Kabzaa Teaser: ಹೇಗಿದೆ ನೋಡಿ ‘ಕಬ್ಜ’ ಟೀಸರ್​; ಹೊಸ ಹವಾ ಎಬ್ಬಿಸಿದ ಉಪೇಂದ್ರ-ಸುದೀಪ್​ ಚಿತ್ರದ ಝಲಕ್​

Upendra | Kabzaa Movie: ಬಿಗ್​ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ‘ಕಬ್ಜ’ ಚಿತ್ರದ ಟೀಸರ್​ ಗಮನ ಸೆಳೆಯುತ್ತಿದೆ. ಉಪೇಂದ್ರ ಅಭಿಮಾನಿಗಳು ಟೀಸರ್​ ನೋಡಿ ಮೆಚ್ಚಿಕೊಂಡಿದ್ದಾರೆ.

Kabzaa Teaser: ಹೇಗಿದೆ ನೋಡಿ ‘ಕಬ್ಜ’ ಟೀಸರ್​; ಹೊಸ ಹವಾ ಎಬ್ಬಿಸಿದ ಉಪೇಂದ್ರ-ಸುದೀಪ್​ ಚಿತ್ರದ ಝಲಕ್​
ಉಪೇಂದ್ರ
TV9kannada Web Team

| Edited By: Madan Kumar

Sep 17, 2022 | 5:46 PM

ಬಹುನಿರೀಕ್ಷಿತ ‘ಕಬ್ಜ’ ಸಿನಿಮಾದ ಟೀಸರ್​ (Kabzaa Movie Teaser) ರಿಲೀಸ್​ ಆಗಿದೆ. ಈ ಟೀಸರ್​ ನೋಡಲು ಅಭಿಮಾನಿಗಳು ಬಹುದಿನಗಳಿಂದ ಕಾದಿದ್ದರು. ಬೆಂಗಳೂರಿನ ಓರಾಯನ್​ ಮಾಲ್​ನಲ್ಲಿ ಅದ್ದೂರಿಯಾಗಿ ಟೀಸರ್​ ರಿಲೀಸ್​ ಮಾಡಲಾಗಿದೆ. ಟಾಲಿವುಡ್​ ಸ್ಟಾರ್​ ನಟ ರಾಣಾ ದಗ್ಗುಬಾಟಿ (Rana Daggubati) ಅವರು ಅವರು ಮುಖ್ಯ ಅತಿಥಿಯಾಗಿ ಬಂದು ಟೀಸರ್​ ಬಿಡುಗಡೆ ಮಾಡಿದ್ದಾರೆ. ನಾಳೆ (ಸೆ.18) ನಟ ಉಪೇಂದ್ರ (Upendra) ಅವರ ಜನ್ಮದಿನ. ಆ ಪ್ರಯುಕ್ತ ಇಂದು ಸಂಜೆ ಟೀಸರ್​ ಹೊರಬಂದಿದೆ. ಈ ಸಿನಿಮಾಗೆ ಆರ್​. ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಉಪೇಂದ್ರ ಜತೆ ಕಿಚ್ಚ ಸುದೀಪ್​ ಕೂಡ ನಟಿಸುತ್ತಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್​ ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಟೀಸರ್​ ನೋಡಿ ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ.

ಈಗಿನದ್ದು ಪ್ಯಾನ್​ ಇಂಡಿಯಾ ಸಿನಿಮಾಗಳ ಜಮಾನಾ. ‘ಕಬ್ಜ’ ಚಿತ್ರದ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿದೆ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿ ವರ್ಷನ್​ನ ಟೀಸರ್​ ರಿಲೀಸ್​ ಮಾಡಲಾಗಿದೆ. ಇನ್ನೂ ಹಲವು ಭಾಷೆಗಳಲ್ಲಿ ಚಿತ್ರ ಮೂಡಿಬರಲಿದೆ. ಬೃಹತ್​ ಸೆಟ್​ಗಳನ್ನು ನಿರ್ಮಿಸಿ ಶೂಟಿಂಗ್​ ಮಾಡಲಾಗಿದೆ.

ಇಡೀ ಸಿನಿಮಾ ಸಖತ್​ ಅದ್ದೂರಿಯಾಗಿ ನಿರ್ಮಾಣ ಆಗಿದೆ ಎಂಬುದಕ್ಕೆ ಈ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಕಿಚ್ಚ ಸುದೀಪ್​ ಅವರ ಗೆಟಪ್​ ಕೂಡ ಇದರಲ್ಲಿ ರಿವೀಲ್​ ಆಗಿದೆ. ಟೀಸರ್​ನ ಪ್ರತಿ ಫೇಮ್​ನಲ್ಲೂ ಶ್ರೀಮಂತಿಕೆ ಕಾಣುತ್ತಿದೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣಕ್ಕೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ.

ಟೀಸರ್​ ನೋಡಿ ರಾಣಾ ದಗ್ಗುಬಾಟಿ ಭೇಷ್​ ಎಂದಿದ್ದಾರೆ. ‘ಈ ಟೀಸರ್​ ರಿಲೀಸ್​ ಮಾಡಿದ್ದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಈ ರೀತಿ ದಕ್ಷಿಣ ಭಾರತದ ಸಿನಿಮಾಗಳ ಶಕ್ತಿ ಇಡೀ ಪ್ರಪಂಚಕ್ಕೆ ತಿಳಿಯಬೇಕು. ಕಬ್ಜ ಚಿತ್ರತಂಡಕ್ಕೆ ಶುಭವಾಗಲಿ. ಉಪೇಂದ್ರ, ಸುದೀಪ್​, ಶ್ರೀಯಾ ಶರಣ್​ ರೀತಿಯ ಕಲಾವಿದರು ಇರುವುದು ಈ ಚಿತ್ರದ ಬಲ. ನಿರ್ದೇಶಕ ಚಂದ್ರು ಎಲ್ಲರ ಪಾತ್ರವನ್ನು ತೋರಿಸಿದ ರೀತಿ ನನ್ನ ಗಮನ ಸೆಳೆಯಿತು. ಹಿನ್ನೆಲೆ ಸಂಗೀತ ನನ್ನ ಕಿವಿಯಲ್ಲಿ ಗುನುಗುಟ್ಟುತ್ತಿದೆ’ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada