‘ನೀವು ನನ್ನನ್ನು ಆ ದೃಷ್ಟಿಕೋನದಲ್ಲಿ ನೋಡಬೇಡಿ’; ಪ್ರಶಾಂತ್ ಸಂಬರ್ಗಿಗೆ ಸಾನ್ಯಾ ಐಯ್ಯರ್ ಮನವಿ

ಸಾನ್ಯಾ ಐಯ್ಯರ್ ಬಳಿ ‘ಕಲಾವಿದ’ ಎಂಬ ಟ್ಯಾಗ್ ಇತ್ತು. ಇದನ್ನು ಪ್ರಶಾಂತ್ ಸಂಬರ್ಗಿಗೆ ನೀಡಿದ್ದ ಸಾನ್ಯಾ, ‘ಪ್ರಶಾಂತ್ ಸಂಬರ್ಗಿ ಅವರಲ್ಲಿ ಕುತಂತ್ರ ಬುದ್ಧಿ ಹೆಚ್ಚಿದೆ. ಕಲಾವಿದರಿಗೆ ಮಾತ್ರ ಅದು ಸಾಧ್ಯ’ ಎಂದಿದ್ದರು. ಈ ಬಗ್ಗೆ ಸುದೀಪ್ ಅವರು ಸಾನ್ಯಾಗೆ ಕ್ಲಾಸ್ ತೆಗೆದುಕೊಂಡಿದ್ದರು.

‘ನೀವು ನನ್ನನ್ನು ಆ ದೃಷ್ಟಿಕೋನದಲ್ಲಿ ನೋಡಬೇಡಿ’; ಪ್ರಶಾಂತ್ ಸಂಬರ್ಗಿಗೆ ಸಾನ್ಯಾ ಐಯ್ಯರ್ ಮನವಿ
ಪ್ರಶಾಂತ್​-ಸಾನ್ಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 03, 2022 | 10:17 PM

ಕಳೆದ ವಾರ ಪ್ರಶಾಂತ್ ಸಂಬರ್ಗಿ (Prashanth Sambargi) ಬಗ್ಗೆ ಸಾನ್ಯಾ ಐಯ್ಯರ್ ಅವರು ಒಂದು ಮಾತನ್ನು ಹೇಳಿದ್ದರು. ಈ ಮಾತು ಹಲವು ದಿನಗಳ ಕಾಲ ಚರ್ಚೆಯಲ್ಲಿದೆ. ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ಇದೇ ವಿಚಾರ ಪ್ರಸ್ತಾಪ ಮಾಡಿದ್ದರು. ಸುದೀಪ್ ಈ ಮಾತನ್ನು ಹೇಳಿದ ನಂತರದಲ್ಲಿ ಪ್ರಶಾಂತ್ ಸಂಬರ್ಗಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾನ್ಯಾ ಎದುರು ಪದೇಪದೇ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ ಪ್ರಶಾಂತ್​. ಇದಕ್ಕೆ ಸಾನ್ಯಾ ಐಯ್ಯರ್ (Sanya Iyer) ಸಿಟ್ಟಾಗಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವಾಗ ಎಲ್ಲರಿಗೂ ಒಂದು ಬ್ಯಾಂಡ್ ನೀಡಲಾಗಿತ್ತು. ಎಲ್ಲಾ ಬ್ಯಾಂಡ್​ಗಳ ಮೇಲೆ ಒಂದು ಒಳ್ಳೆಯ ಗುಣದ ಹೆಸರು ಬರೆದಿತ್ತು. ಸಾನ್ಯಾ ಐಯ್ಯರ್ ಬಳಿ ‘ಕಲಾವಿದ’ ಎಂಬ ಟ್ಯಾಗ್ ಇತ್ತು. ಇದನ್ನು ಪ್ರಶಾಂತ್ ಸಂಬರ್ಗಿಗೆ ನೀಡಿದ್ದ ಸಾನ್ಯಾ, ‘ಪ್ರಶಾಂತ್ ಸಂಬರ್ಗಿ ಅವರಲ್ಲಿ ಕುತಂತ್ರ ಬುದ್ಧಿ ಹೆಚ್ಚಿದೆ. ಕಲಾವಿದರಿಗೆ ಮಾತ್ರ ಅದು ಸಾಧ್ಯ’ ಎಂದಿದ್ದರು. ಈ ಬಗ್ಗೆ ಸುದೀಪ್ ಅವರು ಸಾನ್ಯಾಗೆ ಕ್ಲಾಸ್ ತೆಗೆದುಕೊಂಡಿದ್ದರು.

