BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​

Bigg Boss Match Fixing: ಕಿಚ್ಚ ಸುದೀಪ್​ ಎದುರಲ್ಲೇ ಆರ್ಯವರ್ಧನ್​ ಗುರೂಜಿ ಅವರು ಈ ರೀತಿ ಮಾತನಾಡಿದ್ದನ್ನು ಕೇಳಿ ಎಲ್ಲರಿಗೂ ಶಾಕ್​ ಆಗಿದೆ. ಇದರ ಪರಿಣಾಮ ಏನಾಗಲಿದೆ ಎಂಬ ಪ್ರಶ್ನೆ ಮೂಡಿದೆ.

BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
ಆರ್ಯವರ್ಧನ್ ಗುರೂಜಿ, ಕಿಚ್ಚ ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 16, 2022 | 5:10 PM

ಸಂಖ್ಯಾಶಾಸ್ತ್ರದ ಮೂಲಕ ಗುರುತಿಸಿಕೊಂಡಿದ್ದ​ ಆರ್ಯವರ್ಧನ್​ ಗುರೂಜಿ (Aryavardhan Guruji) ಅವರಿಗೆ ಬಿಗ್ ಬಾಸ್​ ಶೋ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿದೆ. ಅನಿಸಿದ್ದನ್ನು ನೇರವಾಗಿ ಹೇಳುವ ಅವರ ಗುಣದ ಬಗ್ಗೆ ಅನೇಕ ಬಾರಿ ಚರ್ಚೆ ಆಗಿದ್ದುಂಟು. ಈಗ ಆರ್ಯವರ್ಧನ್​ ಗುರೂಜಿ ಅವರು ಬಿಗ್​​ ಬಾಸ್​ (Bigg Boss Kannada Season 9) ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ ಹೊರಿಸಿದ್ದಾರೆ. ಇದರಿಂದ ಎಲ್ಲರಿಗೂ ಶಾಕ್​ ಆಗಿದೆ. ‘ಸೂಪರ್​ ಸಂಡೇ ವಿತ್​ ಸುದೀಪ’ ಸಂಚಿಕೆಯಲ್ಲಿ ಈ ಘಟನೆ ನಡೆದಿದೆ. ಆರ್ಯವರ್ಧನ್​ ಗುರೂಜಿ ಮಾಡಿದ ಆರೋಪಕ್ಕೆ ಕಿಚ್ಚ ಸುದೀಪ್​ (Kichcha Sudeep) ಅವರು ಖಡಕ್​ ತಿರುಗೇಟು ನೀಡಿದ್ದಾರೆ. ಇದರ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. ಈ ಸಂಚಿಕೆ ಅ.16ರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ.

ಬಿಗ್​ ಬಾಸ್​ ಶೋ ಬಗ್ಗೆ ಈಗಾಗಲೇ ಅನೇಕರಿಗೆ ಅನುಮಾನ ಇದೆ. ಇದು ಸ್ಕ್ರಿಪ್ಟೆಡ್​ ಕಾರ್ಯಕ್ರಮ ಎಂದು ಒಂದಷ್ಟು ಮಂದಿ ಆರೋಪ ಮಾಡಿದ ಉದಾಹರಣೆ ಇದೆ. ಈ ಮಾತನ್ನು ಸ್ಪರ್ಧಿಗಳು ಒಪ್ಪುವುದು ವಿರಳ. ಆದರೆ ಆರ್ಯವರ್ಧನ್​ ಗುರೂಜಿ ಅವರು ದೊಡ್ಮನೆಯೊಳಗೆ ಇದ್ದುಕೊಂಡೇ ಬಿಗ್​ ಬಾಸ್ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ ಮಾಡಿದ್ದಾರೆ.

ಇದನ್ನೂ ಓದಿ
Image
Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
Image
Aryavardhan Guruji: ಕನ್ನಡ ಓದಲು ಕಷ್ಟಪಟ್ಟ ಗುರೂಜಿ; ಸಹಾಯ ಮಾಡಿದ ರಾಕೇಶ್​: ಇಲ್ಲಿದೆ ವಿಡಿಯೋ
Image
ಮೀಸೆ, ತಲೆ ಬೋಳಿಸಿಕೊಂಡ ಆರ್ಯವರ್ಧನ್​; ಗುರೂಜಿ ಹೊಸ ಲುಕ್ ಹೇಗಿದೆ ನೋಡಿ
Image
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು

ಈಗ ಇರುವ ಸ್ಪರ್ಧಿಗಳ ಪೈಕಿ ಟಾಪ್​ 2 ಯಾರಾಗಬಹುದು ಎಂದು ಕಿಚ್ಚ ಸುದೀಪ್​ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಸ್ಪರ್ಧಿಗಳಿಂದ ಹಲವು ಉತ್ತರಗಳು ಬಂದಿವೆ. ಅನುಪಮಾ ಗೌಡ ಅವರ ಹೆಸರನ್ನು ಆರ್ಯವರ್ಧನ್​ ಗುರೂಜಿ ಹೇಳಿದ್ದಾರೆ. ‘ಅನುಪಮಾ ಗೌಡ ಅವರು ಒಳಗಡೆ ಬರಲಿ ಅಂತ ಬಿಗ್​ ಬಾಸ್​ಗೇ ಆಸೆ ಎನ್ನುವಂತಿತ್ತು’ ಎಂದು ಅವರು​ ಹೇಳಿದ್ದಾರೆ.

ಈ ಹೇಳಿಕೆಯಿಂದ ಕಿರಿಕ್​ ಶುರುವಾಗಿದೆ. ‘ಹಾಗೆಲ್ಲ ಮಾತನಾಡಬೇಡಿ ಸರ್’ ಎಂದು ಕಿಚ್ಚ ಸುದೀಪ್​ ಎಚ್ಚರಿಕೆ ನೀಡಿದರು. ಹಾಗಿದ್ದರೂ ಆರ್ಯವರ್ಧನ್​ ಸುಮ್ಮನಾಗಿಲ್ಲ. ‘ಇಷ್ಟೆಲ್ಲ ಗೊತ್ತಿದ್ದಮೇಲೂ ಇವರನ್ನು ಒಳಗಡೆ ಕರೆಸುತ್ತಾರೆ ಎಂದರೆ ಏನರ್ಥ? ಅದು ಮ್ಯಾಚ್​ ಫಿಕ್ಸಿಂಗ್​ ಇದ್ದಂಗೆ ಇರುತ್ತದೆ’ ಎಂದು ಗುರೂಜಿ ಆರೋಪ ಮಾಡಿದ್ದಾರೆ. ಈ ಮಾತು ಕೇಳಿ ಸುದೀಪ್​ಗೆ ಸಖತ್​ ಕೋಪ ಬಂದಿದೆ. ‘ಮಾತಿನ ಮೇಲೆ ನಿಗಾ ಇರಲಿ. ಏನದು ಮ್ಯಾಚ್​ ಫಿಕ್ಸಿಂಗ್​. ಅಲ್ಲಿ ಕುಳಿತುಕೊಂಡು ಆಡುತ್ತಿರುವವರೆಲ್ಲ ಏನು ಹಾಗಾದ್ರೆ? ಯಾರಿಗೂ ಯೋಗ್ಯತೆ ಇಲ್ಲವಾ? ಎಲ್ಲರೂ ಮೋಸ ಮಾಡಿ ಗೆಲ್ಲುತ್ತಿದ್ದಾರಾ? ಈ ವೇದಿಕೆಗೆ ಏನಾದ್ರೂ ಮರ್ಯಾದೆ ತೆಗೆದರೆ.. ಸತ್ಯವಾಗಿ ಹೇಳುತ್ತೇನೆ, ನಮಗೂ ನಿಮಗೂ ಬೀಳುತ್ತದೆ’ ಎಂದು ಸುದೀಪ್​ ಅವರು ಖಡಕ್​ ಆಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಆರ್ಯವರ್ಧನ್​ ಗುರೂಜಿ ಅವರು ಈ ರೀತಿ ಮಾತನಾಡಿದ್ದನ್ನು ಕೇಳಿ ಎಲ್ಲರಿಗೂ ಶಾಕ್​ ಆಗಿದೆ. ಇದರ ಪರಿಣಾಮ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