AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ಕೋಟಿ ರೂ. ಕ್ಲಬ್ ಸೇರಿದ ‘ಕಾಂತಾರ’; ಇನ್ಮುಂದೆ ಏಕಾಏಕಿ ಏರಲಿದೆ ರಿಷಬ್ ಚಿತ್ರದ ಕಲೆಕ್ಷನ್?

ಶುಕ್ರವಾರ (ಅಕ್ಟೋಬರ್ 14) ‘ಕಾಂತಾರ’ ಸಿನಿಮಾದ ಹಿಂದಿ ವರ್ಷನ್ ರಿಲೀಸ್ ಆಗಿದೆ. ಈ ಚಿತ್ರ ಇಲ್ಲಿವರೆಗೆ ಹಿಂದಿಯಲ್ಲಿ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

100 ಕೋಟಿ ರೂ. ಕ್ಲಬ್ ಸೇರಿದ ‘ಕಾಂತಾರ’; ಇನ್ಮುಂದೆ ಏಕಾಏಕಿ ಏರಲಿದೆ ರಿಷಬ್ ಚಿತ್ರದ ಕಲೆಕ್ಷನ್?
ಕಾಂತಾರ ಸಿನಿಮಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Oct 17, 2022 | 5:10 PM

Share

‘ಕಾಂತಾರಾ’ ಸಿನಿಮಾ (Kantara Movie) ಈ ಪರಿ ಹವಾ ಸೃಷ್ಟಿ ಮಾಡುತ್ತದೆ ಎನ್ನುವ ಊಹೆ ಚಿತ್ರತಂಡದವರಿಗೂ ಇರಲಿಲ್ಲ. ಎಲ್ಲರೂ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮೋಡಿಯನ್ನು ಈ ಸಿನಿಮಾ ಮಾಡಿದೆ. ಪರಭಾಷೆಯಲ್ಲೂ ಚಿತ್ರ ರಿಲೀಸ್ ಆಗಿದ್ದು, ಅಲ್ಲಿಯೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ರಿಷಬ್ ಶೆಟ್ಟಿಯ ಸಿನಿಮಾ ನೋಡಿದ್ದಾರೆ. ಈ ಕಾರಣಕ್ಕೆ ಸಿನಿಮಾದ ಕಲೆಕ್ಷನ್ ಹೆಚ್ಚಿದೆ. ವಿಶೇಷ ಎಂದರೆ ಈ ಚಿತ್ರ ಈಗ 100 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ವಿಶೇಷ ದಾಖಲೆ ಬರೆದಿದೆ.

‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 30ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಬಾಯಿ ಮಾತಿನ ಪ್ರಚಾರ ಜೋರಾಗಿಯೇ ಸಿಕ್ಕಿತು. ಬುಕ್ ಮೈ ಶೋ ಹಾಗೂ ಐಎಂಡಿಬಿಯಲ್ಲಿ ಒಳ್ಳೆಯ ರೇಟಿಂಗ್ ಸಿಕ್ಕಿತು. ಸಿನಿಮಾ ನೋಡಿದ ಪ್ರೇಕ್ಷಕರು ಭರಪೂರ ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ದಿನ ಕಳೆದಂತೆ ಸಿನಿಮಾದ ಕಲೆಕ್ಷನ್ ಹೆಚ್ಚುತಲೇ ಹೋಯಿತು. ಇನ್ನು, ಸಿನಿಮಾ ಡಬ್ ಮಾಡಿ ತೆರೆಗೆ ತರುವ ಒತ್ತಾಯ ಬಂದಿದ್ದರಿಂದ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಮಾಡಲಾಗಿದೆ. ಹೀಗಾಗಿ, ಕಳೆದ ವೀಕೆಂಡ್​ನಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ.

