500 ಕೋಟಿ ರೂ. ಬಜೆಟ್ನ ‘ಆದಿಪುರುಷ್’ ಚಿತ್ರಕ್ಕೆ ರೀಶೂಟ್; ಮತ್ತೆ ಹೆಚ್ಚಿತು ಪ್ರಭಾಸ್ ಸಿನಿಮಾ ಬಜೆಟ್
ಹೇಗಾದರೂ ಮಾಡಿ ಈ ಟ್ರೋಲ್ಗಳಿಂದ ತಪ್ಪಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಚಿತ್ರತಂಡದವರು ಬಂದಂತೆ ಇದೆ. ಈ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿ ಕೆಲ ಭಾಗದ ಶೂಟ್ ಅನ್ನು ಮರು ಚಿತ್ರೀಕರಿಸಲು ನಿರ್ಧರಿಸಲಾಗಿದೆ.
‘ಆದಿಪುರುಷ್’ (Adipurush) ಚಿತ್ರ ತಂಡ ಊಹಿಸಿದ್ದೇ ಒಂದು ಆಗಿದ್ದೇ ಒಂದು ಎಂಬಂತಾಗಿದೆ. ಟೀಸರ್ಗೆ ಅನೇಕರಿಂದ ಟೀಕೆ ವ್ಯಕ್ತವಾಗಿತ್ತು. ಈ ಟೀಕೆಯನ್ನು ಎದುರಿಸಲು ಚಿತ್ರತಂಡದ ಬಳಿ ಸಾಧ್ಯವೇ ಆಗುತ್ತಿಲ್ಲ. ಈ ಕಾರಣಕ್ಕೆ ಚಿತ್ರತಂಡ ಈಗ ಹಿಂದೇಟು ಹಾಕುತ್ತಿದೆ. ಮೂಲಗಳ ಪ್ರಕಾರ ಜನವರಿ 12ರಂದು ಚಿತ್ರ ರಿಲೀಸ್ ಮಾಡಬೇಕು ಎಂಬ ಪ್ಲ್ಯಾನ್ನಿಂದ ಚಿತ್ರತಂಡ ಈಗಾಗಲೇ ಹಿಂದೆ ಸರಿದಿದೆ. ಈಗ, ‘ಆದಿಪುರುಷ್’ ಚಿತ್ರತಂಡ ರೀಶೂಟ್ ಮಾಡುವ ಆಲೋಚನೆಯಲ್ಲಿದೆ ಎಂದು ವರದಿ ಆಗಿದೆ. ಇದರಿಂದ ಚಿತ್ರಕ್ಕೆ ಮತ್ತಷ್ಟು ಹೊರೆ ಆಗಲಿದೆ.
‘ಆದಿಪುರುಷ್’ ಚಿತ್ರತಂಡ ನವರಾತ್ರಿ ಸಂದರ್ಭದಲ್ಲಿ ಟೀಸರ್ ರಿಲೀಸ್ ಮಾಡಿತ್ತು. ತಂಡದವರ ಪ್ರಕಾರ ಚಿತ್ರಕ್ಕೆ ಒಳ್ಳೆಯ ರಿಯಾಕ್ಷನ್ ಸಿಗಬಹುದು ಎಂದು ಚಿತ್ರತಂಡದವರು ಭಾವಿಸಿದ್ದರು. ಆದರೆ, ಅದು ಆಗಿಲ್ಲ. ಟೀಸರ್ಗೆ ನೆಗೆಟಿವ್ ವಿಮರ್ಶೆಗಳು ಹೆಚ್ಚು ಸಿಕ್ಕವು. ಚಿತ್ರ ವಿಚಿತ್ರ ಪ್ರಾಣಿಗಳು ‘ಆದಿಪುರುಷ್’ ಚಿತ್ರದಲ್ಲಿ ಬಳಕೆ ಆಗಿದೆ ಎಂದು ಕೆಲವರು ಹೇಳಿದರು. ಇನ್ನೂ ಕೆಲವರು ರಾವಣನ ಪಾತ್ರಕ್ಕೆ ಅಪಸ್ವರ ತೆಗೆದರು. ಖಿಲ್ಜಿ ರೀತಿಯಲ್ಲಿ ರಾವಣ ಕಾಣಿಸಿಕೊಂಡಿದ್ದಾನೆ ಎಂದು ಅನೇಕರು ಹೇಳಿದರು. ಈ ಎಲ್ಲಾ ಕಾರಣದಿಂದ ಟೀಸರ್ ಟ್ರೋಲ್ ಆಯಿತು. ಮೀಮ್ ಮಾಡುವವರಿಗೆ ಭರ್ಜರಿ ಕಂಟೆಂಟ್ ಸಿಕ್ಕಿತ್ತು.
ಇದು ಚಿತ್ರತಂಡದ ಆತಂಕವನ್ನು ಹೆಚ್ಚಿಸಿದೆ. ಹೇಗಾದರೂ ಮಾಡಿ ಈ ಟ್ರೋಲ್ಗಳಿಂದ ತಪ್ಪಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಚಿತ್ರತಂಡದವರು ಬಂದಂತೆ ಇದೆ. ಈ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿ ಕೆಲ ಭಾಗದ ಶೂಟ್ ಅನ್ನು ಮರು ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಕೆಲ ದೃಶ್ಯಗಳಲ್ಲಿ ವಿಎಫ್ಎಕ್ಸ್ಗಳ ಮೇಲೆ ಮರು ಕೆಲಸ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದಕ್ಕಾಗಿ ಮತ್ತಷ್ಟು ಕೋಟಿ ಖರ್ಚು ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಸಿನಿಮಾದ ಬಜೆಟ್ ಮತ್ತಷ್ಟು ಹೆಚ್ಚಲಿದೆ.
ಇದನ್ನೂ ಓದಿ: ಸಂಕ್ರಾಂತಿ ರೇಸ್ನಿಂದ ಹೊರಹೋದ ‘ಆದಿಪುರುಷ್’; ಬಿಗ್ ಬಜೆಟ್ ಚಿತ್ರಗಳಿಗೆ ಹೆದರಿದ್ರಾ ಪ್ರಭಾಸ್?
ಸದ್ಯ ಪ್ರಭಾಸ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’, ‘ಪ್ರಾಜೆಕ್ಟ್ ಕೆ’ ಮೊದಲಾದ ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ ಇದ್ದಾರೆ. ಹಲವು ಕಾರಣಗಳಿಂದ ಪ್ರಭಾಸ್ ಅವರು ಶೂಟಿಂಗ್ಗೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ನಿರಂತರವಾಗಿ ಈ ಪ್ರಾಜೆಕ್ಟ್ಗಳಿಗೆ ಪ್ರಭಾಸ್ ಕಾಲ್ಶೀಟ್ ಕೊಡಬೇಕಿದೆ. ಇವುಗಳ ಮಧ್ಯೆ ರೀಶೂಟ್ ಮಾಡೋಕೆ ಪ್ರಭಾಸ್ಗೆ ಸಮಯ ಇರುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಓಂರಾವತ್ ಅವರು ‘ಆದಿಪುರುಷ್’ಗೆ ನಿರ್ದೇಶನ ಮಾಡಿದ್ದಾರೆ. ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.