ಬಿಗ್ ಬಾಸ್ ಕೊಟ್ಟ ಆ ಒಂದು ಆದೇಶದಿಂದ ಹೊತ್ತಿ ಉರಿಯಿತು ಮನೆ
ಯಾರು ಯಾರ ಹೆಸರನ್ನು ತೆಗೆದುಕೊಂಡಿದ್ದಾರೆ ಎಂಬುದು ನಾಲ್ಕು ಗೋಡೆ ಮಧ್ಯೆ ಇರುತ್ತಿತ್ತು. ಆದರೆ, ಈ ಬಾರಿ ಆ ರೀತಿ ಇರಲಿಲ್ಲ. ಬಿಗ್ ಬಾಸ್ ಹೊಸ ಆದೇಶ ನೀಡಿದ್ದರು.
‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಪ್ರತಿ ಬಾರಿ ನಾಮಿನೇಷನ್ ವಿಚಾರ ಪ್ರಮುಖವಾಗುತ್ತದೆ. ವಾರದ ಮೊದಲ ದಿನ ಅಂದರೆ ಸೋಮವಾರ ಎಲಿಮಿನೇಷನ್ಗೆ ನಾಮಿನೇಷನ್ ನಡೆಯುತ್ತದೆ. ಇಂದು (ಅಕ್ಟೋಬರ್ 17) ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಪ್ರತಿ ಬಾರಿ ನಾಮಿನೇಷನ್ ಪ್ರಕ್ರಿಯೆ ನಡೆಯುವಾಗ ಕನ್ಫೆಷನ್ ರೂಂಗೆ ಬರುವಂತೆ ಬಿಗ್ ಬಾಸ್ ಸೂಚಿಸುತ್ತಿದ್ದರು. ಆದರೆ, ಈ ಬಾರಿ ಅದಕ್ಕೆ ಟ್ವಿಸ್ಟ್ ಸಿಕ್ಕಿದೆ. ಬಿಗ್ ಬಾಸ್ ನೀಡಿದ ಒಂದು ಆದೇಶದಿಂದ ಇಡೀ ಮನೆ ರಣರಂಗವಾಗಿದೆ.
ಪ್ರತಿ ವಾರದ ಆರಂಭದಲ್ಲಿ ನಾಮಿನೇಷನ್ ನಡೆಯುತ್ತದೆ. ಈ ರೀತಿ ನಾಮಿನೇಷನ್ ಆದ ಒಬ್ಬರು ವಾರಾಂತ್ಯದಲ್ಲಿ ಔಟ್ ಆಗುತ್ತಾರೆ. ಇದು ಬಿಗ್ ಬಾಸ್ ಮನೆಯ ಸಂಪ್ರದಾಯ. ದೊಡ್ಮನೆಯಲ್ಲಿ ಕೆಲವರು ಜತೆಗೇ ಇದ್ದರೂ ನಾಮಿನೇಷನ್ ಮಾಡಿ ಬಿಡುತ್ತಾರೆ. ಯಾರು ಯಾರ ಹೆಸರನ್ನು ತೆಗೆದುಕೊಂಡಿದ್ದಾರೆ ಎಂಬುದು ನಾಲ್ಕು ಗೋಡೆ ಮಧ್ಯೆ ಇರುತ್ತಿತ್ತು. ಆದರೆ, ಈ ಬಾರಿ ಆ ರೀತಿ ಇರಲಿಲ್ಲ. ಬಿಗ್ ಬಾಸ್ ಹೊಸ ಆದೇಶ ನೀಡಿದ್ದರು. ಎಲ್ಲರೂ ನಿಂತಲ್ಲಿಂದಲೇ ನಾಮಿನೇಷನ್ಗೆ ಇಬ್ಬರ ಹೆಸರನ್ನು ಸೂಚಿಸಬೇಕು.
