Kabza Teaser: ಅದ್ದೂರಿಯಾಗಿ ರಿಲೀಸ್​ ಆಗಲಿದೆ ‘ಕಬ್ಜ’ ಟೀಸರ್​; ರಾಣಾ, ಶಿವಣ್ಣ ಸ್ಪೆಷಲ್​ ಗೆಸ್ಟ್​

Upendra | Kichcha Sudeep: 5 ಭಾಷೆಗಳಲ್ಲಿ ‘ಕಬ್ಜ’ ಟೀಸರ್​ ಬಿಡುಗಡೆ ಆಗಲಿದೆ. ಬೆಂಗಳೂರಿನಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ರಾಣಾ ದಗ್ಗುಬಾಟಿ, ಶಿವರಾಜ್​ಕುಮಾರ್​ ಮುಂತಾದ ಸೆಲೆಬ್ರಿಟಿಗಳು ಹಾಜರಿ ಹಾಕಲಿದ್ದಾರೆ.

Kabza Teaser: ಅದ್ದೂರಿಯಾಗಿ ರಿಲೀಸ್​ ಆಗಲಿದೆ ‘ಕಬ್ಜ’ ಟೀಸರ್​; ರಾಣಾ, ಶಿವಣ್ಣ ಸ್ಪೆಷಲ್​ ಗೆಸ್ಟ್​
ರಾಣಾ ದಗ್ಗುಬಾಟಿ, ಉಪೇಂದ್ರ, ಶಿವರಾಜ್​ಕುಮಾರ್​
TV9kannada Web Team

| Edited By: Apurva Kumar Balegere

Sep 17, 2022 | 9:39 AM

ಕನ್ನಡ ಚಿತ್ರರಂಗದ ಮಾರುಕಟ್ಟೆ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಸ್ಯಾಂಡಲ್​ವುಡ್​ ಸಿನಿಮಾಗಳು ಗಮನ ಸೆಳೆಯುತ್ತಿವೆ. ಇಲ್ಲಿನ ಸ್ಟಾರ್​ ನಟರು ಇಡಿ ದೇಶವೇ ತಿರುಗಿ ನೋಡುವಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ಆಗುತ್ತಿರುವುದು ‘ಕಬ್ಜ’ ಸಿನಿಮಾ (Kabza Movie). ಆರ್​. ಚಂದ್ರು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳ ಮನದಲ್ಲಿ ಸಖತ್​ ನಿರೀಕ್ಷೆ ಮನೆ ಮಾಡಿದೆ. ಅನೇಕ ಪೋಸ್ಟರ್​ಗಳ ಮೂಲಕ ಗಮನ ಸೆಳೆದ ಈ ಸಿನಿಮಾದ ಟೀಸರ್​ ನೋಡುವ ಸಮಯ ಈಗ ಬಂದಿದೆ. ‘ಕಬ್ಜ’ ಚಿತ್ರಕ್ಕೆ ಉಪೇಂದ್ರ ಹೀರೋ. ಅವರ ಜೊತೆ ಕಿಚ್ಚ ಸುದೀಪ್​ ಕೂಡ ನಟಿಸುತ್ತಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್​ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಟೀಸರ್​ ರಿಲೀಸ್​ ಕಾರ್ಯಕ್ರಮ ಇಂದು (ಸೆ.17) ನಡೆಯುತ್ತಿದ್ದು, ರಾಣಾ ದಗ್ಗುಬಾಟಿ (Rana Daggubati) ಮತ್ತು ಶಿವರಾಜ್​ಕುಮಾರ್​ (Shivarajkumar) ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

‘ಕಬ್ಜ’ ಒಂದು ಪ್ಯಾನ್​ ಇಂಡಿಯಾ ಸಿನಿಮಾ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಕೂಡ ಈ ಸಿನಿಮಾ ಬಿಡುಗಡೆ ಆಗಲಿದೆ. ಅದ್ದೂರಿ ಮೇಕಿಂಗ್​ ಕಾರಣದಿಂದ ಎಲ್ಲರೂ ಈ ಚಿತ್ರದ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಉಪೇಂದ್ರ ಮತ್ತು ಕಿಚ್ಚ ಸುದೀಪ್​ ಅವರಿಗೆ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಅವರೆಲ್ಲರೂ ‘ಕಬ್ಜ’ ಟೀಸರ್​ ನೋಡಲು ಕಾದಿದ್ದಾರೆ.

ಬೆಂಗಳೂರಿನ ಓರಾಯನ್​ ಮಾಲ್​ನಲ್ಲಿ ಟೀಸರ್​ ರಿಲೀಸ್​ ಕಾರ್ಯಕ್ರಮ ನಡೆಯಲಿದೆ. 5 ಭಾಷೆಗಳಲ್ಲಿ ಟೀಸರ್​ ಬಿಡುಗಡೆ ಆಗುತ್ತಿರುವುದರಿಂದ ಹೊರರಾಜ್ಯಗಳಿಂದಲೂ ಪತ್ರಕರ್ತರು ಆಗಮಿಸಲಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕೂಡ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಲಿದ್ದಾರೆ. ಟೀಸರ್​ ಹೇಗಿರಲಿದೆ ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಲ್ಲೂ ನಿರ್ಮಾಣ ಆಗಿದೆ.

ಸೆಪ್ಟೆಂಬರ್​ 18ರಂದು ‘ರಿಯಲ್​ ಸ್ಟಾರ್​’ ಉಪೇಂದ್ರ ಅವರ ಜನ್ಮದಿನ. ಆ ಪ್ರಯುಕ್ತ ಒಂದು ದಿನ ಮುನ್ನವೇ, ‘ಕಬ್ಜ’ ಟೀಸರ್​ ಅನಾವರಣ ಮಾಡಲಾಗುತ್ತಿದೆ. ಈಗಾಗಲೇ ಕಿಚ್ಚ ಸುದೀಪ್​ ಅವರು ಟೀಸರ್​ ಮೇಲೆ ಇರುವ ನಿರೀಕ್ಷೆಯ ಬಗ್ಗೆ ಮಾತನಾಡಿದ್ದಾರೆ. ‘ಕಬ್ಜ ಚಿತ್ರದ ಡಿಫರೆಂಟ್​ ಪೋಸ್ಟರ್​ಗಳನ್ನು ಎಲ್ಲರೂ ನೋಡಿರುತ್ತೀರಿ. ಮೂರು ವರ್ಷಗಳ ಸತತ ಕೆಲಸದ ನಂತರ ಈಗ ಮೊದಲ ಬಾರಿ, ಮೊದಲ ಟೀಸರ್​ ನಿಮ್ಮ ಮುಂದೆ ಬರುತ್ತಿದೆ. ಇಡೀ ಕಬ್ಜ ತಂಡಕ್ಕೆ ಆಲ್​ ದಿ ಬೆಸ್ಟ್​ ಹೇಳುತ್ತೇನೆ. ತಾವೆಲ್ಲರೂ ಈ ಟೀಸರ್​ ನೋಡಿ, ಶೇರ್​ ಮಾಡಿ’ ಎಂದಿದ್ದಾರೆ ಕಿಚ್ಚ ಸುದೀಪ್.​

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada