ಸಿಟ್ಟಲ್ಲಿ ರಾಕೇಶ್ ಅಡಿಗ ಕಾಲರ್ ಹಿಡಿದ ಪ್ರಶಾಂತ್ ಸಂಬರ್ಗಿ; ಮನೆಯವರಿಗೆ ಹೆಚ್ಚಿತು ಟೆನ್ಷನ್

ಈ ಐಡಿಯಾ ಬಂದಿದ್ದೇ ಬಾಯಲ್ಲಿ ಪೇಸ್ಟ್ ಹಾಕಿಕೊಂಡ ರಾಕೇಶ್ ಅವರು ಗಾರ್ಡನ್ ಏರಿಯಾಗೆ ಬಂದು ಬಿದ್ದರು. ಪಿಡ್ಸ್ ಬಂದ ರೀತಿಯಲ್ಲಿ ಒದ್ದಾಡಿದರು.

ಸಿಟ್ಟಲ್ಲಿ ರಾಕೇಶ್ ಅಡಿಗ ಕಾಲರ್ ಹಿಡಿದ ಪ್ರಶಾಂತ್ ಸಂಬರ್ಗಿ; ಮನೆಯವರಿಗೆ ಹೆಚ್ಚಿತು ಟೆನ್ಷನ್
ಪ್ರಶಾಂತ್​-ರಾಕೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 02, 2022 | 6:30 AM

ಪ್ರಶಾಂತ್ ಸಂಬರ್ಗಿ (Prashanth Sambargi) ಅವರು ‘ಬಿಗ್ ಬಾಸ್’ ಮನೆಗೆ ಎರಡನೇ ಬಾರಿಗೆ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಸೀಸನ್​ನಲ್ಲಿ ಅವರು ಹೋರಾಟ ವಿಚಾರ ಪ್ರಸ್ತಾಪಿಸಿ ಹಾಗೂ ಏರು ಧ್ವನಿಯಲ್ಲಿ ಮಾತನಾಡಿ ಹೈಲೈಟ್ ಆಗಿದ್ದರು. ಈ ಬಾರಿ ಅವರು ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ದೊಡ್ಮನೆಯಲ್ಲಿ ಕೋಪ ಕಡಿಮೆ ಮಾಡಿಕೊಳ್ತೀನಿ ಎಂದು ಹೇಳಿದ್ದರು. ಆದರೆ, ಅದು ಆಗಿಲ್ಲ. ಈ ವಾರವೂ ಅವರು ಸಿಟ್ಟು ಮಾಡಿಕೊಳ್ಳುತ್ತಿದಾರೆ. ಮೊದಲ ವಾರದಲ್ಲೇ ಅವರು ರಾಕೇಶ್ ಅಡಿಗ (Rakesh Adiga) ಕಾಲರ್ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಮನೆಯ ವಾತಾವರಣ ತುಂಬಾನೇ ಹೀಟ್ ಆಗಿತ್ತು.

ರಾಕೇಶ್ ಅಡಿಗ ಹಾಗೂ ಅನುಪಮಾ ಗೌಡ ಅವರು ಜೈಲಿನ ಸಮೀಪ ಇದ್ದರು. ಎಲ್ಲರನ್ನೂ ಪ್ರ್ಯಾಂಕ್ ಮಾಡುವ ನಿರ್ಧಾರಕ್ಕೆ ಅನುಪಮಾ ಹಾಗೂ ರಾಕೇಶ್ ಬಂದರು. ಈ ಐಡಿಯಾ ಬಂದಿದ್ದೇ ಬಾಯಲ್ಲಿ ಪೇಸ್ಟ್ ಹಾಕಿಕೊಂಡ ರಾಕೇಶ್ ಅವರು ಗಾರ್ಡನ್ ಏರಿಯಾಗೆ ಬಂದು ಬಿದ್ದರು. ಪಿಡ್ಸ್ ಬಂದ ರೀತಿಯಲ್ಲಿ ಒದ್ದಾಡಿದರು. ಅಮೂಲ್ಯ ಗೌಡ ಅವರು ನಗುತ್ತಲೇ ಜೋರಾಗಿ ಕೂಗಿ ಮನೆ ಮಂದಿಯನ್ನು ಕರೆದರು.

