AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramya: 18ನೇ ಪ್ರಾಯದಲ್ಲಿ ರಮ್ಯಾ ಹೇಗಿದ್ದರು ನೋಡಿ; ವೈರಲ್​ ಆಗಿದೆ ಹಳೇ ಐಡಿ ಕಾರ್ಡ್​​ ಫೋಟೋ

Sandalwood Queen Ramya: ನಟನೆಯಿಂದ ರಮ್ಯಾ ದೂರ ಉಳಿದುಕೊಂಡಿದ್ದರೂ ಕೂಡ ಅವರು ಚಿತ್ರರಂಗದ ಜೊತೆಗಿನ ನಂಟು ಕಡಿದುಕೊಂಡಿಲ್ಲ. ಅವರ ಮೇಲೆ ಅಭಿಮಾನಿಗಳು ಹೊಂದಿರುವ ಕ್ರೇಜ್​ ಕೂಡ ತಗ್ಗಿಲ್ಲ.

Ramya: 18ನೇ ಪ್ರಾಯದಲ್ಲಿ ರಮ್ಯಾ ಹೇಗಿದ್ದರು ನೋಡಿ; ವೈರಲ್​ ಆಗಿದೆ ಹಳೇ ಐಡಿ ಕಾರ್ಡ್​​ ಫೋಟೋ
ರಮ್ಯಾ
TV9 Web
| Edited By: |

Updated on: Aug 03, 2022 | 11:01 AM

Share

ಸೆಲೆಬ್ರಿಟಿಗಳು ಆಗಾಗ ತಮ್ಮ ಹಳೇ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಆ ಫೋಟೋಗಳನ್ನು ಕಂಡಾಗ ನೆನಪಿನ ಪುಟ ತೆರೆಯುತ್ತದೆ. ಅಪರೂಪದ ಚಿತ್ರಪಟವನ್ನು ನೋಡಿ ಅಭಿಮಾನಿಗಳೂ ಖುಷಿ ಪಡುತ್ತಾರೆ. ನಟಿ ರಮ್ಯಾ (Ramya Divya Spandana) ಅವರು ಈಗೊಂದು ಫೋಟೋ ಹಂಚಿಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ತೆಗೆದ ಫೋಟೋ ಅದು. ಅದರಲ್ಲಿ ತುಂಬ ಕ್ಯೂಟ್​ ಆಗಿ ಕಾಣುತ್ತಿರುವ ಅವರನ್ನು ಫ್ಯಾನ್ಸ್​ ಕಣ್ತುಂಬಿಕೊಂಡಿದ್ದಾರೆ. ಸದ್ಯ ಈ ಫೋಟೋ (Ramya Viral Photo) ರಮ್ಯಾ ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗಿದೆ. ಇದು 2000ನೇ ಇಸವಿಯಲ್ಲಿ ಕ್ಲಿಕ್ಕಿಸಿದ ಫೋಟೋ. ಆಗ ರಮ್ಯಾ ಇನ್ನೂ ‘ಸ್ಯಾಂಡಲ್​ವುಡ್​ ಕ್ವೀನ್​’ (Sandalwood Queen) ಆಗಿರಲಿಲ್ಲ. ಚಿತ್ರರಂಗಕ್ಕೂ ಕಾಲಿಟ್ಟಿರಲಿಲ್ಲ. ಅವರಿಗೆ ಆಗ 18ರ ಪ್ರಾಯ. ‘18ನೇ ವಯಸ್ಸಿನಲ್ಲಿ ನಾನು’ ಎಂಬ ಕ್ಯಾಪ್ಷನ್​ನೊಂದಿಗೆ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ.

21ನೇ ವಯಸ್ಸಿಗೆ ರಮ್ಯಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 2003ರಲ್ಲಿ ಅವರ ಮೊದಲ ಸಿನಿಮಾ ‘ಅಭಿ’ ತೆರೆಕಂಡಿತು. ಚೊಚ್ಚಲ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಭರ್ಜರಿ ಗೆಲುವು ಪಡೆದ ಅವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಎರಡನೇ ಸಿನಿಮಾ ‘ಎಕ್ಸ್​ ಕ್ಯೂಸ್​ ಮೀ’ ಕೂಡ ಸೂಪರ್​ ಹಿಟ್​ ಆಯಿತು. ಆ ಮೂಲಕ ಕರುನಾಡಿನಲ್ಲಿ ರಮ್ಯಾ ಮನೆಮಾತಾದರು. ‘ಸ್ಯಾಂಡಲ್​ವುಡ್​ ಕ್ವೀನ್​’ ಎಂಬ ಬಿರುದು ಪಡೆಯುವ ಮಟ್ಟಕ್ಕೆ ಅವರು ಬೆಳೆದು ನಿಂತರು.

