Ramya: ಕಡೆಗೂ ಶೂಟಿಂಗ್​ ಸೆಟ್​ಗೆ ಬಂದ ರಮ್ಯಾ: ಡಾಲಿ ಜತೆ ಇರುವ ವಿಡಿಯೋ ವೈರಲ್​; ಏನಿದು ಸಮಾಚಾರ?

Ramya Divya Spandana | Daali Dhananjay: ಡಾಲಿ ಧನಂಜಯ್​ ನಟನೆಯ ‘ಹೊಯ್ಸಳ’ ಚಿತ್ರದ ಬಗ್ಗೆ ಫ್ಯಾನ್ಸ್​ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್​ ಸೆಟ್​ನಲ್ಲಿ ನಟಿ ರಮ್ಯಾ ಕಾಣಿಸಿಕೊಂಡಿರುವುದು ವಿಶೇಷ.

Ramya: ಕಡೆಗೂ ಶೂಟಿಂಗ್​ ಸೆಟ್​ಗೆ ಬಂದ ರಮ್ಯಾ: ಡಾಲಿ ಜತೆ ಇರುವ ವಿಡಿಯೋ ವೈರಲ್​; ಏನಿದು ಸಮಾಚಾರ?
ಡಾಲಿ ಧನಂಜಯ್, ರಮ್ಯಾ
Follow us
TV9 Web
| Updated By: ಮದನ್​ ಕುಮಾರ್​

Updated on:Jul 11, 2022 | 7:38 AM

ನಟಿ ರಮ್ಯಾ (Ramya Divya Spandana) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಲವು ವರ್ಷಗಳಿಂದ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಹಾಗಿದ್ದರೂ ಅವರ ಮೇಲೆ ಜನರು ಇಟ್ಟಿರುವ ಅಭಿಮಾನ ಕಡಿಮೆ ಆಗಿಲ್ಲ. ಆದಷ್ಟು ಬೇಗ ರಮ್ಯಾ ಕಮ್​ಬ್ಯಾಕ್​ ಮಾಡಲಿ ಎಂದು ಅವರ ಫ್ಯಾನ್ಸ್​ ಆಸೆಪಡುತ್ತಿದ್ದಾರೆ. ಈ ವಿಷಯದಲ್ಲಿ ಯಾವಾಗ ಗುಡ್​ ನ್ಯೂಸ್​ ಸಿಗತ್ತೋ ಎಂದು ಎಲ್ಲರೂ ಕಾಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಮ್ಯಾ ಅವರು ಅನೇಕ ಸಿನಿಮಾಗಳ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಈಗ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ (Hoysala Movie) ಚಿತ್ರದ ಶೂಟಿಂಗ್​ ಸೆಟ್​ಗೆ ಅವರು ಭೇಟಿ ನೀಡಿದ್ದಾರೆ. ಚಿತ್ರೀಕರಣದ ವೇಳೆ ರಮ್ಯಾ ಮತ್ತು ಡಾಲಿ ಧನಂಜಯ್ (Daali Dhananjay) ಅವರು ಜೊತೆಯಾಗಿ ಕುಳಿತು ಮಾತನಾಡಿದ ವಿಡಿಯೋ ವೈರಲ್​ ಆಗಿದೆ.

ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಡಾಲಿ ಧನಂಜಯ್​ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಹೊಯ್ಸಳ’ ಚಿತ್ರದ ಮೇಲೆ ಫ್ಯಾನ್ಸ್​ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಭರದಿಂದ ಶೂಟಿಂಗ್​ ನಡೆಯುತ್ತಿದೆ. ಇದರ ಚಿತ್ರೀಕರಣದ ಸೆಟ್​ನಲ್ಲಿ ರಮ್ಯಾ ಅವರು ಕಾಣಿಸಿಕೊಂಡಿರುವುದು ವಿಶೇಷ. ಅವರು ಸೆಟ್​ಗೆ ಭೇಟಿ ನೀಡಿದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅದು ಸಖತ್​ ವೈರಲ್​ ಆಗುತ್ತಿದೆ.

