಬಗ್ಗೆ ಮಾತನಾಡಿದ್ದರು. ಅವರೆಂದರೆ ನಂಗೆ ಸಖತ್ ಇಷ್ಟ ಎಂಬ ಮಾತನ್ನು ಹೇಳಿದ್ದರು. ಇತ್ತೀಚಿನ ಎಪಿಸೋಡ್​ನಲ್ಲಿ ನೇರವಾಗಿ ಹೋಗಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ್ದರು.

‘ಅವರು ಅಂದ್ರೆ ನಂಗೆ ತುಂಬಾ ಇಷ್ಟ’; ಐಶ್ವರ್ಯಾ ಬಳಿಕ ದೀಪಿಕಾ ಕಡೆ ವಾಲಿದ್ರಾ ಸೈಕ್ ನವಾಜ್​?
ನವಾಜ್​-ದೀಪಿಕಾ
TV9 Web
| Edited By: |

Updated on: Oct 01, 2022 | 3:58 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ (BBK 9) ಸಾಕಷ್ಟು ವಿಚಾರಗಳು ಹೈಲೈಟ್ ಆಗುತ್ತಿವೆ. ಸ್ಪರ್ಧಿಗಳಿಗೆ ನವಾಜ್ ಬದಲಾವಣೆ ಸಾಕಷ್ಟು ಇಷ್ಟವಾಗಿದೆ. ಆರಂಭದಲ್ಲಿ ಬಂದಾಗ ಸಿಟ್ಟು ಮಾಡುತ್ತಾ, ಕೂಗಾಡುತ್ತಾ ಇರುತ್ತಿದ್ದ ನವಾಜ್ ಈಗ ಶಾಂತಮೂರ್ತಿ ಆಗಿದ್ದಾರೆ. ಇದರ ಜತೆಗೆ ಅವರು ಮತ್ತೊಂದು ವಿಚಾರಕ್ಕೂ ಸುದ್ದಿ ಆಗಿದ್ದಾರೆ. ಐಶ್ವರ್ಯಾ ಪಿಸ್ಸೆ (Aishwarya Pissay) ಅವರನ್ನು ಕಂಡರೆ ನವಾಜ್​​ಗೆ​ ಸಖತ್ ಇಷ್ಟ. ಅವರಿಗೆ ಪ್ರಪೋಸ್ ಕೂಡ ಮಾಡಿದ್ದರು ನವಾಜ್. ಈಗ ದೀಪಿಕಾ ದಾಸ್ ಬಳಿ ಹೋಗಿ ‘ನೀವು ಅಂದ್ರೆ ನಂಗೆ ಇಷ್ಟ’ ಎಂದು ನವಾಜ್ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್​ಗೆ ಬಂದ ಆರಂಭದಲ್ಲೇ ನವಾಜ್ ಅವರು ಐಶ್ವರ್ಯಾ ಬಗ್ಗೆ ಮಾತನಾಡಿದ್ದರು. ಅವರೆಂದರೆ ನಂಗೆ ಸಖತ್ ಇಷ್ಟ ಎಂಬ ಮಾತನ್ನು ಹೇಳಿದ್ದರು. ಇತ್ತೀಚಿನ ಎಪಿಸೋಡ್​ನಲ್ಲಿ ನೇರವಾಗಿ ಹೋಗಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ್ದರು. ಈ ಎಪಿಸೋಡ್ ಸಖತ್ ಫನ್ನಿ ಆಗಿತ್ತು. ಇದಾದ ಬಳಿಕ ದೀಪಿಕಾ ದಾಸ್​ಗೆ ‘ನೀವು ಅಂದ್ರೆ ನಂಗೆ ತುಂಬಾ ಇಷ್ಟ’ ಎಂದಿದ್ದಾರೆ ನವಾಜ್. ಅಷ್ಟಕ್ಕೂ ನವಾಜ್ ಹೀಗೆ ಹೇಳಿದ್ದೇಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅನುಪಮಾ ಗೌಡ, ದೀಪಿಕಾ ದಾಸ್ ಮೊದಲಾದವರು ಟ್ರುತ್ ಆ್ಯಂಡ್ ಡೇರ್ ಆಟ ಆಡುತ್ತಿದ್ದರು. ಆಗ ದೀಪಿಕಾಗೆ ಡೇರ್ ಆಯ್ಕೆ ಬಂದಿದೆ. ಇದರ ಅನುಸಾರ ಅವರು ನವಾಜ್ ಬಳಿ ಹೋಗಿ ‘ಐಶ್ವರ್ಯಾ ಅವರು ಯಾಕೆ ಇಷ್ಟ ಆಗ್ತಾರೆ? ದೀಪಿಕಾ ದಾಸ್ ಇಷ್ಟ ಆಗಲ್ಲ’ ಅನ್ನೋದನ್ನು ಕೇಳಬೇಕು ಹಾಗೂ ನವಾಜ್​ ಬಳಿ ‘ನೀವು ಇಷ್ಟ’ ಎಂಬ ಮೆಚ್ಚುಗೆಯ ಮಾತನ್ನು ಹೇಳಿಸಿಕೊಳ್ಳಬೇಕು ಎಂದಿತ್ತು.

