ಹೊಂಗನಸು: ವಸುಧರಾ ಮತ್ತು ರಿಷಿ ನಡುವೆ ಏನ್ ನಡೀತಿದೆ? ತಲೆ ಕೆಡಿಸಿಕೊಂಡ ಗೌತಮ್
Honganasu Serial Update: ಜಗತಿಯ ಮಾತು ಕೇಳಿ ಗೌತಮ್‌ಗೆ ಶಾಕ್ ಆಯಿತು. ವಸುಧರಾ ಮತ್ತು ರಿಷಿ ನಡುವೆ ಏನೋ ನಡಿತಿದೆ ಎಂದು ಮನಸಲ್ಲೇ ಅಂದುಕೊಂಡ. ಬಳಿಕ ಮನೆಯೊಳಗೆ ಹೋಗಿ ವಸುಧರಾಳ ಪುಸ್ತಕಗಳನ್ನು ನೋಡಿದ.
ವಸುಧರಾ ಮತ್ತು ರಿಷಿ ಇಬ್ಬರೂ ಎಜುಕೇಶನ್ ಪ್ರಾಜೆಕ್ಟ್ ಮೇಲೆ ಹಳ್ಳಿಯಲ್ಲಿದ್ದಾರೆ. ಕೆಲಸ ಮುಗಿದ ಬಳಿಕ ವಸು ‘ಇಲ್ಲೇ ಸ್ವಲ್ಪ ಸಮಯ ಇರೋಣ, ವಾತಾವರಣ ಚೆನ್ನಾಗಿದೆ’ ಎಂದು ರಿಷಿಗೆ ಹೇಳಿದಳು. ಆದರೆ ರಿಷಿ ‘ಇಲ್ಲೇ ಇದ್ರೆ ಮತ್ತೆ ಕೊಚ್ಚೆ ಹಾರಿಸಿ ಹೋಗುತ್ತಾರೆ ಹೋಗೋಣ’ ಎಂದು ಕಾರು ಹತ್ತಿದ. ಇತ್ತ ಗೌತಮ್ ವಸುಧರಾ ಜೊತೆ ಮಾತನಾಡಬೇಕೆಂದು ಹುಡುಕಿಕೊಂಡು ಅವಳ ಮನೆಗೆ ಬಂದ. ಗೌತಮ್ ಬಂದಿದ್ದು ನೋಡಿ ಜಗತಿ ಅಚ್ಚರಿ ಪಟ್ಟಳು. ವಸುಧರಾಳನ್ನು ಭೇಟಿಯಾಗಲು ಬಂದೆ ಎಂದು ಗೌತಮ್ ಹೇಳಿದ. ವಸುಧರಾ ರಿಷಿ ಜೊತೆ ಹೊರಹೋಗಿದ್ದಾಳೆ ಎಂದು ಜಗತಿ ಹೇಳಿದಳು. ಜಗತಿ ಮಾತು ಗೌತಮ್‌ಗೆ ಶಾಕ್ ಆಯಿತು. ಇಬ್ಬರ ನಡುವೆ ಏನೋ ನಡಿತಿದೆ ಎಂದು ಮನಸಲ್ಲೇ ಅಂದುಕೊಂಡ. ಬಳಿಕ ಮನೆಯೊಳಗೆ ಹೋದ ಗೌತಮ್ ವಸುಧರಾಳ ಪುಸ್ತಕಗಳನ್ನು ನೋಡಿದ.
‘ಇವೆಲ್ಲಾ ಯಾಕೆ ಇಲ್ಲೇ ಇಟ್ಟಿದ್ದೀರಿ ನಾನೇ ಅವಳ ರೂಮಿನಲ್ಲಿ ಇಡುತ್ತೇನೆ’ ಎಂದು ಜಗತಿಗೆ ಗೌತಮ್ ಹೇಳಿದ. ಆಕೆ ಬೇಡ ಎಂದರೂ ವಸು ರೂಮಿಗೆ ಹೋಗಿ ಪುಸ್ತಕ ಇಟ್ಟ. ಅಲ್ಲಿ ವಸು ಇಟ್ಟಿದ್ದ ಗೋಲಿಯ ಡಬ್ಬ ನೋಡಿದ. ರಿಷಿ ಬಳಿಯೂ ಇದೇ ಡಬ್ಬ ಇದೆಯಲ್ಲಾ, ಇಬ್ಬರ ನಡುವೆ ಏನೋ ಕನೆಕ್ಷನ್ ಇದೆ, ಹಾಗೇನಾದ್ರು ಇದ್ರೆ ಬೇಗ ಕಟ್ ಮಾಡಬೇಕು ಅಂದುಕೊಂಡ.