ಇದನ್ನೂ ಓದಿ
Image
Sai Pallavi: ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಸಾಯಿ ಪಲ್ಲವಿ ಹೇಳಿಕೆ ವಿವಾದ: ನಟಿಯ ಪರವಾಗಿ ನಿಂತ ರಮ್ಯಾ
Image
ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ನೋಡಿ ಮೆಚ್ಚಿಕೊಂಡ ನಟಿ ರಮ್ಯಾ ಹೇಳಿದ್ದೇನು?
Image
Rakshit Shetty: ‘ರಮ್ಯಾ ನನ್ನ ಕ್ರಶ್​, ಆದರೆ ಮದುವೆ ಬಗ್ಗೆ ಹಬ್ಬಿರೋದು ಗಾಸಿಪ್​’: ನೇರ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್​ ಶೆಟ್ಟಿ
Image
Ramya Divya Spandana: ರಕ್ಷಿತ್​ ಶೆಟ್ಟಿ ಜೊತೆ ರಮ್ಯಾ ಮದುವೆ ಆಗ್ಬೇಕು; ಫ್ಯಾನ್ಸ್​ ಬಯಕೆಗೆ ಉತ್ತರ ಕೊಟ್ಟ ಸ್ಯಾಂಡಲ್​ವುಡ್​ ಕ್ವೀನ್​

ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿದ್ದರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ರಮ್ಯಾ ಬರೆದುಕೊಂಡಿದ್ದಾರೆ. ‘ವಾರಾಂತ್ಯದಲ್ಲಿ ವಿಜಯ್ ಅವರು ನಿರ್ದೇಶಿಸುತ್ತಿರುವ ‘ಹೊಯ್ಸಳ’ ಚಿತ್ರದ ಸೆಟ್​ಗೆ ಭೇಟಿ ನೀಡಿದೆ. ಇಂಟೆನ್ಸ್ ಆ್ಯಕ್ಷನ್ ದೃಶ್ಯವೊಂದನ್ನು ಅವರು ಚಿತ್ರೀಕರಿಸುತ್ತಿದ್ದರು. ಅವರು ಚಿತ್ರೀಕರಿಸಿರುವ ಕೆಲವು ದೃಶ್ಯದ ತುಣುಕುಗಳನ್ನು ನೋಡಿದೆ ಹಾಗೂ ಅವು ಬಹಳ ಚೆನ್ನಾಗಿ ಮೂಡಿಬಂದಿವೆ’ ಎಂದು ರಮ್ಯಾ ಹೊಗಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಅವರಿಗೆ ಆರ್ಕೆಸ್ಟ್ರಾ ಮೈಸೂರು ಚಿತ್ರದ ಟ್ರೈಲರ್ ನೋಡಿ ಎಂದ ನಟಿ ರಮ್ಯಾ..!

‘ಚಾಕ್ಲೆಟ್ ಹಾಗೂ ಆಸಕ್ತಿದಾಯಕ ಮಾತುಕತೆ- ಎರಡಕ್ಕೂ ಧನ್ಯವಾದಗಳು ಧನು. ತೆರೆಯ ಮೇಲೆ ನಿಮ್ಮನ್ನು ಪೊಲೀಸ್ ಪಾತ್ರದಲ್ಲಿ ನೋಡಲು ನನಗೆ ಬಹಳ ಕಾತುರವಿದೆ. ಅಮೃತಾ ಅಯ್ಯಂಗಾರ್​, ಇದರಲ್ಲಿನ ನಿಮ್ಮ ಅತ್ಯುನ್ನತ ಅಭಿನಯಕ್ಕೆ ಬಹಳಷ್ಟು ಪ್ರಶಸ್ತಿಗಳು ನಿಮ್ಮ ಪಾಲಾಗುವುದರಲ್ಲಿ ಅನುಮಾನವಿಲ್ಲ. ಕಾರ್ತಿಕ್​ ಗೌಡ, ಯೋಗಿ ಜಿ. ರಾಜ್​ ಅವರೇ, ‘ರತ್ನನ್ ಪ್ರಪಂಚ’ ಚಿತ್ರದ ಗೆಲುವಿನ ನಂತರ ಗೆಲುವಿನ ಸರಮಾಲೆಯೊಂದಿಗೆ ಮುನ್ನುಗ್ಗುತ್ತಿರುವಿರಿ. ನನ್ನನ್ನು ಕರೆದದ್ದಕ್ಕೆ ಹಾಗೂ ನಿಮ್ಮ ಪ್ರೀತಿಗೆ ನನ್ನ ಧನ್ಯವಾದಗಳು. 2023ರಲ್ಲಿ ಎದುರು ನೋಡಬಯಸುವ ಚಿತ್ರ- ಹೊಯ್ಸಳ’ ಎಂದು ರಮ್ಯಾ ಬರೆದುಕೊಂಡಿದ್ದಾರೆ.

Published On - 7:23 am, Mon, 11 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