Bigg Boss Kannada: 9 ಮಂದಿ ನಾಮಿನೇಟ್: ಈ ವಾರ ಹೊರ ಹೋಗುವವರು ಯಾರು?
Bigg Boss Kannada Season 9: ಕಳೆದ ವಾರ ಮನೆಯಿಂದ ಐಶ್ವರ್ಯಾ ಪಿಸೆ ಹೊರಬಿದ್ದಿದ್ದರು. ಈ ವಾರ 9 ಮಂದಿಯಲ್ಲಿ ಯಾರು ಹೊರಹೋಗಲಿದ್ದಾರೆ ಕಾದು ನೋಡಬೇಕಿದೆ.
Updated on: Oct 08, 2022 | 12:24 PM

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸಮ್ 9 2ನೇ ವಾರಾಂತ್ಯಕ್ಕೆ ಬಂದು ನಿಂತಿದೆ. ಈ ವಾರ ಕೂಡ ಒಟ್ಟು 9 ಮಂದಿ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಬಹುತೇಕ ಖ್ಯಾತ ಸ್ಪರ್ಧಿಗಳಿರುವ ಕಾರಣ ಈ ಬಾರಿ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಕಳೆದ ಒಂದು ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಾಳುಗಳ ನಡುವೆ ಉತ್ತಮ ಪೈಪೋಟಿ ಕಂಡು ಬಂತು. ಅದರಲ್ಲೂ ಮನೆಯಲ್ಲಿ ಚೇಷ್ಠೆ ಹಾಗೂ ಪ್ರ್ಯಾಂಕ್ಗಳ ಮೂಲಕ ರಂಜಿಸಲು ಯತ್ನಿಸಿದ ರಾಕೇಶ್ ಅಡಿಗ ಅವರು ಇದೀಗ ಮನೆ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಈ ವಾರದ ಕಳಪೆ ಸ್ಪರ್ಧಾಳುವಾಗಿ ರಾಕೇಶ್ ಅಡಿಗ ಜೈಲು ಸೇರಿದ್ದಾರೆ.

ಇನ್ನು ಒಟ್ಟು 9 ಮಂದಿ ನಾಮಿನೇಟ್ ಆಗಿದ್ದು, ಇವರಲ್ಲಿ ಒಬ್ಬರು ಇಂದು ಮನೆಯಿಂದ ಹೊರಬೀಳಲಿದ್ದಾರೆ. ಆ ಒಂಭತ್ತು ಮಂದಿ ಯಾರೆಂದರೆ...

ಮಯೂರಿ

ನವಾಜ್

ದರ್ಶ್ ಚಂದ್ರಪ್ಪ

ಅಮೂಲ್ಯ ಗೌಡ

ನೇಹಾ ಗೌಡ

ರೂಪೇಶ್ ರಾಜಣ್ಣ

ಆರ್ಯವರ್ಧನ್ ಗುರೂಜಿ

ಪ್ರಶಾಂತ್ ಸಂಬರಗಿ

ದೀಪಿಕಾ ದಾಸ್

ಕಳೆದ ವಾರ ಮನೆಯಿಂದ ಐಶ್ವರ್ಯಾ ಪಿಸೆ ಹೊರಬಿದ್ದಿದ್ದರು. ಈ ವಾರ 9 ಮಂದಿಯಲ್ಲಿ ಯಾರು ಹೊರಹೋಗಲಿದ್ದಾರೆ ಕಾದು ನೋಡಬೇಕಿದೆ.




