AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಂಗನಸು: ಗೌತಮ್‌ಗೆ ಚಳ್ಳೆ ಹಣ್ಣು ತಿನ್ನಿಸಿ ವಸು ಜೊತೆ ರಿಷಿಯ ರೊಮ್ಯಾಂಟಿಕ್ ಬೈಕ್ ರೈಡ್

Honganasu Serial Update: ವಸು ಜೊತೆ ಎಡಿಟಿಂಗ್ ಸ್ಟುಡಿಯೋಗೆ ಹೋಗುವುದಾಗಿ ರಿಷಿ ಹೇಳಿದ. ಇಬ್ಬರೂ ಒಟ್ಟಿಗೆ ಹೋಗುತ್ತಿರುವುದನ್ನು ಸಹಿಸದ ಗೌತಮ್ ತಾನು ಕೂಡ ಅವರ ಜೊತೆ ಹೋಗುವ ಪ್ಲ್ಯಾನ್ ಮಾಡಿದ.

ಹೊಂಗನಸು: ಗೌತಮ್‌ಗೆ ಚಳ್ಳೆ ಹಣ್ಣು ತಿನ್ನಿಸಿ ವಸು ಜೊತೆ ರಿಷಿಯ ರೊಮ್ಯಾಂಟಿಕ್ ಬೈಕ್ ರೈಡ್
ಹೊಂಗನಸು ಸೀರಿಯಲ್
TV9 Web
| Edited By: |

Updated on: Oct 18, 2022 | 9:23 AM

Share

ಎಜುಕೇಶನ್ ಪ್ರಾಜೆಕ್ಟ್‌ಗೆ ಸಂಬಂಧಿದ ಕಿರುಚಿತ್ರದಲ್ಲಿ ವಸು ಜೊತೆ ರಿಷಿ ನಟಿಸಿದ್ದಾನೆ. ಇಬ್ಬರ ರೊಮ್ಯಾಂಟಿಕ್ ಆಕ್ಟಿಂಗ್ ಎಲ್ಲರಿಗೂ ಇಷ್ಟವಾಗಿದೆ. ಮಹೇಂದ್ರ ಮತ್ತು ಜಗತಿ ಇಬ್ಬರೂ ವಸು ಮತ್ತು ರಿಷಿ ಅಭಿನಯಕ್ಕೆ ಫುಲ್ ಮಾರ್ಕ್ಸ್ ನೀಡಿದರು. ವಸು ರಾತ್ರಿಯಲ್ಲಾ ರಿಷಿ ಗುಂಗಲ್ಲೇ ಕಳೆದು ಹೋಗಿದ್ದಳು. ರಿಷಿಗೂ ಕೂಡ ವಸುದೇ ನೆನಪು. ಇಬ್ಬರೂ ದೂರ ದೂರ ಇದ್ದರೂ ಸಹ ಇಬ್ಬರ ಹೃದಯ ಮಾತ್ರ ಹತ್ತಿರನೇ ಇದೆ. ವಸುಗೆ ರಿಷಿ ಸದಾ ಪಕ್ಕದಲ್ಲೇ ಇದ್ದ ಹಾಗೆ ನೆನಪು. ರಾತ್ರಿ ಮಲಗಿದ್ದ ವಸುಗೆ ರಿಷಿ ಜೋರಾಗಿ ಕರೆಯುತ್ತಿದ್ದಾರೆ ಎಂದು ಕೂಗುತ್ತಾ ಗಾಬರಿಯಲ್ಲಿ ಎದ್ದಳು. ಕಣ್ಣು ಬಿಟ್ಟು ನೋಡಿದರೆ ಕನಸು. ಇತ್ತ ರಿಷಿ ಕೂಡ ನಿದ್ದೆ ಬರುತ್ತಿಲ್ಲ ಎಂದು ಒದ್ದಾಡುತ್ತಿದ್ದ.

ಬೆಳಗ್ಗೆ ಎದ್ದು ಕಾಲೇಜಿಗೆ ಬಂದ ರಿಷಿಗೆ ಕಾರು ಇಳಿಯುತ್ತಿದ್ದಂತೆ ವಸುಧರಾ ಎದುರಾದಳು. ಕಣ್ಣು ಯಾಕೆ ಕೆಂಪಾಗಿದೆ ನಿದ್ದೆ ಮಾಡಿಲ್ವಾ ಎಂದು ವಸುಧರಾಳನ್ನು ವಿಚಾರಿಸಿದ ರಿಷಿ. ಅಷ್ಟರಲ್ಲೇ ಗೌತಮ್ ಎಂಟ್ರಿ ಕೊಟ್ಟ. ಗೌತಮ್ ಬರುತ್ತಿದ್ದಂತೆ ವಸುಗೆ ಕ್ಲಾಸ್‌ಗೆ ಹೋಗು ಎಂದು ಅಲ್ಲಿಂದ ಕಳುಹಿಸಿದ ರಿಷಿ. ಕೋಪಗೊಂಡ ಗೌತಮ್ ವಸುಧರಾಳಿಗೆ ಯಾಕೆ ಹೆದರಿಸುತ್ತೀಯಾ, ಬೈಯುತ್ತೀಯಾ ಎಂದು ಕೇಳಿದ. ಆದರೆ ರಿಷಿ ಇಬ್ಬರೂ ಮಾತನಾಡುತ್ತಿರುವಾಗ ಮಧ್ಯ ಬರಬಾರದು ಅಂತ ಗೊತ್ತಿಲ್ವಾ ಎಂದು ಕೇಳಿದ. ನನಗೆ ಎಲ್ಲಾ ಗೊತ್ತು ನಿನ್ನ ಹತ್ರ ಕಲಿಯಬೇಕಾಗಿಲ್ಲ ಎಂದು ರಿಷಿಗೆ ತಿರುಗೇಟು ನೀಡಿದ ಗೌತಮ್.

