ಮಹಿಳಾ ಸ್ಪರ್ಧಿಗಳ ಜೊತೆ ಮಿಂಗಲ್ ಆಗುವ ರೂಪೇಶ್ ಶೆಟ್ಟಿಯ ಕಾಲೆಳೆದ ಸುದೀಪ್

ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಐಯ್ಯರ್ ಜತೆ ರೂಪೇಶ್ ಶೆಟ್ಟಿ ಕ್ಲೋಸ್ ಆಗಿದ್ದಾರೆ. ಒಟಿಟಿ ಸೀಸನ್​ನಿಂದ ಇವರ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ. ಈ ಜೋಡಿಗೆ ರಾಜ್ಯಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

ಮಹಿಳಾ ಸ್ಪರ್ಧಿಗಳ ಜೊತೆ ಮಿಂಗಲ್ ಆಗುವ ರೂಪೇಶ್ ಶೆಟ್ಟಿಯ ಕಾಲೆಳೆದ ಸುದೀಪ್
ಸಾನ್ಯಾ-ರೂಪೇಶ್-ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 08, 2022 | 10:39 PM

ರೂಪೇಶ್ ಶೆಟ್ಟಿ (Roopesh Shetty) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ಜತೆ ಮಿಂಗಲ್ ಆಗುತ್ತಾರೆ. ಅದರಲ್ಲೂ ಮಹಿಳಾ ಸ್ಪರ್ಧಿಗಳ ಜತೆ ಅವರು ಹೆಚ್ಚು ಕ್ಲೋಸ್ ಆಗಿದ್ದಾರೆ. ಈ ವಿಚಾರ ಪ್ರತಿ ಬಾರಿ ವೀಕೆಂಡ್​ನಲ್ಲಿ ಹೈಲೈಟ್ ಆಗುತ್ತದೆ. ಕಿಚ್ಚ ಸುದೀಪ್ (Kichcha Sudeep) ಅವರು ಈ ವಿಚಾರದಲ್ಲಿ ಸದಾ ಕಾಲೆಳೆಯುತ್ತಲೇ ಬರುತ್ತಿದ್ದಾರೆ. ಈ ವಾರ ಸುದೀಪ್ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ರೂಪೇಶ್ ಶೆಟ್ಟಿಗೆ ಸುದೀಪ್ ಅವರು ಫನ್ನಿ ಆಗಿಯೇ ಕಾಲೆಳೆದಿದ್ದಾರೆ. ಇದನ್ನು ಕೇಳಿ ಮನೆ ಮಂದಿ ನಕ್ಕಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಐಯ್ಯರ್ ಜತೆ ರೂಪೇಶ್ ಶೆಟ್ಟಿ ಕ್ಲೋಸ್ ಆಗಿದ್ದಾರೆ. ಒಟಿಟಿ ಸೀಸನ್​ನಿಂದ ಇವರ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ. ಈ ಜೋಡಿಗೆ ರಾಜ್ಯಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ‘ನಮ್ಮ ಮಧ್ಯೆ ಇರೋದು ಫ್ರೆಂಡ್​ಶಿಪ್ ಮಾತ್ರ’ ಎಂದು ರೂಪೇಶ್ ಶೆಟ್ಟಿ ಆಗಾಗ ಸ್ಪಷ್ಟನೆ ನೀಡುತ್ತಲೇ ಇರುತ್ತಾರೆ. ಟಿವಿ ಸೀಸನ್​ನಲ್ಲಿ ರೂಪೇಶ್ ಶೆಟ್ಟಿ ಅವರು ಸಾನ್ಯಾ ಜತೆಗೆ ಅನೇಕ ಮಹಿಳಾ ಸ್ಪರ್ಧಿಗಳ ಜತೆ ಕ್ಲೋಸ್ ಆಗಿದ್ದಾರೆ. ಈ ವಿಚಾರದಲ್ಲಿ ಸುದೀಪ್ ಅವರು ಕಾಲೆಳೆದಿದ್ದಾರೆ.

‘ರೂಪೇಶ್ ಅವರೇ ನೀವು ಬಿಗ್ ಬಾಸ್ ಮನೆಯ ಯೂನಿವರ್ಸಿಟಿ’ ಎಂದರು ಸುದೀಪ್. ಇದು ಏಕೆ ಎಂದು ರೂಪೇಶ್ ಶೆಟ್ಟಿ ಪ್ರಶ್ನೆ ಮಾಡಿದರು. ಅದಕ್ಕೆ ಸುದೀಪ್ ನಗುತ್ತಲೇ ಉತ್ತರ ನೀಡಿದರು. ‘ರೂಪೇಶ್ ಅವರು ಈ ಬಾರಿ ಎಲ್ಲರ ಜತೆ ಕ್ಲೋಸ್ ಆಗಿದ್ದಾರೆ. ಅಡುಗೆ ಮನೆಯಲ್ಲಿ ಯಾರ ಜತೆ ಮಾತನಾಡಬೇಕು, ಬಾತ್​ರೂಂನಲ್ಲಿದ್ದಾಗ ಯಾರ ಜತೆ ಮಾತನಾಡಬೇಕು, ಲೈಟ್ ಆಫ್ ಆದಾಗ ಯಾರ ಜತೆ ಮಾತನಾಡಬೇಕು ಎಂಬುದು ಅವರಿಗೆ ಗೊತ್ತಿದೆ’ ಎಂದು ಸುದೀಪ್ ಹೇಳಿದರು. ಇದನ್ನು ಕೇಳಿದ ರೂಪೇಶ್ ಆ ರೀತಿ ಇಲ್ಲ ಎಂದು ನಕ್ಕರು.

ಇದನ್ನೂ ಓದಿ: ‘ಬಿಗ್ ಬಾಸ್ ಶುರುವಾದಾಗ ನಾನು ಬಂದು ಪ್ರೀತಿ ಮಾಡಿ ಅಂತ ಹೇಳಿದ್ನಾ?’; ಸುದೀಪ್ ಪ್ರಶ್ನೆಗೆ ಕಂಗಾಲಾದ ರೂಪೇಶ್

‘ನಾನು ಎಲ್ಲರ ಜತೆ ಕ್ಲೋಸ್ ಇದ್ದೀನಿ. ಎಲ್ಲರ ಜತೆಯೂ ಫ್ರೆಂಡ್​ಶಿಪ್ ಅಷ್ಟೇ ಇರೋದು’ ಎಂದು ರೂಪೇಶ್​ ಹೇಳಿದರು. ‘ನೀವು ಫ್ರೆಂಡ್​ಶಿಪ್​ನೇ ಮಾಡಿಕೊಂಡಿರೋದು’ ಎಂದು ಸುದೀಪ್ ಹೇಳಿದ್ದಾರೆ.

Published On - 10:18 pm, Sat, 8 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