‘ನಾವು ಬ್ಯಾಂಡ್​ನ ಒಳ್ಳೆಯ ಕಾರಣಕ್ಕೆ ನೀಡಿದ್ದು. ಆದರೆ, ಕುತಂತ್ರಿ ಎಂಬ ಶಬ್ದವನ್ನು ನೀವೇ ಸೇರಿಸಿಕೊಂಡಿರಿ. ಆ ರೀತಿ ಮಾಡಬಾರದಿತ್ತು’ ಎಂದು ಸಾನ್ಯಾಗೆ ಸುದೀಪ್ ಹೇಳಿದ್ದರು. ಆ ಬಳಿಕ ಪ್ರಶಾಂತ್ ಸಂಬರ್ಗಿ ಅವರು ಈ ಬಗ್ಗೆ ಚರ್ಚೆ ಮಾಡಿದ್ದರು. ‘ನೀವು ನನಗೆ ಕುತಂತ್ರಿ ಎಂದಿದ್ದೀರಾ’ ಎಂದು ಸಾನ್ಯಾಗೆ ಪ್ರಶಾಂತ್ ಸಂಬರ್ಗಿ ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ
Image
‘ಬಿಗ್ ಬಾಸ್ ಕನ್ನಡ ಸೀಸನ್ 9’ ಸೇರಿದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ
Image
ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬೈಕ್ ರೇಸರ್ ಐಶ್ವರ್ಯಾ, ‘ಮಂಗಳಗೌರಿ ಮದುವೆ’ ಖ್ಯಾತಿಯ ಕಾವ್ಯಶ್ರೀ
Image
ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್​; ಇವರ ವಿಶೇಷತೆಗಳೇನು?
Image
ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ

ನಂತರ ಪ್ರಶಾಂತ್ ಸಂಬರ್ಗಿ ಸಾನ್ಯಾ ಅವರನ್ನು ಮತ್ತೆ ಪ್ರಶ್ನೆ ಮಾಡಿದರು. ‘ನಾನು ಕುಂತತ್ರಿ ಎಂದು ಹೇಳಿದ್ದಕ್ಕೆ ನಿಮಗೆ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ, ನನ್ನ ಮಾತನ್ನು ಹಿಂಪಡೆಯಲ್ಲ. ನೀವು ನನಗೆ ಆ ರೀತಿ ಕಂಡಿರಿ. ಹಾಗಾಗಿ ಹೇಳಿದೆ ಎಂದರು ಸಾನ್ಯಾ. ‘ಹಾಲು ಒಡೆದು ಹೋಗಿದೆ, ಗಾಜು ಕೂಡ ಒಡೆದು ಹೋಗಿದೆ. ಅದನ್ನು ಸರಿ ಮಾಡೋಕೆ ಆಗಲ್ಲ ಬಿಡಿ’ ಎಂದು ಪ್ರಶಾಂತ್ ಸಂಬರ್ಗಿ ಹೇಳಿದರು.

ಇದನ್ನೂ ಓದಿ: ಸಿಟ್ಟಲ್ಲಿ ರಾಕೇಶ್ ಅಡಿಗ ಕಾಲರ್ ಹಿಡಿದ ಪ್ರಶಾಂತ್ ಸಂಬರ್ಗಿ; ಮನೆಯವರಿಗೆ ಹೆಚ್ಚಿತು ಟೆನ್ಷನ್

‘ನಮ್ಮಿಬ್ಬರ ಮಧ್ಯೆ ಈ ಚರ್ಚೆ ಬೇಡ. ನನ್ನನ್ನು ಚಿಕ್ಕವನು ಎಂದುಕೊಳ್ಳಬೇಡಿ. ನೀವು ನನ್ನನ್ನು ಆ ದೃಷ್ಟಿಕೋನದಲ್ಲಿ ನೋಡಬೇಡಿ. ನಾನು ನಿಮ್ಮನ್ನು ಆ ದೃಷ್ಟಿಕೋನದಲ್ಲಿ ನೋಡಲ್ಲ’ ಎಂದು ಮನವಿ ಮಾಡಿಕೊಂಡಿದ್ದಾರೆ ಸಾನ್ಯಾ ಐಯ್ಯರ್.

Published On - 9:58 pm, Mon, 3 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