ರಿಷಿ ಕ್ಲಾಸ್ ರೂಮಿಗೆ ಎಂಟ್ರಿ ಕೊಟ್ಟ. ಪಾಠ ಮಾಡುವಾಗ ವಸುಧರಾ ನಿದ್ದೆ ಜಾರಿದ್ದಳು. ಗಮನಿಸಿದ ರಿಷಿ ರಾತ್ರಿ ನಿದ್ದೆ ಮಾಡಿಲ್ವಾ, ಏನಾದರೂ ಸಮಸ್ಯೆನಾ ಎಂದು ಕೇಳಿದ. ವಸುಧರಾ ತಕ್ಷಣ ನೀವೆ ನನ್ನ ದೊಡ್ಡ ಸಮಸ್ಯೆ ಎಂದು ಜೋರಾಗಿ ಹೇಳಿದಳು. ವಸು ಪ್ರತಿಕ್ರಿಯೆ ರಿಷಿಗೆ ಮುಜುಗರ ಉಂಟುಮಾಡಿತು. ರಿಷಿ ಮುಂದೇನು ಕೇಳದೆ ಪಾಠ ಮುಂದುವರೆಸಿದ.

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ವಸು ಜೊತೆ ಎಡಿಟಿಂಗ್ ಸ್ಟುಡಿಯೋಗೆ ಹೋಗುವುದಾಗಿ ರಿಷಿ ಹೇಳಿದ. ಇಬ್ಬರೂ ಒಟ್ಟಿಗೆ ಹೋಗುತ್ತಿರುವುದನ್ನು ಸಹಿಸದ ಗೌತಮ್ ತಾನು ಕೂಡ ಅವರ ಜೊತೆ ಹೋಗುವ ಪ್ಲಾನ್ ಮಾಡಿದ. ವಸುಧರಾ ಬಳಿ ಹೋಗಿ ನಾನು, ನೀನು ಮತ್ತು ರಿಷಿ ಮೂವರು ಒಂದು ಕಡೆ ಹೋಗ್ತಾ ಇದ್ದೀವಿ, ಕಾರ್ ಹತ್ತಿರ ಬನ್ನಿ ಎಂದು ತಲೆಗೆ ಹುಳ ಬಿಟ್ಟು ಹೋದ. ಗೌತಮ್ ಹೋಗುತ್ತಿದ್ದಂತೆ ರಿಷಿ ವಸು ಬಳಿ ಬಂದು ಏನು ಎಂದು ವಿಚಾರಿಸಿದ. ಗೌತಮ್ ಹೇಳಿದ ವಿಚಾರವನ್ನು ರಿಷಿಗೆ ಹೇಳಿದಳು. ಆಗಲೇ ನಮ್ಮ ಜೊತೆ ಬರಲು ಗೌತಮ್ ಪ್ಲಾನ್ ಮಾಡಿದ್ದಾನಾ ಎಂದು ರಿಷಿ ಮತ್ತೊಂದು ಉಪಾಯ ಮಾಡಿದ.

ಗೌತಮ್ ಕಾರು ಮುಂದೆ ಕಾಯುತ್ತಾ ನಿಂತಿದ್ದ. ಆದರೆ ರಿಷಿ ಗೌತಮ್‌ಗೆ ಚಳ್ಳೆ ಹಣ್ಣು ತಿನ್ನಿಸಿ ವಸು ಜೊತೆ ಬೈಕಲ್ಲಿ ಹೊರಟ. ಬೈಕ್ ಹೋಗುವುದನ್ನು ದೂರದಿಂದ ನೋಡಿದ ಗೌತಮ್ ನನ್ನದೇ ಬೈಕ್ ಇದ್ದ ಹಾಗೆ ಇದೆಯಲ್ಲಾ ಎಂದು ಮನಸ್ಸಲ್ಲೇ ಅಂದುಕೊಂಡ. ಆದರೆ ತನ್ನದೇ ಬೈಕ್ ಎಂದು ಗೌತಮ್‌ಗೆ ಗೊತ್ತಾಗಲಿಲ್ಲ. ವಸುಧರಾಳನ್ನು ಕೂರಿಸಿಕೊಂಡು ರಿಷಿ ಎಡಿಟಿಂಗ್ ಸ್ಟುಡಿಯೋ ಕಡೆ ಹೊರಟ. ಇತ್ತ ಗೌತಮ್ ರಿಷಿ ಬರುತ್ತಾನೆ ಎಂದು ಕಾಯುತ್ತಲೆ ನಿಂತಿದ್ದ. ಅಷ್ಟೊತ್ತಿಗೆ ಮಹೇಂದ್ರ ಬಂದು ಶಾಕ್ ನೀಡಿದ. ‘ರಿಷಿ ಬರಲ್ಲ ಆಗಲೇ ಹೋದ’ ಎಂದು ಹೇಳಿದ. ಮಿತ್ರದ್ರೋಹಿ ಎಂದು ಗೌತಮ್ ಬೈಯ್ದುಕೊಳ್ಳುತ್ತಾ ಮಹೇಂದ್ರ ಅಂಕಲ್ ಜೊತೆ ಮನೆಗೆ ಹೊರಟ. ರಿಷಿ ಜೊತೆ ಬೈಕ್ ಏರಿ ಹೊರಟಿರುವ ವಸು ತನ್ನ ಮನಸ್ಸಲಿ ಇರುವ ಪ್ರೀತಿಯನ್ನು ಹೇಳಿಕೊಳ್ಳುತ್ತಾಳಾ? ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