ಇದನ್ನೂ ಓದಿ
Image
‘ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ’; ಬಿಗ್ ಬಾಸ್​ನಲ್ಲಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ ನವಾಜ್
Image
ಬಿಗ್ ಬಾಸ್​​ನಲ್ಲಿ ದಿವ್ಯಾ ಉರುಡುಗ ಟಾಸ್ಕ್​ ಆಡಿದ ಪರಿಗೆ ನಿಬ್ಬೆರಗಾದ ಮನೆ ಮಂದಿ
Image
BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ
Image
ನೀಲಕುರಂಜಿ ಹೂಗಳ ಸೌಂದರ್ಯಕ್ಕೆ ಮಾರು ಹೋದ ಬಿಗ್ ಬಾಸ್ ಬೆಡಗಿ ದಿವ್ಯಾ ಉರುಡುಗ

ಇದನ್ನೂ ಓದಿ: ‘ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ’; ಬಿಗ್ ಬಾಸ್​ನಲ್ಲಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ ನವಾಜ್

ಈ ಕಾರಣಕ್ಕೆ ನವಾಜ್ ಬಳಿ ತೆರಳಿದ ದೀಪಿಕಾ, ‘ಐಶ್ವರ್ಯಾ ಇಷ್ಟ ಆಗೋಕೆ ಕಾರಣ ಏನು? ನಾನು ಅಂದ್ರೆ ಯಾಕೆ ಇಷ್ಟ ಇಲ್ಲವೇ?’ ಎಂದು ಕೇಳಿದ್ದಾರೆ. ‘ಅವರದ್ದು ನ್ಯಾಚುರಲ್ ಬ್ಯೂಟಿ. ಅದೊಂದೇ ಅಲ್ಲ, ನೀವು ನನಗಿಂತ ದೊಡ್ಡವರು’ ಎಂದರು ನವಾಜ್. ‘ಇಷ್ಟ ಆಗೋಕೆ ಏಕೆ ವಯಸ್ಸು? ನಾನು ಚೆನ್ನಾಗಿದ್ದೇನೆ ಅಂತ ಹೇಳು’ ಎಂದು ಬೇಡಿಕೆ ಇಟ್ಟಿದ್ದಾರೆ ದೀಪಿಕಾ. ಈ ಕಾರಣಕ್ಕೆ ‘ಬಿಗ್ ಬಾಸ್, ದೀಪಿಕಾ ಕಂಡ್ರೆ ನಂಗೆ ತುಂಬಾ ಇಷ್ಟ’ ಎಂದು ಹೇಳಿದ್ದಾರೆ ನವಾಜ್.