ರಾಜನಂದಿನಿ ವಿಲಾಸದಿಂದ ಹೊಸ ಆರ್ಯವರ್ಧನ್​​ಗೆ ಶೀಘ್ರವೇ ಗೇಟ್​ಪಾಸ್​? ಕಾಡಿತು ಹೊಸ ಅನುಮಾನ

ಅನುನ ಕೊಲ್ಲಿಸಲು ಝೇಂಡೆ ಸುಪಾರಿ ನೀಡಿದ್ದ. ಅಸ್ಥಿ ಬಿಡಲು ನದಿ ಸಮೀಪ ಹೋದಾಗ ಆಕೆಯನ್ನು ಕೊಲ್ಲಲು ಪ್ಲ್ಯಾನ್ ರೂಪಿಸಲಾಗಿತ್ತು. ಆದರೆ, ಅಂದುಕೊಂಡಂತೆ ಆಗಿಲ್ಲ.

ರಾಜನಂದಿನಿ ವಿಲಾಸದಿಂದ ಹೊಸ ಆರ್ಯವರ್ಧನ್​​ಗೆ ಶೀಘ್ರವೇ ಗೇಟ್​ಪಾಸ್​? ಕಾಡಿತು ಹೊಸ ಅನುಮಾನ
ಆರ್ಯವರ್ಧನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 04, 2022 | 3:02 PM

‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿಯಲ್ಲಿ ಆರ್ಯವರ್ಧನ್ ಬದುಕಿರುವ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಆತ ಸಂಜು ಆಗಿ ರಾಜನಂದಿನಿ ವಿಲಾಸಕ್ಕೆ ಬಂದಿದ್ದಾನೆ. ಸ್ವತಃ ಆತನಿಗೆ ತಾನು ಆರ್ಯವರ್ಧನ್ (Aryavardhan) ಎಂಬ ವಿಚಾರ ಗೊತ್ತಾಗಿಲ್ಲ. ಇದಕ್ಕೆ ಕಾರಣ ಆತನ ತಲೆಗೆ ಬಿದ್ದಿರುವ ಏಟು ಹಾಗೂ ಮುಖಕ್ಕೆ ಮಾಡಿರುವ ಪ್ಲಾಸ್ಟಿಕ್ ಸರ್ಜರಿ. ರಾಜನಂದಿನಿ ವಿಲಾಸದಲ್ಲಿ ಸಂಜು ಒಂದಷ್ಟು ಸಮಯ ಕಳೆಯುತ್ತಿರುವುದರಿಂದ ಆತನಿಗೆ ಕೆಲವು ಹಳೆಯ ನೆನಪುಗಳು ಬರುತ್ತಿವೆ. ಅದಕ್ಕೂ ಮೊದಲೇ ಆತ ಮನೆ ಖಾಲಿ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂದು ಊಹಿಸಲಾಗುತ್ತಿದೆ. ಇದಕ್ಕೆ ಕಾರಣ ಆತನ ಮೇಲೆ ಎಲ್ಲರಿಗೂ ಅನುಮಾನ ಮೂಡಿರುವುದು.

ಆರ್ಯವರ್ಧನ್ ತಾಯಿ ಹೆಸರು ಪ್ರಿಯಾ. ತನ್ನ ಮತ್ತೊಂದು ಮಗ ವಿಶ್ವನ ಮುಖದ ಚರ್ಮವನ್ನು ಆರ್ಯವರ್ಧನ್​​ಗೆ ನೀಡೋಕೆ ಒಪ್ಪಿಕೊಂಡಿದ್ದು ಅವಳೇ. ಆದರೆ, ಆರ್ಯವರ್ಧನ್ ಬದುಕಿದ್ದಾನೆ ಎಂಬ ಸತ್ಯವನ್ನು ಆಕೆ ಮುಚ್ಚಿಡುತ್ತಾ ಬಂದಳು. ಇದರಿಂದ ಆಕೆ ಈಗ ಸಾಕಷ್ಟು ನೋವು ತಿನ್ನುತ್ತಿದ್ದಾಳೆ. ಆ ನೋವಿನಿಂದ ಆಕೆ ಸಾಕಷ್ಟು ನೊಂದಿದ್ದಾಳೆ. ಹೀಗಿರುವಾಗಲೇ ಹಲವು ಊಹಿಸಲಾಗದ ಘಟನೆಗಳು ನಡೆಯುತ್ತಿವೆ.

