BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ

Nawaz | Bigg Boss Kannada: ದಿನ ಕಳೆದಂತೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಆಟ ರಂಗೇರುತ್ತಿದೆ. ಈ ವಾರ ನವಾಜ್​ ಎಲಿಮಿನೇಟ್​ ಆಗಿದ್ದರಿಂದ ದೊಡ್ಮನೆ ಸದಸ್ಯರ ಸಂಖ್ಯೆ 16ಕ್ಕೆ ಕುಸಿದಿದೆ.

BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
ನವಾಜ್
Follow us
TV9 Web
| Updated By: ಮದನ್​ ಕುಮಾರ್​

Updated on:Oct 09, 2022 | 10:15 PM

ಕಿಚ್ಚ ಸುದೀಪ್​ ನಡೆಸಿಕೊಡುವ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ (Bigg Boss Kannada Season 9) ಎರಡನೇ ವಾರದ ಎಲಿಮಿನೇಷನ್​ ನಡೆದಿದೆ. ಈ ವಾರ ವೀಕ್ಷಕರಿಂದ ಕಡಿಮೆ ವೋಟ್​ ಪಡೆದ ನವಾಜ್​ (Bigg Boss Nawaz) ಅವರು ಬಿಗ್​ ಬಾಸ್​ ಮನೆಯಿಂದ ಹೊರಬಂದಿದ್ದಾರೆ. ಮಯೂರಿ, ನವಾಜ್​, ದರ್ಶ್​, ಅಮೂಲ್ಯ ಗೌಡ, ನೇಹಾ ಗೌಡ, ರೂಪೇಶ್​ ರಾಜಣ್ಣ, ಆರ್ಯವರ್ಧನ್​ ಗುರೂಜಿ, ಪ್ರಶಾಂತ್​ ಸಂಬರ್ಗಿ, ದೀಪಿಕಾ ದಾಸ್​ ನಾಮಿನೇಟ್​ ಆಗಿದ್ದರು. ಶನಿವಾರದ ಸಂಚಿಕೆಯಲ್ಲಿ ಆರ್ಯವರ್ಧನ್​, ದೀಪಿಕಾ ದಾಸ್​ ಮತ್ತು ಅಮೂಲ್ಯ ಸೇಫ್​ ಆಗಿದ್ದರು. ಭಾನುವಾರದ (ಅ.9) ಎಪಿಸೋಡ್​ನಲ್ಲಿ ನವಾಜ್​ ಎಲಿಮಿನೇಟ್​ (Bigg Boss Elimination) ಆದರು ಎಂಬುದನ್ನು ಕಿಚ್ಚ ಸುದೀಪ್​ ಘೋಷಿಸಿದರು. ಪ್ರಾಸದ ಮೂಲಕ ಸಿನಿಮಾ ವಿಮರ್ಶೆ ಮಾಡಿ ನವಾಜ್​ ಫೇಮಸ್​ ಆಗಿದ್ದರು. ಆದರೆ ಬಿಗ್​ ಬಾಸ್​ನಲ್ಲಿ ಅವರ ಪ್ರಾಸದ ಆಟ ನಡೆಯಲಿಲ್ಲ.

ದಿನ ಕಳೆದಂತೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಆಟ ರಂಗೇರುತ್ತಿದೆ. ಮೊದಲ ವಾರ ಬೈಕ್​ ರೇಸರ್​ ಐಶ್ವರ್ಯಾ ಪಿಸ್ಸೆ ಔಟ್​ ಆಗಿದ್ದರು. ಈ ವಾರ ನವಾಜ್​ ಎಲಿಮಿನೇಟ್​ ಆಗಿದ್ದರಿಂದ ದೊಡ್ಮನೆ ಸದಸ್ಯರ ಸಂಖ್ಯೆ 16ಕ್ಕೆ ಕುಸಿದಿದೆ. 100 ದಿನಗಳ ಕಾಲ ಈ ಆಟದಲ್ಲಿ ಸ್ಥಾನ ಉಳಿಸಿಕೊಳ್ಳಬೇಕು ಎಂಬುದು ಎಲ್ಲ ಸ್ಪರ್ಧಿಗಳ ಆಸೆ ಆಗಿರುತ್ತದೆ. ಅಲ್ಲಿಯವರೆಗೂ ಪೈಪೋಟಿ ನೀಡುವವರಿಗೆ ಫಿನಾಲೆಯಲ್ಲಿ ಸ್ಥಾನ ಸಿಗುತ್ತದೆ. ಅದಕ್ಕಾಗಿ ಪ್ರತಿವಾರದ ಎಲಿಮಿನೇಷನ್​ನಿಂದ ಬಚಾವ್​ ಆಗಬೇಕು.

ಈ ಬಾರಿ ಬಿಗ್​ ಬಾಸ್ ರಿಯಾಲಿಟಿ ಶೋನ ಆಟ ಭಿನ್ನವಾಗಿದೆ. 9 ಹಳೇ ಸ್ಪರ್ಧಿಗಳು ಹಾಗೂ 9 ಹೊಸ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದರು. ಅನುಭವ ಇರುವವರೆ ಜೊತೆಗೆ ಹೊಸಬರು ಹಣಾಹಣಿ ನಡೆಸುತ್ತಿದ್ದಾರೆ. ಸ್ಪರ್ಧಿಗಳು ವೀಕ್ಷಕರ ಗಮನ ಸೆಳೆಯಬೇಕು ಎಂಬ ಕಾರಣಕ್ಕೆ ಈ ಆಟದಲ್ಲಿ ಹತ್ತಾರು ತಂತ್ರಗಳನ್ನು ಮಾಡುತ್ತಾರೆ. ಟಾಸ್ಕ್​ಗಳನ್ನು ಚೆನ್ನಾಗಿ ಆಡುವುದರ ಜೊತೆಗೆ ಮನರಂಜನೆ ನೀಡುವುದು ಕೂಡ ತುಂಬ ಮುಖ್ಯ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರೂ ಆಟ ಮುಂದುವರಿಸಬೇಕಿದೆ.

ಇದನ್ನೂ ಓದಿ
Image
‘ಬಿಗ್ ಬಾಸ್ ಕನ್ನಡ ಸೀಸನ್ 9’ ಸೇರಿದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ
Image
ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬೈಕ್ ರೇಸರ್ ಐಶ್ವರ್ಯಾ, ‘ಮಂಗಳಗೌರಿ ಮದುವೆ’ ಖ್ಯಾತಿಯ ಕಾವ್ಯಶ್ರೀ
Image
ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್​; ಇವರ ವಿಶೇಷತೆಗಳೇನು?
Image
ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ

ಕಿಚ್ಚನ ಚಪ್ಪಾಳೆ ಪಡೆದ ಅನುಪಮಾ ಗೌಡ:

ನಟಿ ಮತ್ತು ನಿರೂಪಕಿ ಅನುಪಮಾ ಗೌಡ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಅವರ ಆಟದ ಪರಿಯನ್ನು ಸುದೀಪ್​ ಪ್ರಶಂಸಿಸಿದ್ದಾರೆ. ಈ ಮೆಚ್ಚುಗೆ ಸಿಕ್ಕಿದ್ದಕ್ಕೆ ಅನುಪಮಾ ಕೊಂಚ ಎಮೋಷನಲ್​ ಆದರು. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:15 pm, Sun, 9 October 22

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್