ಮೈಸೂರಿನ ಪೊಲೀಸ್ ಇನ್ಸ್ಪೆಕ್ಟರೊಬ್ಬರು ಸರ್ಕಾರಿ ನೌಕರಿಗಳಿಗೆ ವ್ಯವಹಾರ ಕುದುರಿಸುತ್ತಿರುವ ಆಡಿಯೋ ಕ್ಲಿಪ್ಪಿಂಗ್ ಬಯಲು!
ಬೇರೆ ಬೇರೆ ಇಲಾಖೆಗಳಲ್ಲಿರುವ ಹುದ್ದೆಗಳಿಗೆ ಎಷ್ಟೆಷ್ಟು ರೇಟ್ ಇದೆ ಅನ್ನೋದನ್ನು 30 ನಿಮಿಷಗಳ ಆಡಿಯೋ ಕ್ಲಿಪ್ಪಿಂಗ್ ನಲ್ಲಿ ಅಶ್ವಿನಿ ಹೇಳಿರುವರೆಂದು ಲಕ್ಷ್ಮಣ್ ಹೇಳುತ್ತಾರೆ.
ಮೈಸೂರು: ಕೆಪಿಸಿಸಿ ವಕ್ತಾರ ಎಮ್ ಲಕ್ಷ್ಮಣ (M Lakshman) ಅವರು ಪತ್ರಿಕಾ ಗೋಷ್ಟಿ ನಡೆಸುವಾಗಲೆಲ್ಲ ಸ್ಪೋಟಕ ಮಾಹಿತಿಗಳನ್ನು ಬಯಲಿಗೆ ಹಾಕುತ್ತಾರೆ. ಶನಿವಾರ ಮೈಸೂರಲ್ಲಿ ಒಂದು ಗೋಷ್ಟಿ ನಡೆಸಿ ಮೈಸೂರಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (police sub-inspector) ಆಗಿ ಕೆಲಸ ಮಾಡುವ ಅಶ್ವಿನಿ ಅನಂತಪುರ (Ashwini Anantapur) ಅವರು ಸರ್ಕಾರಿ ಹುದ್ದೆಗಳನ್ನು ಅಪೇಕ್ಷಿಸಿ ಅದಕ್ಕೋಸ್ಕರ ಲಂಚದ ರೂಪದಲ್ಲಿ ಹಣ ನೀಡಲು ತಯಾರಿರುವ ಜನರರೊಂದಿಗೆ ವ್ಯವಾಹಾರ ಕುದುರಿಸುತ್ತಿರುವ ಆಡಿಯೋ ಕ್ಲಿಪ್ಪಿಂಗ್ ಅನ್ನು ಬಿಡಗಡೆ ಮಾಡಿದ್ದಾರೆ. ಬೇರೆ ಬೇರೆ ಇಲಾಖೆಗಳಲ್ಲಿರುಬವ ಹುದ್ದೆಗಳಿಗೆ ಎಷ್ಟೆಷ್ಟು ರೇಟ್ ಇದೆ ಅನ್ನೋದನ್ನು ಅಶ್ವಿನಿ 30 ನಿಮಿಷಗಳ ಆಡಿಯೋ ಕ್ಲಿಪ್ಪಿಂಗ್ ನಲ್ಲಿ ಹೇಳಿರುವರೆಂದು ಲಕ್ಷ್ಮಣ್ ಹೇಳುತ್ತಾರೆ.
Published on: Sep 17, 2022 03:33 PM
Latest Videos