Exclusive: ‘ಭವಿಷ್ಯದಲ್ಲಿ ಸುದೀಪ್ ಜತೆ ಸಿನಿಮಾ ಮಾಡಬಹುದು’; ರಮ್ಯಾ ಮಾತುಕೇಳಿ ಫ್ಯಾನ್ಸ್ ಖುಷ್

ಪುನೀತ್ ರಾಜ್​ಕುಮಾರ್ ಜತೆ ರಮ್ಯಾ ಸಿನಿಮಾ ಮಾಡಬೇಕಿತ್ತು. ಇದನ್ನು ಅವರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಸುದೀಪ್ ಜತೆ ಸಿನಿಮಾ ಮಾಡಬಹುದು ಎಂದು ಹೇಳಿದ್ದಾರೆ.

Exclusive: ‘ಭವಿಷ್ಯದಲ್ಲಿ ಸುದೀಪ್ ಜತೆ ಸಿನಿಮಾ ಮಾಡಬಹುದು’; ರಮ್ಯಾ ಮಾತುಕೇಳಿ ಫ್ಯಾನ್ಸ್ ಖುಷ್
ರಮ್ಯಾ-ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 06, 2022 | 3:55 PM

ನಟಿ ರಮ್ಯಾ ಹಾಗೂ ಕಿಚ್ಚ ಸುದೀಪ್ (Kichcha Sudeep) ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. 2008ರಲ್ಲಿ ತೆರೆಗೆ ಬಂದ ‘ಮುಸ್ಸಂಜೆಮಾತು’ ಚಿತ್ರ ಸೂಪರ್ ಹಿಟ್ ಆಯಿತು. ಇವರ ಕಾಂಬಿನೇಷನ್​ ಬಗ್ಗೆ ಫ್ಯಾನ್ಸ್​ಗೆ ಈಗಲೂ ಪ್ರೀತಿ ಇದೆ. ಇವರನ್ನು ಮತ್ತೆ ತೆರೆಮೇಲೆ ನೋಡಬೇಕು ಎಂಬುದು ಫ್ಯಾನ್ಸ್ ಬಯಕೆ. ಇದು ಮತ್ತೆ ನಿಜವಾಗುವ ಸೂಚನೆ ಸಿಕ್ಕಿದೆ. ರಮ್ಯಾ (Ramya) ಅವರು ಟಿವಿ9 ಕನ್ನಡದ ಜತೆಗೆ ಮಾತನಾಡುವಾಗ ಈ ವಿಚಾರವನ್ನು ಹೇಳಿದ್ದಾರೆ.

ರಮ್ಯಾ ಅವರು ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಪ್ರೊಡಕ್ಷನ್​ಹೌಸ್ ಮೂಲಕ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ರಾಜ್ ಬಿ. ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿದ್ದಾರೆ. ಇದರ ಬಗ್ಗೆ ರಮ್ಯಾ ಅವರು ಟಿವಿ9 ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಒಂದು ಕಡೆ ಭಯ ಇದೆ, ಮತ್ತೊಂದು ಕಡೆ ಎಗ್ಸೈಟ್​ಮೆಂಟ್ ಇದೆ. ಈ ಚಿತ್ರಕ್ಕೆ ಟೈಟಲ್ ಇಟ್ಟಿರೋದು ರಾಜ್ ಶೆಟ್ಟಿ. ಈ ಟೈಟಲ್ ಹಿಡಿಸಿತು. ನಾನು ಚಿತ್ರರಂಗಕ್ಕೆ ಮರಳುತ್ತೇನೆ ಎಂದಾಗ ತುಂಬಾ ಕಥೆಗಳು ಬಂದವು. ರಾಜ್ ಬಿ. ಶೆಟ್ಟಿ ಹೇಳಿದ ಕಥೆ ಇಷ್ಟ ಆಯ್ತು. ಇದು ಬೇರೇ ರೀತಿಯಲ್ಲಿ ಇರುವ ಸಿನಿಮಾ’ ಎಂದು ರಮ್ಯಾ ಹೇಳಿದ್ದಾರೆ.