ಅನುನ ಕೊಲ್ಲಿಸಲು ಝೇಂಡೆ ಸುಪಾರಿ ನೀಡಿದ್ದ. ಅಸ್ಥಿ ಬಿಡಲು ನದಿ ಸಮೀಪ ಹೋದಾಗ ಆಕೆಯನ್ನು ಕೊಲ್ಲಲು ಪ್ಲ್ಯಾನ್ ರೂಪಿಸಲಾಗಿತ್ತು. ಆದರೆ, ಅಂದುಕೊಂಡಂತೆ ಆಗಿಲ್ಲ. ಅನು ನೀರಿಗೆ ಬಿದ್ದಾಗ ಸಂಜು ಅವಳನ್ನು ರಕ್ಷಿಸಿದ್ದಾನೆ. ಈ ಮೂಲಕ ರಾಜನಂದಿನಿ ವಿಲಾಸದ ಕುಟುಂಬದಲ್ಲಿ ಹೀರೋ ಆಗಿದ್ದಾನೆ. ಇದು ಅನೇಕರ ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ
Image
Anirudh Jatkar: ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಸಿಕ್ಕ ಸಂಬಳದ ಬಗ್ಗೆ ನೇರವಾಗಿ ಮಾತನಾಡಿದ ಅನಿರುದ್ಧ್​
Image
‘ಜೊತೆ ಜೊತೆಯಲಿ’ ತಂಡ ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ಅನಿರುದ್ಧ್​ ತಿರುಗೇಟು
Image
‘ಟಿಆರ್​ಪಿ ಕುಸಿಯಲು ಅನಿರುದ್ಧ್​ ಕಾರಣ, ಅವರು ಧಾರಾವಾಹಿಯಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಯಲ್ಲ’: ನಿರ್ಮಾಪಕ
Image
‘ಜೊತೆ ಜೊತೆಯಲಿ ಧಾರಾವಾಹಿ 2-3 ತಿಂಗಳಲ್ಲಿ ಮುಗಿಯಲಿದೆ’: ಅನಿರುದ್ಧ್​

ಹರ್ಷನ ಹೆಂಡತಿ ಮಾನ್ಸಿಗೆ ಈ ವಿಚಾರದಲ್ಲಿ ಸಾಕಷ್ಟು ಅನುಮಾನ ಮೂಡಿದೆ. ಆತ ಇಲ್ಲಿಗೆ ಬಂದಿರುವುದು, ಬಂದ ನಂತರ ಅನು ಜತೆ ಕ್ಲೋಸ್ ಆಗೋಕೆ ಪ್ರಯತ್ನ ಮಾಡುತ್ತಿರುವುದು ಈ ಎಲ್ಲಾ ವಿಚಾರಗಳಲ್ಲಿ ಮಾನ್ಸಿ ಅನುಮಾನ ವ್ಯಕ್ತಪಡಿಸಿದ್ದಾಳೆ. ಆದರೆ, ಇದನ್ನು ಹರ್ಷ ಅಲ್ಲ ಗಳೆದಿದ್ದಾನೆ. ಈ ರೀತಿಯ ಪರಿಸ್ಥಿತಿಯಲ್ಲೂ ಆಕೆ ಅನುಮಾನ ವ್ಯಕ್ತಪಡಿಸುತ್ತಿರುವ ಬಗ್ಗೆ ಹರ್ಷನಿಗೆ ಬೇಸರ ಉಂಟಾಗಿದೆ. ಅದನ್ನು ಹೆಂಡತಿಯ ಎದುರು ತೋರಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.

