ಸಂಕ್ರಾಂತಿ ರೇಸ್​ನಿಂದ ಹೊರಹೋದ ‘ಆದಿಪುರುಷ್’; ಬಿಗ್ ಬಜೆಟ್​ ಚಿತ್ರಗಳಿಗೆ ಹೆದರಿದ್ರಾ ಪ್ರಭಾಸ್?

TV9kannada Web Team

TV9kannada Web Team | Edited By: Rajesh Duggumane

Updated on: Oct 31, 2022 | 10:32 AM

ಸಂಕ್ರಾಂತಿ ಹಬ್ಬ ಹಿಂದುಗಳ ಪಾಲಿಗೆ ತುಂಬಾನೇ ವಿಶೇಷ. ಈ ಸಂದರ್ಭದಲ್ಲಿ ಚಿತ್ರವನ್ನು ರಿಲೀಸ್ ಮಾಡಬೇಕು ಎಂಬುದು ಅನೇಕ ನಿರ್ಮಾಪಕರ ಆಲೋಚನೆ ಆಗಿರುತ್ತದೆ. ಅನೇಕರು ರೇಸ್​ಗೆ ಇಳಿಯುತ್ತಾರೆ. ಇದರಿಂದ ಸಹಜವಾಗಿಯೇ ಬಾಕ್ಸ್ ಆಫೀಸ್​ ಕ್ಲ್ಯಾಶ್ ಆಗುತ್ತದೆ.

ಸಂಕ್ರಾಂತಿ ರೇಸ್​ನಿಂದ ಹೊರಹೋದ ‘ಆದಿಪುರುಷ್’; ಬಿಗ್ ಬಜೆಟ್​ ಚಿತ್ರಗಳಿಗೆ ಹೆದರಿದ್ರಾ ಪ್ರಭಾಸ್?
ಪ್ರಭಾಸ್-ಸೈಫ್

ನಟ ಪ್ರಭಾಸ್ (Prabhas) ಅವರಿಗೆ ಇತ್ತೀಚೆಗೆ ಸೋಲು ಬೆನ್ನು ಬಿದ್ದಿದೆ. ಸಾಲುಸಾಲು ಹಿಟ್ ಚಿತ್ರಗಳನ್ನು ಕೊಟ್ಟ ಅವರಿಗೆ ಬಾಕ್ಸ್ ಆಫೀಸ್​ನಲ್ಲಿ ಹಿನ್ನಡೆ ಆಗುತ್ತಿದೆ. ‘ಸಾಹೋ’ ಹಾಗೂ ‘ರಾಧ್ಯೆ ಶ್ಯಾಮ್’ ಚಿತ್ರಗಳು ಸೋತವು. ‘ಆದಿಪುರುಷ್’ (Adipurush Movie) ಚಿತ್ರದಿಂದ ಅವರು ಗೆಲುವು ಕಾಣುವ ಆಸೆ ಇಟ್ಟುಕೊಂಡಿದ್ದಾರೆ. ಆದರೆ, ಟೀಸರ್​ನಿಂದಲೇ ಚಿತ್ರಕ್ಕೆ ದೊಡ್ಡ ಹಿನ್ನಡೆ ಉಂಟಾಗಿತ್ತು. ‘ಆದಿಪುರುಷ್​’ನಲ್ಲಿ ಬಳಕೆ ಆದ ಟೀಸರ್ ಬಗ್ಗೆ ಎಲ್ಲರೂ ಟೀಕೆ ಮಾಡಿದರು. ಈಗ ಸಂಕ್ರಾಂತಿ ರೇಸ್​ನಿಂದ ಪ್ರಭಾಸ್ ಚಿತ್ರ ಹೊರ ಬಿದ್ದಿದೆ ಎಂದು ವರದಿ ಆಗಿದೆ. ದೊಡ್ಡ ಚಿತ್ರಗಳಿಗೆ ಪ್ರಭಾಸ್ ಹೆದರಿದರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಸಂಕ್ರಾಂತಿ ಹಬ್ಬ ಹಿಂದುಗಳ ಪಾಲಿಗೆ ತುಂಬಾನೇ ವಿಶೇಷ. ಈ ಸಂದರ್ಭದಲ್ಲಿ ಚಿತ್ರವನ್ನು ರಿಲೀಸ್ ಮಾಡಬೇಕು ಎಂಬುದು ಅನೇಕ ನಿರ್ಮಾಪಕರ ಆಲೋಚನೆ ಆಗಿರುತ್ತದೆ. ಅನೇಕರು ರೇಸ್​ಗೆ ಇಳಿಯುತ್ತಾರೆ. ಇದರಿಂದ ಸಹಜವಾಗಿಯೇ ಬಾಕ್ಸ್ ಆಫೀಸ್​ ಕ್ಲ್ಯಾಶ್ ಆಗುತ್ತದೆ. 2023ರ ಸಂಕ್ರಾಂತಿಗೂ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿವೆ. ಈ ರೇಸ್​ನಲ್ಲಿ ಸಿಕ್ಕು ಹಿನ್ನಡೆ ಅನುಭವಿಸುವುದಕ್ಕಿಂತ ಏಕಾಂಗಿಯಾಗಿ ಬರುವುದು ಉತ್ತಮ ಎಂಬ ನಿರ್ಧಾರಕ್ಕೆ ‘ಆದಿಪುರುಷ್’ ತಂಡ ಬಂದಂತಿದೆ.

