Zaid Khan: ‘ಕರುನಾಡ ಜನ ನನ್ನ ಕೈ ಬಿಡಲ್ಲ’: ಮೊದಲ ಶೋಗೆ ಸಿಕ್ಕ ಪ್ರತಿಕ್ರಿಯೆಗೆ ‘ಬನಾರಸ್​’ ನಟ ಝೈದ್​ ಖಾನ್​ ಸಂತಸ

Zaid Khan: ‘ಕರುನಾಡ ಜನ ನನ್ನ ಕೈ ಬಿಡಲ್ಲ’: ಮೊದಲ ಶೋಗೆ ಸಿಕ್ಕ ಪ್ರತಿಕ್ರಿಯೆಗೆ ‘ಬನಾರಸ್​’ ನಟ ಝೈದ್​ ಖಾನ್​ ಸಂತಸ

TV9 Web
| Updated By: ಮದನ್​ ಕುಮಾರ್​

Updated on: Nov 04, 2022 | 3:42 PM

Banasar Kannada Movie: ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಬನಾರಸ್​’ ಚಿತ್ರ ಬಿಡುಗಡೆ ಆಗಿದೆ. ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿರುವುದರಿಂದ ಚಿತ್ರತಂಡದವರ ಮೊಗದಲ್ಲಿ ನಗು ಅರಳಿದೆ.

ಜಮೀರ್​ ಅಹ್ಮದ್​ ಅವರ ಪುತ್ರ ಝೈದ್​ ಖಾನ್​ (Zaid Khan) ಅವರು ಮೊದಲ ಬಾರಿಗೆ ನಟಿಸಿರುವ ‘ಬನಾರಸ್​’ ಸಿನಿಮಾ ಇಂದು (ನ.4) ಬಿಡುಗಡೆ ಆಗಿದೆ. ಟೈಮ್​ ಲೂಪ್​ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಜಯತೀರ್ಥ (Jayatheertha) ನಿರ್ದೇಶನ ಮಾಡಿದ್ದಾರೆ. ಗಾಂಧಿನಗರದಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ ಝೈದ್​ ಖಾನ್​ ಅವರು ಸಖತ್​ ಖುಷಿಯಲ್ಲಿದ್ದಾರೆ. ತಮ್ಮ ಸಿನಿಮಾಗೆ ಜನರಿಂದ ಸಿಕ್ಕಿರುವ ಪ್ರತಿಕ್ರಿಯೆ ಕಂಡು ಅವರು ಸಂಭ್ರಮಿಸುತ್ತಿದ್ದಾರೆ. ‘ಕರುನಾಡ ಜನರು ನನ್ನ ಕೈ ಬಿಡಲ್ಲ’ ಎಂದು ಅವರು ಖುಷಿಯಿಂದ ಹೇಳಿದ್ದಾರೆ. ‘ಬನಾರಸ್​’ (Banasar) ಹೌಸ್​ಫುಲ್​ ಪ್ರದರ್ಶನ ಕಂಡಿರುವುದರಿಂದ ಚಿತ್ರತಂಡದವರ ಮೊಗದಲ್ಲಿ ನಗು ಅರಳಿದೆ.