ರಿಷಿ ಮತ್ತು ವಸುಧರಾ ಇಬ್ಬರೂ ಕಾರು ನಿಲ್ಲಿಸಿ ಮಾತನಾಡುತ್ತಿದ್ದರು. ರಿಷಿಗೆ ತಿನ್ನಲು ಕಡಲೇಕಾಯಿ ನೀಡಿ ವಸು ಅದರ ಬಗ್ಗೆ ವಿವರಣೆ ಕೊಟ್ಟಳು. ಕಡಲೇಕಾಯಿ ತಿನ್ನುವಾಗ ರಿಷಿ ಕಣ್ಣಿಗೆ ಸಿಪ್ಪೆ ಹಾರಿಸಿಕೊಂಡ. ರಿಷಿ ಕಣ್ಣಿಗೆ ಬಿದ್ದಿದ್ದ ಕಸವನ್ನು ವಸುಧರಾ ತೆಗೆದಳು. ಪ್ರೀತಿಯ ಕಣ್ ಸಲಿಗೆ ಗೊತ್ತಿಲ್ಲದೇ ಇಬ್ಬರಲ್ಲೂ ಪ್ರೀತಿಯ ಬೀಜ ಬಿತ್ತಿತ್ತು. ನಂತರ ಅಲ್ಲಿಂದ ಹೊರಟು ವಸುಧರಾಳನ್ನು ಮನೆಗೆ ಡ್ರಾಪ್ ಮಾಡಿ ರಿಷಿ ತನ್ನ ಮನೆ ಕಡೆ ಹೊರಟ. ದಾರಿಯಲ್ಲಿ ರಿಷಿ ವಸು ಜೊತೆಗಿನ ಪಯಣವನ್ನೇ ನೆನಪಿಸಿಕೊಳ್ಳುತ್ತಾ ಸಾಗಿದ.
ಶಾರ್ಟ್‌ಫಿಲ್ಮ್ನಲ್ಲಿ ನಟಿಸಲು ಅವಕಾಶ ಕೊಡು ಅಂತ ರಿಷಿ ಬಳಿ ಗೌತಮ್ ಕೇಳಿಕೊಂಡ. ಗೌತಮ್ ಮಾತಿಗೆ ಓಕೆ ಎಂದ ರಿಷಿ ಒಂದಿಷ್ಟು ಕಂಡೀಷನ್ ಹಾಕಿದ. ವಸುಧರಾಳಿಂದ ದೂರ ಇರಬೇಕೆಂದು ಗೌತಮ್‌ಗೆ ಹೇಳಿದ. ಈ ಕಂಡೀಷನ್ ಆಗಲ್ಲ ಎಂದು ಗೌತಮ್ ಹೇಳಿದ. ಹಾಗಾದ್ರೆ ಬೇರೆಯವರಿಗೆ ಕೊಡುತ್ತೇನೆ ಎಂದು ರಿಷಿ ಹೇಳಿದ. ಬೇಡ ಬೇಡ ತಾನೆ ಮಾಡುತ್ತೇನೆ ಕಂಡೀಷನ್ ಎಲ್ಲಾ ಓಕೆ ಎಂದು ಗೌತಮ್ ಒಪ್ಪಿಕೊಂಡ. ಆಗ ಜಗತಿ ಎಂಟ್ರಿ ಕೊಟ್ಟಳು. ಜಗತಿ ಬಳಿ ರಿಷಿ ಆ ಪಾತ್ರ ಗೌತಮ್‌ಗೆ ಕೊಡಿ ಎಂದು ಹೇಳಿದ. ಮನೆಗೆ ಬಂದ ಗೌತಮ್ ವಸುಧರಾಳಿಗೆ ಶಾರ್ಟ್‌ಫಿಲ್ಮ್ನಲ್ಲಿ ನಟಿಸಲು ಎಲ್ಲಾ ತಯಾರಿ ಮಾಡಿಕೊಂಡು ಬರುವಂತೆ ಹೇಳಿದ.
ಬೆಳಗ್ಗೆ ಕಾಲೇಜಿಗೆ ಹೊರಟಿದ್ದ ರಿಷಿ ಜೊತೆ ಗೌತಮ್ ಕೂಡ ಹೊರಟ. ಆದರೆ ರಿಷಿ ತನ್ನ ಕಾರಿನಲ್ಲಿ ಕೂರಿಸಿಕೊಳ್ಳದೆ ಬೇರೆ ಕಾರಿನಲ್ಲಿ ಬರುವಂತೆ ಗೌತಮ್‌ಗೆ ಹೇಳಿ ಹೊರಟ. ರಿಷಿ ಮಿತ್ರ ದ್ರೋಹಿ ಎಂದು ಬೈಯ್ದುಕೊಳ್ಳುತ್ತಾ ಗೌತಮ್ ಮತ್ತೊಂದು ಕಾರು ಹತ್ತಿದ. ಕಿರುಚಿತ್ರದಲ್ಲಿ ವಸುಧರಾ ಜೊತೆ ನಟಿಸುತ್ತಿದ್ದೀನಿ ಎನ್ನುವ ಖುಷಿಯಲ್ಲಿದ್ದಾನೆ ಗೌತಮ್. ಆದರೆ ರಿಷಿ ಬೇರೆನೇ ಪ್ಲಾನ್ ಮಾಡಿದ್ದಾನೆ. ಗೌತಮ್ ಆಸೆ ಈಡೇರುತ್ತಾ? ವಸುಧರಾ ಜೊತೆ ಆಕ್ಟ್ ಮಾಡುವ ಗೌತಮ್ ಕನಸು ನನಸಾಗುತ್ತಾ ಅಂತ ಕಾದುನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.