Kabzaa Movie: ಉತ್ತರ ಭಾರತದಲ್ಲೂ ಹೆಚ್ಚಾಯ್ತು ‘ಕಬ್ಜ’ ಕಾವು; ರಿಲೀಸ್ ಡೇಟ್​ ತಿಳಿಯಲು ಮೂಡಿದೆ ಕಾತರ​

Upendra | Kichcha Sudeep: ಆದಷ್ಟು ಬೇಗ ಕಬ್ಜ’ ಟ್ರೇಲರ್​ ಬರಲಿ ಎಂಬುದು ಫ್ಯಾನ್ಸ್​ ಬಯಕೆ. ಅದರ ಜೊತೆಗೆ ಸಿನಿಮಾದ ರಿಲೀಸ್​ ಡೇಟ್ ಅನೌನ್ಸ್​ ಆಗಲಿ ಎಂದು ಸಿನಿಪ್ರಿಯರು ಅಪೇಕ್ಷಿಸುತ್ತಿದ್ದಾರೆ.

Kabzaa Movie: ಉತ್ತರ ಭಾರತದಲ್ಲೂ ಹೆಚ್ಚಾಯ್ತು ‘ಕಬ್ಜ’ ಕಾವು; ರಿಲೀಸ್ ಡೇಟ್​ ತಿಳಿಯಲು ಮೂಡಿದೆ ಕಾತರ​
ಉಪೇಂದ್ರ
Follow us
TV9 Web
| Updated By: ಮದನ್​ ಕುಮಾರ್​

Updated on: Nov 04, 2022 | 12:52 PM

ಕನ್ನಡ ಸಿನಿಮಾಗಳ ಮಾರುಕಟ್ಟೆ ಚಿಕ್ಕದು ಎಂದು ಹೇಳುವ ಕಾಲ ಈಗ ಉಳಿದಿಲ್ಲ. ‘ಕೆಜಿಎಫ್​: ಚಾಪ್ಟರ್​ 2’, ‘777 ಚಾರ್ಲಿ’, ‘ಕಾಂತಾರ’ ಮುಂತಾದ ಸಿನಿಮಾಗಳು ಚಂದನವನದ ತಾಕತ್ತು ಏನು ಎಂಬುದನ್ನು ಇಡೀ ಭಾರತಕ್ಕೆ ತಿಳಿಸಿವೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಧೂಳೆಬ್ಬಿಸುತ್ತಿವೆ. ಮುಂಬರುವ ಚಿತ್ರಗಳ ಬಗ್ಗೆ ಭಾರಿ ನಿರೀಕ್ಷೆ ಮೂಡಿದೆ. ಆರ್​. ಚಂದ್ರು (R. Chandru) ನಿರ್ದೇಶನದ ‘ಕಬ್ಜ’ ಚಿತ್ರ ಕೂಡ ಇದೇ ರೀತಿಯ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾಗೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ‘ಕಬ್ಜ’ (Kabzaa) ರಿಲೀಸ್​ ಡೇಟ್​ ಇನ್ನೂ ಘೋಷಣೆ ಆಗಿಲ್ಲ. ಉತ್ತರ ಭಾರತದ ಮಂದಿ ಕೂಡ ಈ ಸಿನಿಮಾದ ಬಿಡುಗಡೆ ದಿನಾಂಕ ತಿಳಿದುಕೊಳ್ಳಲು ಕಾದಿದ್ದಾರೆ. ಉಪೇಂದ್ರ (Upendra) ಮತ್ತು ಕಿಚ್ಚ ಸುದೀಪ್​ ಅವರು ಒಟ್ಟಿಗೆ ತೆರೆ ಹಂಚಿಕೊಂಡಿರುವುದರಿಂದ ಹೈಪ್​ ಜೋರಾಗಿದೆ.

ಟ್ರೇಡ್​ ಅನಲಿಸ್ಟ್​ ತರಣ್​ ಆದರ್ಶ್​ ಅವರು ‘ಕಬ್ಜ’ ಚಿತ್ರದ ಹೊಸ ಪೋಸ್ಟರ್​ ಶೇರ್​ ಮಾಡಿಕೊಂಡಿದ್ದಾರೆ. ಅದಕ್ಕೆ ಉತ್ತರ ಭಾರತದ ಸಿನಿಪ್ರಿಯರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಈ ಚಿತ್ರ ಹಿಂದಿಯಲ್ಲೂ ಬಿಡುಗಡೆ ಆಗಲಿದೆ. ಹಾಗಾಗಿ ಉತ್ತರ ಭಾರತದಲ್ಲಿ ಪ್ರೇಕ್ಷಕರು ‘ಕಬ್ಜ’ ಬಗ್ಗೆ ಕಾತರರಾಗಿದ್ದಾರೆ.