ಇದನ್ನೂ ಓದಿ
Image
Ramya: 18ನೇ ಪ್ರಾಯದಲ್ಲಿ ರಮ್ಯಾ ಹೇಗಿದ್ದರು ನೋಡಿ; ವೈರಲ್​ ಆಗಿದೆ ಹಳೇ ಐಡಿ ಕಾರ್ಡ್​​ ಫೋಟೋ
Image
ಕನ್ನಡದ ಪ್ರಸಿದ್ಧ ನಟಿಯರ ಪಟ್ಟಿಯಲ್ಲಿ ರಮ್ಯಾಗೆ 4ನೇ ಸ್ಥಾನ; ರಚಿತಾ, ಆಶಿಕಾ, ರಶ್ಮಿಕಾ, ರಾಧಿಕಾ ನಡುವೆ ನಂ.1 ಯಾರು?
Image
Ramya: ತಮ್ಮನ್ನು ತಾವೇ ‘ಡ್ರಾಮಾ ಕ್ವೀನ್​’ ಎಂದು ಕರೆದುಕೊಂಡ ನಟಿ ರಮ್ಯಾ; ಕಾರಣ ಏನು?
Image
Ramya: ಕಡೆಗೂ ಶೂಟಿಂಗ್​ ಸೆಟ್​ಗೆ ಬಂದ ರಮ್ಯಾ: ಡಾಲಿ ಜತೆ ಇರುವ ವಿಡಿಯೋ ವೈರಲ್​; ಏನಿದು ಸಮಾಚಾರ?

‘ಕೊವಿಡ್ ಸಮಯದಲ್ಲಿ ಕನ್ನಡದ ಹಲವು ಸಿನಿಮಾ ನೋಡಿದೆ. ‘ರತ್ನನ್ ಪ್ರಪಂಚ’ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ, ಆಗಿಲ್ಲ. ಕಾರ್ತಿಕ್ ಗೌಡ ಅವರು ಸಿನಿಮಾ ಬಗ್ಗೆ ಮಾತನಾಡಿದ್ದರು. ‘ನೀವು ಯಾಕೆ ಮತ್ತೆ ಸಿನಿಮಾ ಮಾಡಬಾರದು’ ಎಂದು ಕೇಳಿದ್ದರು. ಹಾಗೆ ಶುರುವಾದ ಮಾತುಕಥೆ ಇಲ್ಲಿಗೆ ಬಂದಿದೆ. ನನ್ನ ನಿರ್ಮಾಣ ಸಂಸ್ಥೆಯಡಿಯಲ್ಲಿ ಹೊಸಬರಿಗೆ ಅವಕಾಶ ನೀಡುತ್ತೇನೆ’ ಎಂದು ಸಂತಸದಿಂದ ಹೇಳಿದ್ದಾರೆ ರಮ್ಯಾ.

ಪುನೀತ್ ರಾಜ್​ಕುಮಾರ್ ಜತೆ ರಮ್ಯಾ ಸಿನಿಮಾ ಮಾಡಬೇಕಿತ್ತು. ಇದನ್ನು ಅವರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ‘ಅಪ್ಪು ಜೊತೆ ಕಂಬ್ಯಾಕ್ ಮಾಡೋ‌ ಪ್ಲಾನ್ ಇತ್ತು. ನಾನು-ಅಪ್ಪು ಸಿನಿಮಾ ಬಗ್ಗೆ ಮಾತಾಡಿದ್ವಿ. ಆದರೆ ಅದು ಆಗಲೇ ಇಲ್ಲ. ಮುಂದೊಂದು ದಿನ ನಾನು ಸುದೀಪ್ ಅವರ ಜೊತೆಯೂ ಆ್ಯಕ್ಟ್ ಮಾಡಬಹುದು’ ಎಂದು ಕುತೂಹಲ ಹುಟ್ಟು ಹಾಕಿದ್ದಾರೆ.

ಇದನ್ನೂ ಓದಿ: ದಸರಾ ಸಿನಿಮೋತ್ಸವಕ್ಕೆ ಚಾಲನೆ ನೀಡುವ ವೇಳೆ ಕಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜ್​ಕುಮಾರ್

‘ಹಿಂದೆ ಮಾಡಿದ ರೀತಿಯಲ್ಲಿ ಸಿನಿಮಾ ಮಾಡೋಕೆ ಆಗಲ್ಲ. ತುಂಬಾ ಸೆಲೆಕ್ಟಿವ್ ರೋಲ್​​ನಲ್ಲಿ ಸಿನಿಮಾ ಮಾಡ್ತೀನಿ. ಮೊದಲ ಸಿನಿಮಾ ಮಾಡಿದ ರೀತಿ ನಂಗೆ ಈಗ ಭಯ ಇದೆ. ನಾನು ಕನಿಷ್ಠ 20 ಕಥೆಗಳನ್ನ ರಿಜೆಕ್ಟ್ ಮಾಡಿದ್ದೇನೆ. ಇನ್ಮುಂದೆ ಸಿನಿಮಾ ಮಾಡಿದ್ರೆ ಒಳ್ಳೆಯ ಸಿನಿಮಾ ಮಾಡಬೇಕು ಅಂತ ಪ್ಲಾನ್ ಇದೆ’ ಎಂದಿದ್ದಾರೆ ರಮ್ಯಾ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