Prabhas Birthday: ಪ್ರಭಾಸ್​ ಹುಟ್ಟುಹಬ್ಬ; ಈ ವರ್ಷ ಅದ್ದೂರಿ ಆಚರಣೆಗೆ ಬ್ರೇಕ್​; ಸಲಾರ್​, ಆದಿಪುರುಷ್​ ತಂಡಗಳ ಪ್ಲ್ಯಾನ್​ ಏನು?

Happy Birthday Prabhas: ಪ್ರಭಾಸ್​ ಅವರು ‘ಆದಿಪುರುಷ್​’ ಮತ್ತು ‘ಸಲಾರ್​’ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ವಿಶೇಷ ನಿರೀಕ್ಷೆ ಇದೆ.

Prabhas Birthday: ಪ್ರಭಾಸ್​ ಹುಟ್ಟುಹಬ್ಬ; ಈ ವರ್ಷ ಅದ್ದೂರಿ ಆಚರಣೆಗೆ ಬ್ರೇಕ್​; ಸಲಾರ್​, ಆದಿಪುರುಷ್​ ತಂಡಗಳ ಪ್ಲ್ಯಾನ್​ ಏನು?
ಪ್ರಭಾಸ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 23, 2022 | 6:45 AM

ನಟ ಪ್ರಭಾಸ್​ (Prabhas) ಅವರಿಗೆ ಇಂದು (ಅ.23) ಹುಟ್ಟುಹಬ್ಬದ ಸಡಗರ. ಆದರೆ ಅವರು ಈ ವರ್ಷ ಅದ್ದೂರಿಯಾಗಿ ಬರ್ತ್​ಡೇ ಆಚರಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಕೆಲವೇ ದಿನಗಳ ಹಿಂದೆ ಪ್ರಭಾಸ್​ ದೊಡ್ಡಪ್ಪ ಕೃಷ್ಣಂ ರಾಜು ಅವರು ನಿಧನ ಹೊಂದಿದ್ದು ನೋವಿನ ಸಂಗತಿ. ಆ ಕಾರಣದಿಂದ ಪ್ರಭಾಸ್​ ಈ ಬಾರಿ ಜನ್ಮದಿನವನ್ನು (Prabhas Birthday) ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿಲ್ಲ. ಆದರೂ ಅವರಿಗೆ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ ಹರಿದು ಬರುತ್ತಿವೆ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಪ್ರಭಾಸ್​ಗೆ ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ. ಅವರು ನಟಿಸುತ್ತಿರುವ ಸಿನಿಮಾ (Prabhas Movies) ತಂಡಗಳಿಂದ ವಿಶೇಷ ಪೋಸ್ಟರ್​ಗಳು ಬಿಡುಗಡೆ ಆಗುತ್ತಿವೆ.

ಪ್ರಭಾಸ್​ ಅವರು ಈಗ ‘ಆದಿಪುರುಷ್​’ ಮತ್ತು ‘ಸಲಾರ್​’ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬರ್ತ್​ಡೇ ಪ್ರಯುಕ್ತ ಈ ಸಿನಿಮಾ ತಂಡಗಳಿಂದ ಸರ್ಪ್ರೈಸ್​ ಸಿಗುವ ನಿರೀಕ್ಷೆ ಇದೆ. ಇತ್ತೀಚೆಗೆ ‘ಆದಿಪುರುಷ್​’ ಚಿತ್ರದಿಂದ ಟೀಸರ್​ ಬಿಡುಗಡೆ ಆಗಿತ್ತು. ಈಗ ಹುಟ್ಟುಹಬ್ಬದ ಸಲುವಾಗಿ ಹೊಸ ಪೋಸ್ಟರ್​ ರಿಲೀಸ್​ ಆಗಲಿದೆ. ಅದೇ ರೀತಿ, ‘ಸಲಾರ್​’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ಈ ಟೀಮ್​ನಿಂದಲೂ ವಿಶೇಷ ಗಿಫ್ಟ್​ ಸಿಗುವ ಸಾಧ್ಯತೆ ದಟ್ಟವಾಗಿದೆ. ಅದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.

ಪ್ರಭಾಸ್​ ಅವರು ‘ಬಾಹುಬಲಿ’ ಸಿನಿಮಾದ ನಂತರ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದಿದ್ದಾರೆ. ಅವರು ಮಾಡುವ ಎಲ್ಲ ಸಿನಿಮಾಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಸಾಹೋ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸ್ಕೋರ್​ ಮಾಡಲಿಲ್ಲ. ಪಕ್ಕಾ ಕ್ಲಾಸ್​ ಮಾದರಿಯಲ್ಲಿ ಮೂಡಿಬಂದಿದ್ದ ‘ರಾಧೆ ಶ್ಯಾಮ್​’ ಸಿನಿಮಾ ಕೂಡ ಫ್ಲಾಪ್​ ಆಯಿತು. ಹಾಗಾಗಿ ಪ್ರಭಾಸ್​ ಅವರಿಗೆ ತುರ್ತಾಗಿ ಒಂದು ಗೆಲುವು ಬೇಕಿದೆ.

ಇದನ್ನೂ ಓದಿ
Image
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Image
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

ಪ್ರತಿ ಸಿನಿಮಾದಲ್ಲಿ ಪ್ರಭಾಸ್​ ಅವರು ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ‘ಆದಿ ಪುರುಷ್​’ ಚಿತ್ರದಲ್ಲಿ ಅವರು ರಾಮನ ಪಾತ್ರಕ್ಕೆ ಬಣ್ಣ ಹಚ್ಚಿರುವುದು ವಿಶೇಷ. ಆ ಗೆಟಪ್​ನಲ್ಲಿ ಅವರು ಹೇಗೆ ಕಾಣುತ್ತಾರೆ ಎಂಬುದು ಈಗಾಗಲೇ ಟೀಸರ್​ನಲ್ಲಿ ಗೊತ್ತಾಗಿದೆ. ಕಳಪೆ ಗ್ರಾಫಿಕ್ಸ್ ಎಂಬ ಕಾರಣಕ್ಕೆ ನೆಟ್ಟಿಗರು ಈ ಚಿತ್ರದ ಟೀಸರ್​ ಅನ್ನು ಟ್ರೋಲ್​ ಮಾಡಿದ್ದಾರೆ ಎಂಬುದು ನಿಜ. ಆದರೆ ಚಿತ್ರದ ಮೇಲೆ ಅಭಿಮಾನಿಗಳು ಇಟ್ಟಿರುವ ಕ್ರೇಜ್​ ಕಡಿಮೆ ಆಗಿಲ್ಲ. 2023ರ ಜನವರಿ 12ರಂದು ‘ಆದಿಪುರುಷ್​’ ಸಿನಿಮಾ ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.