ಝೇಂಡೆಗೆ ಮೂಡಿದೆ ಅನುಮಾನ

ಸುಪಾರಿ ತೆಗೆದುಕೊಂಡ ವ್ಯಕ್ತಿಗಳು ಪ್ಲ್ಯಾನ್ ವಿಫಲವಾದ ಬಗ್ಗೆ ಬೇಸರ ಮಾಡಿಕೊಂಡಿದ್ದಾರೆ. ಅನು ನೀರಿಗೆ ಬಿದ್ದಾಗ ಆಕೆಯನ್ನು ರಕ್ಷಿಸಿದ ವ್ಯಕ್ತಿಯ ಮೇಲೆ ಇವರಿಗೆ ಕೋಪ ಬಂದಿದೆ. ಝೇಂಡೆ ಎದುರು ನಡೆದ ಘಟನೆಯನ್ನು ಸುಪಾರಿ ಕಿಲ್ಲರ್ಸ್ ವಿವರಿಸಿದ್ದಾರೆ. ಅನುನ ಕೊಲ್ಲಲು ಮಾಡಿದ ಸಂಚು ವಿಫಲವಾಯಿತು ಎನ್ನುವ ಬೇಸರ ಒಂದು ಕಡೆ ಆದರೆ, ಹೊಸದಾಗಿ ಎಂಟ್ರಿ ಕೊಟ್ಟ ವ್ಯಕ್ತಿ ಯಾರು ಎಂಬ ಬಗ್ಗೆ ಝೇಂಡೆಗೆ ಅನುಮಾನ ಮೂಡಿದೆ. ಇದನ್ನು ತಿಳಿದುಕೊಳ್ಳಲು ಆತ ಆಸ್ಪತ್ರೆಗೆ ಬಂದಿದ್ದಾನೆ. ಅಷ್ಟೇ ಅಲ್ಲ, ಸಂಜುನ ಭೇಟಿ ಮಾಡಿದ್ದಾನೆ.

ಇದನ್ನೂ ಓದಿ: ‘ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ’; ಫ್ಯಾನ್ಸ್​ಗೋಸ್ಕರ ಅನಿರುದ್ಧ್​ ಭಾವನಾತ್ಮಕ ಪೋಸ್ಟ್

ಅನುಗೆ ಸಂಜು ಔಷಧ ತಂದುಕೊಡುವ ಆತುರದಲ್ಲಿದ್ದ. ಆಗ ಝೇಂಡೆ ಎದುರಾಗಿದ್ದಾನೆ. ಪರಿಚಯ ಇರುವವರ ರೀತಿ ಝೇಂಡೆ ಮಾತನಾಡಿದ್ದಾನೆ. ಇದರಿಂದ ಸಂಜುಗೆ ಗೊಂದಲ ಆಗಿದೆ. ‘ನಾನು ಆತುರದಲ್ಲಿದ್ದೇನೆ. ನನ್ನ ಮೊಬೈಲ್​ ಸಂಖ್ಯೆ ತೆಗೆದುಕೊಳ್ಳಿ’ ಎಂದು ಹೇಳಿ ದೂರವಾಣಿ ಸಂಖ್ಯೆ ಕೊಟ್ಟು ಸಂಜು ಅಲ್ಲಿಂದ ತೆರಳಿದ್ದಾನೆ. ಸಂಜು ನೀಡಿದ ಮೊಬೈಲ್ ಸಂಖ್ಯೆ ಆರ್ಯವರ್ಧನ್​ನದ್ದು. ಹಳೆಯ ನೆನಪಿನಿಂದ ತನ್ನ ನಿಜವಾದ ಮೊಬೈಲ್ ಸಂಖ್ಯೆಯನ್ನು ಸಂಜು ನೀಡಿದ್ದಾನೆ. ಇದರಿಂದ ಝೇಂಡೆಗೆ ಅನುಮಾನ ಹೆಚ್ಚಾಗಿದೆ. ಆರ್ಯವರ್ಧನ್​ ಪಿಎ ಆಗಿದ್ದ ಮೀರಾ ಹೆಗಡೆ ಬಳಿಯೂ ಈ ವಿಚಾರವನ್ನು ಝೇಂಡೆ ಪ್ರಸ್ತಾಪ ಮಾಡಿದ್ದಾನೆ. ಈ ಎಲ್ಲಾ ಕಾರಣದಿಂದ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿ ಸಂಜು ಮನೆಯಿಂದ ಹೊರ ನಡೆಯಬೇಕಾದ ಪರಿಸ್ಥಿತಿ ಬಂದರೂ ಬರಬಹುದು ಎಂಬುದು ವೀಕ್ಷಕರ ಅಭಿಪ್ರಾಯ.

ಶ್ರೀಲಕ್ಷ್ಮಿ ಎಚ್.

Published On - 7:30 am, Tue, 4 October 22

ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್
ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್
ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ಜನವೋ ಜನ..!
ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ಜನವೋ ಜನ..!