ಈ ಬಾರಿ ನಾಮನಿರ್ದೇಶನ ಪ್ರಕ್ರಿಯೆ ಓಪನ್ ಆಗಿ ನಡೆದಿರುವುದರಿಂದ ಯಾರು ಯಾರನ್ನು ನಾಮಿನೇಷನ್ ಮಾಡಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಕೆಲವರು ಸ್ಟ್ರಾಂಗ್ ಇದ್ದಾರೆ ಎಂಬ ಕಾರಣ ನೀಡಿ ನಾಮಿನೇಷನ್ ಮಾಡಿದರೆ, ಇನ್ನೂ ಕೆಲವರು ಕಳಪೆ ಪರ್ಫಾರ್ಮೆನ್ಸ್ ನೀಡಿದ್ದಾರೆ ಎಂಬ ಕಾರಣ ನೀಡಿ ನಾಮಿನೇಷನ್ ಮಾಡಿದರು. ಈ ಕಾರಣಕ್ಕೆ ಮನೆಯಲ್ಲಿ ಬಿಸಿಯ ವಾತಾವರಣ ನಿರ್ಮಾಣ ಆಗಿತ್ತು.
ಕಳೆದ ವಾರ ಎಲಿಮಿನೇಟ್ ಆದ ದರ್ಶ್ ಚಂದ್ರಪ್ಪ ಅವರು ರೂಪೇಶ್ ಶೆಟ್ಟಿ ಹೆಸರನ್ನು ನಾಮಿನೇಟ್ ಮಾಡಿದ್ದರು. ಹೀಗಾಗಿ ರೂಪೇಶ್ ನೇರವಾಗಿ ನಾಮಿನೇಟ್ ಆಗಿದ್ದರು. ದೀಪಿಕಾ ದಾಸ್ ಅವರು ಕ್ಯಾಪ್ಟನ್ ಆದ ಕಾರಣ ಅವರನ್ನು ನಾಮಿನೇಟ್ ಮಾಡುವಂತೆ ಇರಲಿಲ್ಲ. ಅಂತಿಮವಾಗಿ, ಆರ್ಯವರ್ಧನ್, ಕಾವ್ಯಶ್ರೀ, ಮಯೂರಿ, ನೇಹಾ ಗೌಡ ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಔಟ್ ಆಗಲಿದ್ದಾರೆ.
ಎದುರು ಬದುರಲ್ಲೇ ನಡಿಯಿತು ನಾಲಕ್ಕನೆ ವಾರದ ನಾಮಿನೇಷನ್#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಇಂದು ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/Kyu0VI5uzT
— Colors Kannada (@ColorsKannada) October 17, 2022
ಇದನ್ನೂ ಓದಿ: ಅನುಪಮಾ ಆಟ ನೋಡಿ ಬಿಗ್ ಬಾಸ್ ಸ್ಕ್ರಿಪ್ಟೆಡ್ ಎಂದ ಆರ್ಯವರ್ಧನ್; ಇದರ ಅಸಲಿಯತ್ತೇನು?
ಈಗಾಗಲೇ ಮೂರು ವಾರ ಪೂರ್ಣಗೊಂಡಿದೆ. ಅಂದರೆ ಮೂವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಸದ್ಯ 15 ಮಂದಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ದಿನ ಕಳೆದಂತೆ ಸ್ಪರ್ಧೆ ಹೆಚ್ಚುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸ್ಪರ್ಧಿಗಳು ಹೆಚ್ಚು ಎಚ್ಚರಿಕೆಯಿಂದ ಆಡಬೇಕು. ಇಂತಹ ಸಂದರ್ಭದಲ್ಲಿ ನಾಮಿನೇಷನ್ನಿಂದ ತಪ್ಪಿಸಿಕೊಂಡರೆ ದೊಡ್ಮನೆಯ ಸ್ಪರ್ಧಿಗಳಿಗೆ ಸಾಕಷ್ಟು ಸಹಕಾರಿ ಆಗಲಿದೆ.
Published On - 9:26 pm, Mon, 17 October 22