ಇದನ್ನೂ ಓದಿ
Image
Shriya Saran: ಬ್ಯಾಕ್​ಲೆಸ್​ ಆಗಿ ಪೋಸ್​ ನೀಡಿದ ‘ಕಬ್ಜ’ ನಟಿ ಶ್ರೀಯಾ ಶರಣ್​; ಇಲ್ಲಿವೆ ವೈರಲ್ ಫೋಟೋಸ್​
Image
‘ಕೆಜಿಎಫ್’ ತರ ‘ಕಬ್ಜ’ ಇದೆ ಅನ್ನೋದೇ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಎಂದ ಉಪೇಂದ್ರ
Image
Kabzaa: ಉಪೇಂದ್ರ ಟ್ಯಾಲೆಂಟ್​ ಬಗ್ಗೆ ‘ಕಬ್ಜ’ ಹೀರೋಯಿನ್​ ಶ್ರೀಯಾ ಶರಣ್ ಏನು ಹೇಳ್ತಾರೆ? ವಿಡಿಯೋ ನೋಡಿ
Image
Kabzaa Teaser: ಹೇಗಿದೆ ನೋಡಿ ‘ಕಬ್ಜ’ ಟೀಸರ್​; ಹೊಸ ಹವಾ ಎಬ್ಬಿಸಿದ ಉಪೇಂದ್ರ-ಸುದೀಪ್​ ಚಿತ್ರದ ಝಲಕ್​

‘ಕಬ್ಜ’ ಟೀಸರ್​ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಜನಮೆಚ್ಚುಗೆ ಗಳಿಸಿದೆ. ಈಗಾಗಲೇ 2.8 ಕೋಟಿಗೂ ಅಧಿಕ ಬಾರಿ ಇದು ವೀಕ್ಷಣೆ ಕಂಡಿದೆ. ಆ ಮೂಲಕ ‘ಕಬ್ಜ’ ಮೇಲೆ ಪ್ರೇಕ್ಷಕರ ನಿರೀಕ್ಷೆ ಎಷ್ಟಿದೆ ಎಂಬುದು ಸಾಬೀತಾಗಿದೆ. ಇದರ ಮೇಕಿಂಗ್​ ‘ಕೆಜಿಎಫ್​ 2’ ರೀತಿ ಇದೆ ಎಂಬ ಚರ್ಚೆ ಸಹ ಇದೆ. ಆ ಕಾರಣದಿಂದಲೂ ಭಾರಿ ಕುತೂಹಲ ಮೂಡಿದೆ.

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಆರ್​. ಚಂದ್ರು ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈವರೆಗೂ ಅವರು ಮಾಡಿದ ಸಿನಿಮಾಗಳು ಒಂದಿಲ್ಲೊಂದು ರೀತಿಯಲ್ಲಿ ಗಮನ ಸೆಳೆದಿವೆ. ಆದರೆ ಇದೇ ಮೊದಲ ಬಾರಿಗೆ ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಟೀಸರ್​ನಲ್ಲಿ ಈಗಾಗಲೇ ಅವರ ಶ್ರಮ ಕಾಣಿಸಿದೆ. ಆದಷ್ಟು ಬೇಗ ಟ್ರೇಲರ್​ ಬರಲಿ ಎಂಬುದು ಫ್ಯಾನ್ಸ್​ ಬಯಕೆ.

ಉಪೇಂದ್ರ ಮತ್ತು ಕಿಚ್ಚ ಸುದೀಪ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಅವರಿಬ್ಬರ ಕಾಂಬಿನೇಷನ್​ ಎಂದರೆ ಸಹಜವಾಗಿಯೇ ನಿರೀಕ್ಷೆ ದೊಡ್ಡದಾಗುತ್ತದೆ. ಟೀಸರ್​ ನೋಡಿದ ಮೇಲಂತೂ ಚಿತ್ರದ ಮೇಕಿಂಗ್​ ಗುಣಮಟ್ಟಕ್ಕೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಮಾತ್ರವಲ್ಲದೇ ಇನ್ನೂ ಒಂದಷ್ಟು ಭಾಷೆಗಳಿಗೆ ಈ ಚಿತ್ರ ಡಬ್​ ಆಗಿ ತೆರೆಕಾಣಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