ಶುಕ್ರವಾರ (ಅಕ್ಟೋಬರ್ 14) ‘ಕಾಂತಾರ’ ಸಿನಿಮಾದ ಹಿಂದಿ ವರ್ಷನ್ ರಿಲೀಸ್ ಆಗಿದೆ. ಈ ಚಿತ್ರ ಇಲ್ಲಿವರೆಗೆ ಹಿಂದಿಯಲ್ಲಿ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಸೋಮವಾರ ಕೂಡ ಈ ಚಿತ್ರ ಹೆಚ್ಚಿನ ಗಳಿಕೆ ಮಾಡುವ ನಿರೀಕ್ಷೆ ಇದೆ. ಈ ಚಿತ್ರದ ತೆಲುಗು ವರ್ಷನ್ ಕೂಡ ಮೋಡಿ ಮಾಡುತ್ತಿದೆ. ಶನಿವಾರ (ಸೆಪ್ಟೆಂಬರ್ 15) ತೆಲುಗಿನಲ್ಲಿ ರಿಲೀಸ್ ಆದ ಈ ಚಿತ್ರ ಕೇವಲ ಎರಡೇ ದಿನಕ್ಕೆ 10 ಕೋಟಿ ಬಾಚಿಕೊಂಡಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ
Image
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Image
Sapthami Gowda: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ಹೆಚ್ಚಿತು ನಟಿ ಸಪ್ತಮಿ ಗೌಡ ಡಿಮ್ಯಾಂಡ್​
Image
Rishab Shetty: ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​; ಹಿಂದಿ ಪ್ರೇಕ್ಷಕರಲ್ಲಿ ಹೆಚ್ಚಿತು ‘ಕಾಂತಾರ’ ಸೆನ್ಸೇಷನ್​
Image
Rishab Shetty: ಐಎಂಡಿಬಿಯಲ್ಲಿ ಗಮ್ಮತ್​ ರೇಟಿಂಗ್​ ಪಡೆದ ‘ಕಾಂತಾರ’; ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ರಿಷಬ್​ ಸಿನಿಮಾ

ತಮಿಳಿನವರೂ ‘ಕಾಂತಾರ’ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ತಮಿಳುನಾಡಿನಲ್ಲಿ ಸೋಮವಾರ (ಸೆಪ್ಟೆಂಬರ್ 29) ‘ಕಾಂತಾರ’ ಚಿತ್ರಕ್ಕೆ ಥಿಯೇಟರ್ ಸಂಖ್ಯೆ ಹೆಚ್ಚಿಸಲಾಗಿದೆ. ಸೆ.30ಕ್ಕೆ ರಿಲೀಸ್ ಆದ ‘ಪೊನ್ನಿಯಿನ್​ ಸೆಲ್ವನ್​’ ಜಾಗದಲ್ಲಿ ‘ಕಾಂತಾರ’ ಚಿತ್ರ ಆವರಿಸಿಕೊಳ್ಳುತ್ತಿದೆ. ತಮಿಳುನಾಡಿನಲ್ಲಿ ಅನೇಕ ಕಡೆಗಳಲ್ಲಿ ಈ ಸಿನಿಮಾಗೆ ಮುಂಜಾನೆ ಶೋ ನೀಡಲಾಗುತ್ತಿದೆ.

ಇದನ್ನೂ ಓದಿ: Rishab Shetty: ಒಂದೇ ದಿನಕ್ಕೆ 15 ಕೋಟಿ ರೂಪಾಯಿ ಬಾಚಿದ ‘ಕಾಂತಾರ’; ಪರಭಾಷೆಯಲ್ಲಿ ಭರ್ಜರಿ ಕಮಾಯಿ

ಸದ್ಯ ‘ಕಾಂತಾರ’ 100 ಕೋಟಿ ಗಳಿಕೆ ಮಾಡಿದೆ. ಪರಭಾಷೆಯವರಿಗೆ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿರುವುದರಿಂದ 200 ಕೋಟಿ ರೂ. ಕ್ಲಬ್ ಸೇರಲು ಹೆಚ್ಚು ದಿನ ಬೇಕಾಗದೆ ಇರಬಹುದು ಎಂದು ಬಾಕ್ಸ್ ಆಫೀಸ್ ಪಂಡಿತರು ಊಹಿಸುತ್ತಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು