ಕೆ ಅರ್ ನಗರದ ನಿವಾಸಿಗಳಲ್ಲಿ ಭಯ,ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆಹಿಡಿದ ಅರಣ್ಯ ಸಿಬ್ಬಂದಿ!
ಅರಣ್ಯ ಇಲಾಖೆ ಸಿಬ್ಬಂದಿ ಡಾರ್ಟ್ ಗನ್ ಮೂಲಕ ಅರವಳಿಕೆ ಮದ್ದು ತಂಬಿದ ಸೂಜಿಯನ್ನು ಚಿರತೆಯೆಡೆ ಶೂಟ್ ಮಾಡಿ ವ್ಯಾಘ್ರ ಪ್ರಜ್ಞೆ ತಪ್ಪಿಬಿದ್ದ ನಂತರ ಅದನ್ನೆತ್ತಿ ಬೋನಿಗೆ ಹಾಕಿದ್ದಾರೆ.
ಮೈಸೂರು: ಪದೇಪದೆ ಕಾಡಿನಿಂದ ಕೆ ಆರ್ ನಗರ (KR Nagar) ಪಟ್ಟಣಕ್ಕೆ ಕಂಡಕಂಡವರ ಮೇಲೆಲ್ಲ ದಾಳಿ ಮಾಡುತ್ತಾ ಊರ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು (leopard) ಅರಣ್ಯ ಇಲಾಖೆಯವರು ಶುಕ್ರವಾರ ಸೆರೆಹಿಡಿದು ಜನ ನಿಟ್ಟಿಸುರಾಗುವಂತೆ ಮಾಡಿದ್ದಾರೆ. ಕೆ ಆರ್ ನಗರದಿಂದ ಮುಳ್ಳೂರಿಗೆ (Mullur) ಹೋಗುವ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡ ವಿಷಯ ಗೊತ್ತಾದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಗೆ ಧಾವಿಸಿ ಡಾರ್ಟ್ ಗನ್ ಮೂಲಕ ಅರವಳಿಕೆ ಮದ್ದು ತಂಬಿದ ಸೂಜಿಯನ್ನು ಅದರೆಡೆ ಶೂಟ್ ಮಾಡಿ ವ್ಯಾಘ್ರ ಪ್ರಜ್ಞೆ ತಪ್ಪಿಬಿದ್ದ ನಂತರ ಅದನ್ನೆತ್ತಿ ಬೋನಿಗೆ ಹಾಕಿದ್ದಾರೆ. ಸ್ಥಳೀಯರು ಸಹ ಅರಣ್ಯ ಸಿಬ್ಬಂದಿಗೆ ನೆರವಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.
Latest Videos