‘ರಾಕೇಶ್ ಬಿದ್ದಿದ್ದಾರೆ. ಕಬ್ಬಿಣ ಹಿಡಿದುಕೊಂಡು ಬನ್ನಿ ಪ್ಲೀಸ್​’ ಎಂದು ಕರೆದರು. ಮನೆ ಮಂದಿಯೆಲ್ಲ ಆತಂಕದಿಂದ ಓಡಿ ಬಂದರು. ಪ್ರಶಾಂತ್ ಸಂಬರ್ಗಿ ಅವರಂತೂ ಸಾಕಷ್ಟು ಆತಂಕಗೊಂಡರು. ಮನೆಯಲ್ಲಿ ಆತಂಕದ ವಾತಾವರಣ ಹೆಚ್ಚುತ್ತಿದ್ದಂತೆ ‘ಇದು ಪ್ರ್ಯಾಂಕ್’ ಎಂದು ನಕ್ಕಿದ್ದಾರೆ ರಾಕೇಶ್. ಇದನ್ನು ನೋಡಿ ಪ್ರಶಾಂತ್ ಸಂಬರ್ಗಿಗೆ ಸಿಟ್ಟು ಬಂದಿದೆ.

ಇದನ್ನೂ ಓದಿ
Image
‘ಬಿಗ್ ಬಾಸ್ ಕನ್ನಡ ಸೀಸನ್ 9’ ಸೇರಿದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ
Image
ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬೈಕ್ ರೇಸರ್ ಐಶ್ವರ್ಯಾ, ‘ಮಂಗಳಗೌರಿ ಮದುವೆ’ ಖ್ಯಾತಿಯ ಕಾವ್ಯಶ್ರೀ
Image
ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್​; ಇವರ ವಿಶೇಷತೆಗಳೇನು?
Image
ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ

ಇದನ್ನೂ ಓದಿ: ‘ಕನ್ನಡ ಹೋರಾಟದ ವಿಚಾರ ಬಂದ್ರೆ ಸಂಬರ್ಗಿ ಉರ್ಕೋತಾರೆ’; ಪ್ರಶಾಂತ್-ರೂಪೇಶ್ ರಾಜಣ್ಣ ಮಧ್ಯೆ ನಡೆಯಿತು ಘೋರ ಜಗಳ

ರಾಕೇಶ್ ಕಾಲರ್ ಹಿಡಿದ ಪ್ರಶಾಂತ್ ಸಂಬರ್ಗಿ ‘ರಾಕೇಶ್ ಇದು ಸರಿ ಅಲ್ಲ. ಈ ರೀತಿ ಮಾಡೋದ್ರಿಂದ ನೀವು ಆ ರೋಗಕ್ಕೆ, ಆ ರೋಗ ಬಂದವರಿಗೆ ಅವಮಾನ ಮಾಡಿದ್ದೀರಿ. ನನ್ನ ಮಗನಿಗೂ ಇದೇ ರೀತಿಯ ಕಾಯಿಲೆ ಇತ್ತು. ಆತ ನಿಂತಲ್ಲೇ ನಿಂತು ಬಿಡುತ್ತಿದ್ದ. ಚಿಕಿತ್ಸೆ ಕೊಡಿಸಿ ಕೊಡಿಸಿ ಆತನಿಗೆ ಕಾಯಿಲೆ ಈಗ ಗುಣಮುಖ ಆಗಿದೆ. ನನ್ನ ಮಗನೇ ನನಗೆ ನೆನಪಿಗೆ ಬಂದ’ ಎಂದು ಪ್ರಶಾಂತ್ ಸಂಬರ್ಗಿ ಕಣ್ಣೀರು ಹಾಕಿದರು. ಈ ಪ್ರ್ಯಾಂಕ್​ನಲ್ಲಿ ಭಾಗಿ ಆದ ಅನೇಕರು ಪ್ರಶಾಂತ್ ಬಳಿ ಕ್ಷಮೆ ಕೇಳಿದರು. ಪ್ರಶಾಂತ್ ಸಂಬರ್ಗಿ ಅವರು ರಾಕೇಶ ಕಾಲರ್ ಹಿಡಿದಾಗ ಒಂದಷ್ಟು ಮಂದಿಗೆ ಆತಂಕ ಆಯಿತು.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