Ramya: ತಮ್ಮನ್ನು ತಾವೇ ‘ಡ್ರಾಮಾ ಕ್ವೀನ್​’ ಎಂದು ಕರೆದುಕೊಂಡ ನಟಿ ರಮ್ಯಾ; ಕಾರಣ ಏನು?

ಫ್ಯಾನ್ಸ್​ ಪೇಜ್​ಗಳಲ್ಲಿ ವೈರಲ್​ ಆಗಿರುವ ಒಂದು ವಿಡಿಯೋ ಈಗ ರಮ್ಯಾ ಅವರ ಗಮನ ಸೆಳೆದಿದೆ. ‘ನಾನೆಂಥ ಡ್ರಾಮಾ ಕ್ವೀನ್​ ಆಗಿದ್ದೇನೆ’ ಎಂದು ಅವರು ತಮ್ಮ ಬಗ್ಗೆ ತಾವೇ ಕಮೆಂಟ್​ ಮಾಡಿದ್ದಾರೆ.

Ramya: ತಮ್ಮನ್ನು ತಾವೇ ‘ಡ್ರಾಮಾ ಕ್ವೀನ್​’ ಎಂದು ಕರೆದುಕೊಂಡ ನಟಿ ರಮ್ಯಾ; ಕಾರಣ ಏನು?
ರಮ್ಯಾ
TV9kannada Web Team

| Edited By: Madan Kumar

Jul 24, 2022 | 1:41 PM

ನಟಿ ರಮ್ಯಾ (Ramya Divya Spandana) ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ನಟನೆಯಿಂದ ಅವರು ದೂರ ಉಳಿದುಕೊಂಡಿದ್ದರೂ ಅವರ ಬಗ್ಗೆ ಫ್ಯಾನ್ಸ್​ಗೆ ಇರುವ ಕ್ರೇಜ್​ ಕಮ್ಮಿ ಆಗಿಲ್ಲ. ಆದಷ್ಟು ಬೇಗ ರಮ್ಯಾ ಕಮ್​ಬ್ಯಾಕ್​ ಮಾಡಲಿ ಎಂದು ಸಿನಿಪ್ರಿಯರು ಬಯಸುತ್ತಿದ್ದಾರೆ. ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ಸ್ಯಾಂಡಲ್​ವುಡ್​ ಕ್ವೀನ್​’ (Sandalwood Queen) ಎಂದು ಕರೆಯುತ್ತಾರೆ. ಆದರೆ ಸ್ವತಃ ರಮ್ಯಾ ಅವರು ತಮ್ಮನ್ನು ತಾವೇ ‘ಡ್ರಾಮಾ ಕ್ವೀನ್​’ ಎಂದು ಕರೆದುಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಆಗುವಂತಹ ಒಂದು ವಿಡಿಯೋವನ್ನೂ (Viral Video) ಅವರು ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ರಮ್ಯಾ ಅವರು ಈ ಹಿಂದೆ ‘ಕಲರ್ಸ್​ ಕನ್ನಡ’ ವಾಹಿನಿಯ ‘ಮಜಾ ಟಾಕೀಸ್​’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆ ವೇಳೆ ಅವರು ನೀಡಿದ ಎಕ್ಸ್​ಪ್ರೆಷನ್ಸ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದರು. ಆ ಸಂಚಿಕೆಯ ವಿಡಿಯೋಗಳು ಇಂದಿಗೂ ಇಂಟರ್​ನೆಟ್​ನಲ್ಲಿ ವೈರಲ್​ ಆಗುತ್ತಲೇ ಇವೆ. ಆ ಪೈಕಿ ಒಂದು ವಿಡಿಯೋವನ್ನು ಹಂಚಿಕೊಂಡಿರುವ ಅಭಿಮಾನಿಗಳು ‘ಮೋಹಕ ತಾರೆ’ ಟೈಟಲ್​ ಅನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.

ಫ್ಯಾನ್ಸ್​ ಪೇಜ್​ಗಳಲ್ಲಿ ವೈರಲ್​ ಆಗಿರುವ ಈ ವಿಡಿಯೋವನ್ನು ರಮ್ಯಾ ಅವರು ತಮ್ಮ ಇನ್​ಸ್ಟಾಗ್ರಾಂ​ ಖಾತೆಯ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಬಗೆಬಗೆಯ ಎಕ್ಸ್​ಪ್ರೆಷನ್​ಗಳನ್ನು ತಾವೇ ಕಂಡು ‘ನಾನೆಂಥ ಡ್ರಾಮಾ ಕ್ವೀನ್​ ಆಗಿದ್ದೇನೆ’ ಎಂದು ಅವರು ಇದಕ್ಕೆ ಕ್ಯಾಪ್ಷನ್​ ನೀಡಿದ್ದಾರೆ. ಆ ಮೂಲಕ ಅವರು ತಮ್ಮನ್ನು ತಾವೇ ಡ್ರಾಮಾ ಕ್ವೀನ್​ ಎಂದು ಕರೆದುಕೊಂಡಿರುವುದು ಗಮನ ಸೆಳೆದಿದೆ. ಸಾಮಾನ್ಯವಾಗಿ ಕೆಲವು ನಟಿಯರಿಗೆ ಟ್ರೋಲ್ ಮಂದಿ ‘ಡ್ರಾಮಾ ಕ್ವೀನ್’ ಅಂತ ಕಾಲೆಳೆಯುವುದುಂಟು. ಆದರೆ ರಮ್ಯಾ ಸ್ವತಃ ಈ ರೀತಿ ಕರೆದುಕೊಂಡು ಅಚ್ಚರಿ ಮೂಡಿಸಿದ್ದಾರೆ.

ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದರೂ ಕೂಡ ಸಿನಿಮಾ ಸೆಲೆಬ್ರಿಟಿಗಳ ಜತೆಗಿನ ನಂಟನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅನೇಕ ಸಿನಿಮಾ ತಂಡಗಳಿಗೆ ಅವರು ಬೆಂಬಲ ನೀಡುತ್ತ ಬಂದಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಡಾಲಿ ಧನಂಜಯ್​ ನಟನೆಯ ‘ಹೊಯ್ಸಳ’ ಚಿತ್ರದ ಶೂಟಿಂಗ್​ ಸೆಟ್​ಗೆ ಭೇಟಿ ನೀಡಿದ್ದರು.

ಇದನ್ನೂ ಓದಿ

‘ಹೊಯ್ಸಳ’ ಸಿನಿಮಾದ ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿದ್ದರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ರಮ್ಯಾ ಬರೆದುಕೊಂಡಿದ್ದರು. ‘ವಿಜಯ್ ಅವರು ನಿರ್ದೇಶಿಸುತ್ತಿರುವ ‘ಹೊಯ್ಸಳ’ ಚಿತ್ರದ ಸೆಟ್​ಗೆ ವಾರಾಂತ್ಯದಲ್ಲಿ ಭೇಟಿ ನೀಡಿದೆ. ಇಂಟೆನ್ಸ್ ಆ್ಯಕ್ಷನ್ ದೃಶ್ಯವೊಂದನ್ನು ಅವರು ಚಿತ್ರೀಕರಿಸುತ್ತಿದ್ದರು. ಅವರು ಚಿತ್ರೀಕರಿಸಿರುವ ಕೆಲವು ದೃಶ್ಯದ ತುಣುಕುಗಳನ್ನು ನೋಡಿದೆ ಹಾಗೂ ಅವು ಬಹಳ ಚೆನ್ನಾಗಿ ಮೂಡಿಬಂದಿವೆ’ ಎಂದು ರಮ್ಯಾ ಹೊಗಳಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada