‘ಕಾಂತಾರ ಬಾಕ್ಸ್ ಆಫೀಸ್ ಓಟಕ್ಕಿಲ್ಲ ಬ್ರೇಕ್; ಹಿಂದಿಯಲ್ಲಿ 50 ಕೋಟಿ ರೂ. ದಾಟಿದ ಕಲೆಕ್ಷನ್
ಸೋಮವಾರ (ಅಕ್ಟೋಬರ್ 31) ಮತ್ತು ಮಂಗಳವಾರ (ನವೆಂಬರ್ 1) ತಲಾ 2.30 ಕೋಟಿ ಗಳಿಸಿಕೊಂಡಿ ಕೊಂಡಿದ್ದ ‘ಕಾಂತಾರ’ ಚಿತ್ರ ಬುಧವಾರ (ನವೆಂಬರ್ 2) 2.05 ಕೋಟಿ ರೂ. ಗಳಿಸಿಕೊಂಡು ಓಟ ಮುಂದುವರಿಸಿತ್ತು. ‘
‘ಕಾಂತಾರ’ (Kantara Movie) ಸಿನಿಮಾ ರಿಲೀಸ್ ಆದಾಗಿನಿಂದಲು ಎಷ್ಟೇ ಅಡೆತಡೆ ಬಂದರೂ ಇದರ ಓಟಕ್ಕೆ ಬ್ರೇಕ್ ಬಿದ್ದಿಲ್ಲ. ರಿಷಬ್ ಶೆಟ್ಟಿ (Rishab Shetty) ನಟನೆಯ ಈ ಚಿತ್ರ ಹಿಂದಿಯಲ್ಲಿ ತೆರೆಕಂಡು 20 ದಿನಗಳಾಗಿವೆ. ಹಿಂದಿಯಲ್ಲಿ ‘ಕಾಂತಾರ’ ಸಿನಿಮಾ ಇಂದು (ನವೆಂಬರ್ 4) 50 ಕೋಟಿ ದಾಟಿದೆ. ‘ಕಾಂತಾರ’ ಚಿತ್ರವು ಕನ್ನಡದಲ್ಲಿ ಸೆಪ್ಟಂಬರ್ 30ಕ್ಕೆ ತೆರೆಕಂಡು ಉತ್ತಮ ಪ್ರದರ್ಶನ ಕಂಡಿತ್ತು. ಇದಾದ ಬೆನ್ನಲ್ಲೇ ಹಿಂದಿಯಲ್ಲೂ ಈ ಚಿತ್ರ ರಿಲೀಸ್ ಆಗಿ ಅಬ್ಬರಿಸುತ್ತಿದೆ. ಸೋಮವಾರ (ಅಕ್ಟೋಬರ್ 31) ಮತ್ತು ಮಂಗಳವಾರ (ನವೆಂಬರ್ 1) ತಲಾ 2.30 ಕೋಟಿ ಗಳಿಸಿಕೊಂಡಿ ಕೊಂಡಿದ್ದ ‘ಕಾಂತಾರ’ ಚಿತ್ರ ಬುಧವಾರ (ನವೆಂಬರ್ 2) 2.05 ಕೋಟಿ ರೂ. ಗಳಿಸಿಕೊಂಡು ಓಟ ಮುಂದುವರಿಸಿತ್ತು. ‘ಕಾಂತಾರ’ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ. ಹಿಂದಿಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಚಿತ್ರದ ಅಬ್ಬರ ಇರಲಿದೆ.
‘ಕಾಂತಾರ’ ಚಿತ್ರವನ್ನು ರಿಷಬ್ ಅವರು ನಿರ್ದೇಶಿಸಿ ನಟಿಸಿದ್ದಾರೆ. ಸದಾ ಹೊಸದನ್ನು ಪ್ರಯತ್ನಿಸುವ ಅವರು ಈ ಬಾರಿ ‘ಕಾಂತಾರ’ ಚಿತ್ರದ ಮೂಲಕ ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಪ್ರತಿ ಚಿತ್ರದ ಗೆಲುವಿನ ನಂತರ ಅದೇ ಶೈಲಿಯ ಸಿನಿಮಾಗೆ ಜೋತು ಬಿಳದೇ ಹೊಸದನ್ನು ಪ್ರಯತ್ನಿಸುತ್ತಿದ್ದಾರೆ.
‘ಕಾಂತಾರ’ ಚಿತ್ರದ ಮುಂದೆ ಬಾಲಿವುಡ್ ಹೀರೋ ಅಕ್ಷಯ ಕುಮಾರ್ ಅಭಿಯನದ ‘ರಾಮ್ ಸೇತು’ ಸಿನಿಮಾ ಮತ್ತು ಸಿದ್ದಾರ್ಥ್ ಮಲ್ಹೋತ್ರಾ-ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಹೇಳಿಕೊಳ್ಳುವಷ್ಟು ಕಲೆಕ್ಷನ್ ಮಾಡಿಲ್ಲ.
#Kantara *#Hindi version* [Week 3] Fri 2.75 cr, Sat 4.10 cr, Sun 4.40 cr, Mon 2.30 cr, Tue 2.30 cr, Wed 2.05 cr, Thu 2.05 cr. Total: ₹ 51.65 cr. #India biz. