ಪ್ರತಿಯೊಬ್ಬ ಕಾಂಗ್ರೆಸ್ ಶಾಸಕನಿಗೆ ಸುರ್ಜೆವಾಲಾ ಜವಾಬ್ದಾರಿಯನ್ನು ವಹಿಸಿದ್ದಾರೆ: ಡಿಕೆ ಶಿವಕುಮಾರ

ಪ್ರತಿಯೊಬ್ಬ ಕಾಂಗ್ರೆಸ್ ಶಾಸಕನಿಗೆ ಸುರ್ಜೆವಾಲಾ ಜವಾಬ್ದಾರಿಯನ್ನು ವಹಿಸಿದ್ದಾರೆ: ಡಿಕೆ ಶಿವಕುಮಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 17, 2022 | 2:28 PM

ಸುದ್ದಿಗಾರರೊಂದಿಗೆ ಮಾತಾಡಿದ ಅವರ ಇಡಿಯಿಂದ ನೋಟೀಸ್ ಬಂದಿರುವುದರಿಂದ ದೆಹಲಿಗೆ ಹೋಗುತ್ತಿರುವುದಾಗಿ ಸಹ ಹೇಳಿದರು.

ಬೆಂಗಳೂರು:  ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರಬೇಕಾದರೆ ಪ್ರತಿಯೊಬ್ಬ ಶಾಸಕ ತಮ್ಮ ಕ್ಷೇತ್ರಕ್ಕೆ ಹೋಗಿ ಶ್ರಮವಹಿಸಿ ಕೆಲಸ ಮಾಡಬೇಕು, ಕೇವಲ ಮದುವೆ ಸಮಾರಂಭಗಳಿಗೆ, ಸರ್ಕಾರಿ ಕಾರ್ಯಕ್ರಮಗಳಿಗೆ ಹೋಗಿಬಂದರೆ ಸಾಲದು, ಬೂತ್ ಯಾತ್ರೆ ಮಾಡಬೇಕು, ಪ್ರತಿಯೊಬ್ಬರಿಗೆ ಕೆಲಸದ ಜವಾಬ್ದಾರಿಗಳನ್ನು ಎಐಸಿಸಿ ಕಾರ್ಯದರ್ಶಿ (AICC secretary) ರಂದೀಪ್ ಸುರ್ಜೆವಾಲ (Randeep Surjewala) ವಹಿಸಿದ್ದಾರೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಸುದ್ದಿಗಾರರೊಂದಿಗೆ ಮಾತಾಡಿದ ಅವರ ಇಡಿಯಿಂದ ನೋಟೀಸ್ ಬಂದಿರುವುದರಿಂದ ದೆಹಲಿಗೆ ಹೋಗುತ್ತಿರುವುದಾಗಿ ಸಹ ಹೇಳಿದರು.