ಚಿರಂಜೀವಿ ನಟನೆಯ ‘ವಾಲ್ತೆರು ವೀರಯ್ಯ’ ಹಾಗೂ ಬಾಲಯ್ಯ ನಟನೆಯ ‘ವೀರ ಸಿಂಹ ರೆಡ್ಡಿ’ ಸಿನಿಮಾ ಸಂಕ್ರಾಂತಿ ಸಂದರ್ಭದಲ್ಲಿ ರಿಲೀಸ್ ಆಗುತ್ತಿದೆ. ಇದರ ಜತೆಗೆ ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ ‘ವಾರಿಸು’ ಹಾಗೂ ಅಜಿತ್ ಕುಮಾರ್ ನಟನೆಯ ‘ತುನಿವು’ ಚಿತ್ರಗಳು ಇದೇ ಸಂದರ್ಭದಲ್ಲಿ ಬಿಡುಗಡೆ ಆಗುತ್ತಿವೆ. ಇನ್ನೂ ಕೆಲವು ಸಿನಿಮಾಗಳು ರೇಸ್​ನಲ್ಲಿ ಸೇರಿಕೊಳ್ಳುವ ನಿರೀಕ್ಷೆ ಇದೆ. ಇಷ್ಟು ಸಿನಿಮಾಗಳ ಮಧ್ಯೆ ‘ಆದಿಪುರುಷ್’ ಚಿತ್ರ ಸ್ಪರ್ಧಿಸಬೇಕಿದೆ.

ಇದನ್ನೂ ಓದಿ: ಪ್ರಭಾಸ್​ ಹುಟ್ಟುಹಬ್ಬ; ಈ ವರ್ಷ ಅದ್ದೂರಿ ಆಚರಣೆಗೆ ಬ್ರೇಕ್​; ಸಲಾರ್​, ಆದಿಪುರುಷ್​ ತಂಡಗಳ ಪ್ಲ್ಯಾನ್​ ಏನು?

ಇದನ್ನೂ ಓದಿ

ಚಿತ್ರಕ್ಕೆ ಈಗಾಗಲೇ ಗ್ರಾಫಿಕ್ಸ್ ವಿಚಾರದಲ್ಲಿ ಹಿನ್ನಡೆ ಆಗಿದೆ. ಸೈಫ್ ಅಲಿ ಖಾನ್ ಅವರು ಮಾಡಿರುವ ರಾವಣನ ಪಾತ್ರಕ್ಕೆ ಹಲವರ ಆಕ್ಷೇಪ ಇದೆ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಈ ಚಿತ್ರಕ್ಕೆ ಬೈಕಾಟ್ ಬಿಸಿ ಕೂಡ ತಟ್ಟಬಹುದು. ಚಿತ್ರ ಬಿಡುಗಡೆ ಆದ ನಂತರದಲ್ಲಿ ಸಿನಿಮಾ ಬಗ್ಗೆ ನೆಗೆಟಿವ್ ಟಾಕ್ ಶುರುವಾದರೆ ದೊಡ್ಡ ದೊಡ್ಡ ಚಿತ್ರಗಳ ನಡುವೆ ಬಿಸ್ನೆಸ್ ಮಾಡುವುದು ಕಷ್ಟ ಆಗಬಹುದು. ಸಿನಿಮಾಗೆ 500 ಕೋಟಿ ರೂಪಾಯಿ ಸುರಿದಿರುವುದರಿಂದ ಹೆಚ್ಚಿನ ಬಿಸ್ನೆಸ್ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಚಿತ್ರತಂಡ ರಿಲೀಸ್ ದಿನಾಂಕ ಮುಂದೂಡಿದೆ ಎಂದು ವರದಿ ಆಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada