AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK9: ಮ್ಯಾಚ್​ ಫಿಕ್ಸಿಂಗ್​ ಆರೋಪದ ಮರು ವಾರವೇ ಬಿಗ್ ಬಾಸ್​ ಶೋಗೆ ಸುದೀಪ್​ ಗೈರು; ಮುನಿಸಿಕೊಂಡ್ರಾ ಕಿಚ್ಚ?

Bigg Boss Kannada: ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಶೋ ತಪ್ಪಿಸಿಕೊಂಡಿದ್ದು ತೀರಾ ವಿರಳ. ವೀಕೆಂಡ್​ ಸಂಚಿಕೆಗಳಲ್ಲಿ ಅವರು ಇಲ್ಲ ಎಂದರೆ ಕಳೆಯೇ ಇರುವುದಿಲ್ಲ.

BBK9: ಮ್ಯಾಚ್​ ಫಿಕ್ಸಿಂಗ್​ ಆರೋಪದ ಮರು ವಾರವೇ ಬಿಗ್ ಬಾಸ್​ ಶೋಗೆ ಸುದೀಪ್​ ಗೈರು; ಮುನಿಸಿಕೊಂಡ್ರಾ ಕಿಚ್ಚ?
ಕಿಚ್ಚ ಸುದೀಪ್
TV9 Web
| Edited By: |

Updated on:Oct 22, 2022 | 9:40 PM

Share

ಕಳೆದ ವಾರ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಶೋನಲ್ಲಿ ಕಿಚ್ಚ ಸುದೀಪ್​ ಅವರು ತುಂಬ ಕೋಪಗೊಂಡಿದ್ದರು. ಅದಕ್ಕೆ ಕಾರಣ ಆಗಿದ್ದು ಆರ್ಯವರ್ಧನ್​ ಗುರೂಜಿ (Aryavardhan Guruji) ಮಾಡಿದ ಒಂದು ಆರೋಪ. ಬಿಗ್​ ಬಾಸ್​ ಟಾಸ್ಕ್​ನಲ್ಲಿ ಮ್ಯಾಚ್​ ಫಿಕ್ಸಿಂಗ್ ಆಗಿರಬಹುದು ಎಂಬ ಅನುಮಾನ ಇದೆ ಎಂದು ಗುರೂಜಿ ಹೇಳಿದ್ದರು. ಅದನ್ನು ಕೇಳಿದ ಸುದೀಪ್​ಗೆ ಕೋಪ ನೆತ್ತಿಗೇರಿತ್ತು. ಈ ವೇದಿಕೆಗೆ ಇರುವ ಗೌರವ ಕಡಿಮೆ ಆಗಬಾರದು ಎಂದು ಅವರು ಖಡಕ್​ ಎಚ್ಚರಿಕೆ ನೀಡಿದ್ದರು. ಕೂಡಲೇ ಬ್ರೇಕ್​ ತೆಗೆದುಕೊಂಡು ಬಿರುಸಿನ ಮಾತಿಗೆ ಅಂತ್ಯ ಹಾಡಿದ್ದರು. ಕಾಕತಾಳೀಯ ಎಂಬಂತೆ ಈ ವಾರ ಬಿಗ್​ ಬಾಸ್​ ಶೋ ನಡೆಸಿಕೊಡಲು ಕಿಚ್ಚ ಸುದೀಪ್​ (Kichcha Sudeep) ಬಂದಿಲ್ಲ. ಅವರ ಅನುಪಸ್ಥಿತಿಯಲ್ಲೇ ವೀಕೆಂಡ್​ ಸಂಚಿಕೆ ಪ್ರಸಾರ ಆಗಿದೆ.

ಕಿಚ್ಚ ಸುದೀಪ್ ಅವರು ಮೊದಲ ಸೀಸನ್​ನಿಂದಲೂ ಬಿಗ್​ ಬಾಸ್​ ಶೋ ನಡೆಸಿಕೊಡುತ್ತಾ ಬಂದಿದ್ದಾರೆ. ಅವರ ನಿರೂಪಣೆಗೆ ಒಂದು ತೂಕ ಇದೆ. ಹಲವು ಬಗೆಯ ಮನಸ್ಥಿತಿ ಇರುವ ಸ್ಪರ್ಧಿಗಳನ್ನು ಅವರು ಚೆನ್ನಾಗಿ ನಿಭಾಯಿಸುತ್ತಾರೆ. ಎಂಥ ಸಂದರ್ಭ ಬಂದರೂ ಕಾರ್ಯಕ್ರಮ ಹಾದಿ ತಪ್ಪದ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ವೀಕೆಂಡ್​ ಸಂಚಿಕೆಗಳಲ್ಲಿ ಅವರು ಇಲ್ಲ ಎಂದರೆ ಕಳೆಯೇ ಇರುವುದಿಲ್ಲ. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ನಾಲ್ಕನೇ ವಾರದ ವೀಕೆಂಡ್​ ಸಂಚಿಕೆಯಲ್ಲಿ ಅವರ ಅನುಪಸ್ಥಿತಿ ಕಾಡಿದೆ.

ಸುದೀಪ್​ ಅವರು ಬಿಗ್​ ಬಾಸ್​ ಶೋ ತಪ್ಪಿಸಿಕೊಂಡಿದ್ದು ತೀರಾ ವಿರಳ. ಕಳೆದ ಸೀಸನ್​ನಲ್ಲಿ ಅನಾರೋಗ್ಯದ ಕಾರಣದಿಂದ ಅವರು ಕೆಲವು ಸಂಚಿಕೆಗಳನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅವರು ಗೈರು ಆಗಿರುವುದಕ್ಕೆ ಕಾರಣ ಏನು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಕಳೆದ ವಾರ ಗುರೂಜಿ ಅವರು ಬಿಗ್​ ಬಾಸ್​ ಬಗ್ಗೆ ಮಾಚ್​ ಫಿಕ್ಸಿಂಗ್​ ಆರೋಪ ಮಾಡಿದ್ದಕ್ಕೆ ಸುದೀಪ್​ ಕೋಪ ಮಾಡಿಕೊಂಡಿರಬಹುದೇ ಎಂಬ ಅನುಮಾನ ಕೂಡ ಮೂಡುವುದು ಸಹಜ. ಆದರೆ ಅಸಲಿಯತ್ತು ಬೇರೆಯೇ ಇದೆ.

ಇದನ್ನೂ ಓದಿ
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ
Image
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು

ಕಿಚ್ಚ ಸುದೀಪ್ ಅವರು ಸಿನಿಮಾದ ಜೊತೆಯಲ್ಲಿ ಕುಟುಂಬಕ್ಕೂ ಹೆಚ್ಚು ಮಹತ್ವ ನೀಡುತ್ತಾರೆ. ಪತ್ನಿ ಪ್ರಿಯಾ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಲು ಅವರು ವಿದೇಶಕ್ಕೆ ತೆರಳಿದ್ದಾರೆ. ಆ ಕಾರಣದಿಂದ ಈ ವಾರದ ವೀಕೆಂಡ್​ ಸಂಚಿಕೆಯನ್ನು ನಡೆಸಿಕೊಡಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ಅವರನ್ನು ಬಿಗ್​ ಬಾಸ್​ ವೇದಿಕೆ ಮೇಲೆ ನೋಡಲು ಅಭಿಮಾನಿಗಳು ಕಾದಿದ್ದಾರೆ. ಈ ವಾರ ಯಾರು ಎಲಿಮಿನೇಟ್​ ಆಗುತ್ತಾರೆ ಎಂಬದನ್ನು ತಿಳಿದುಕೊಳ್ಳುವ ಕೌತುಕ ಕೂಡ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:40 pm, Sat, 22 October 22

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