Kabzaa Teaser Launch Live: ‘ಕಬ್ಜ’ ಚಿತ್ರದ ಟೀಸರ್​ ಬಿಡುಗಡೆ ಕಾರ್ಯಕ್ರಮ; ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ..

Kabzaa Teaser Launch Event: ‘ಕಬ್ಜ’ ಸಿನಿಮಾದ ಟೀಸರ್​ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್​ ಸೃಷ್ಟಿ ಆಗಿದೆ. ಉಪೇಂದ್ರ, ಕಿಚ್ಚ ಸುದೀಪ್​, ಶ್ರೀಯಾ ಶರಣ್​ ಅಭಿನಯದ ಈ ಚಿತ್ರಕ್ಕೆ ಆರ್​. ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ.

TV9kannada Web Team

| Edited By: Apurva Kumar Balegere

Sep 17, 2022 | 5:13 PM

ಬೆಂಗಳೂರಿನ ಒರಾಯನ್​ ಮಾಲ್​ನಲ್ಲಿ ‘ಕಬ್ಜ’ (Kabzaa Movie) ಸಿನಿಮಾದ ಟೀಸರ್​ ಬಿಡುಗಡೆ ಆಗುತ್ತಿದೆ. 5 ಭಾಷೆಗಳಲ್ಲಿ ಟೀಸರ್​ ಅನಾವರಣ ಆಗಲಿದ್ದು, ಆಯಾ ಭಾಷೆಯ ರಾಜ್ಯಗಳಿಂದ ಪತ್ರಕರ್ತರನ್ನು ಆಹ್ವಾನಿಸಲಾಗಿದೆ. ಟಾಲಿವುಡ್​ ಮತ್ತು ಸ್ಯಾಂಡಲ್​​ವುಡ್​ನ ಅನೇಕ ಸ್ಟಾರ್​ ಕಲಾವಿದರು ಆಗಮಿಸಿದ್ದಾರೆ. ‘ರಿಯಲ್​ ಸ್ಟಾರ್​’ ಉಪೇಂದ್ರ (Upendra), ಕಿಚ್ಚ ಸುದೀಪ್​, ಶ್ರೀಯಾ ಶರಣ್​ ಮುಂತಾದವರು ಅಭಿನಯಿಸಿರುವ ‘ಕಬ್ಜ’ ಚಿತ್ರಕ್ಕೆ ಆರ್​. ಚಂದ್ರು (R Chandru) ನಿರ್ದೇಶನ ಮಾಡುತ್ತಿದ್ದಾರೆ. ಅದ್ದೂರಿಯಾಗಿ ನಡೆಯುತ್ತಿರುವ ಟೀಸರ್​ ರಿಲೀಸ್​ ಕಾರ್ಯಕ್ರಮದ ಲೈವ್​ ವಿಡಿಯೋ ಇಲ್ಲಿದೆ. ಬಿಗ್​ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಪ್ಯಾ​ನ್​ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಲು ಸಜ್ಜಾಗುತ್ತಿದೆ.

 

Follow us on

Click on your DTH Provider to Add TV9 Kannada