ಕನ್ನಡ ಮಾತ್ರವಲ್ಲದೇ ತಮಿಳು ಮತ್ತು ತೆಲುಗಿನಿಂದಲೂ ರಮ್ಯಾ ಅವರಿಗೆ ಹೇರಳ ಅವಕಾಶಗಳು ಹರಿದು ಬಂದವು. ಅಲ್ಲಿನ ಸ್ಟಾರ್​ ನಟರ ಜೊತೆಗೆ ಅಭಿನಯಿಸಿ ಅವರು ಸೈ ಎನಿಸಿಕೊಂಡರು. ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಅವರು ರಾಜಕೀಯದ ಕಡೆಗೆ ಮುಖ ಮಾಡಿದರು. ಈಗ ಮತ್ತೆ ಚಿತ್ರರಂಗದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಅವರು ಆದಷ್ಟು ಬೇಗ ಕಮ್​ಬ್ಯಾಕ್​ ಮಾಡಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಇದನ್ನೂ ಓದಿ
Image
ಕ್ಯೂಟ್ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಟ್ರೀಟ್ ಕೊಟ್ಟ ನಟಿ ರಮ್ಯಾ
Image
Sai Pallavi: ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಸಾಯಿ ಪಲ್ಲವಿ ಹೇಳಿಕೆ ವಿವಾದ: ನಟಿಯ ಪರವಾಗಿ ನಿಂತ ರಮ್ಯಾ
Image
Anushree: ರಮ್ಯಾ ಭೇಟಿ ಮಾಡಿ ‘ನೀವು ಯಾಕಿಷ್ಟು ಚಂದ’ ಎಂದು ಕೇಳಿದ ಆ್ಯಂಕರ್ ಅನುಶ್ರೀ
Image
Rakshit Shetty: ‘ರಮ್ಯಾ ನನ್ನ ಕ್ರಶ್​, ಆದರೆ ಮದುವೆ ಬಗ್ಗೆ ಹಬ್ಬಿರೋದು ಗಾಸಿಪ್​’: ನೇರ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್​ ಶೆಟ್ಟಿ

ನಟನೆಯಿಂದ ರಮ್ಯಾ ದೂರ ಉಳಿದುಕೊಂಡಿದ್ದರೂ ಕೂಡ ಅವರು ಚಿತ್ರರಂಗದ ಜೊತೆಗಿನ ನಂಟು ಕಡಿದುಕೊಂಡಿಲ್ಲ. ಅವರ ಮೇಲೆ ಅಭಿಮಾನಿಗಳು ಹೊಂದಿರುವ ಕ್ರೇಜ್​ ಕೂಡ ತಗ್ಗಿಲ್ಲ. ‘ಎಂದೆಂದಿಗೂ ನೀವೇ ನಮ್ಮ ಸ್ಯಾಂಡಲ್​ವುಡ್​ ಕ್ವೀನ್​’ ಎಂದು ಅಭಿಮಾನಿಗಳು ಈಗಲೂ ಕಮೆಂಟ್​ ಮಾಡುತ್ತಾರೆ. ಇನ್ನು, ರಮ್ಯಾ ಜನಪ್ರಿಯತೆ ಕೂಡ ಕಡಿಮೆ ಆಗಿಲ್ಲ. ಕನ್ನಡದ ಟಾಪ್​ 5 ಪ್ರಸಿದ್ಧ ನಟಿಯರು ಯಾರು ಎಂಬುದನ್ನು ತಿಳಿಯಲು ಇತ್ತೀಚೆಗೆ Ormax Media ನಡೆಸಿದ ಸಮೀಕ್ಷೆಯಲ್ಲಿ ರಮ್ಯಾ ಅವರು 4ನೇ ಸ್ಥಾನ ಪಡೆದಿದ್ದರು ಎಂಬುದು ವಿಶೇಷ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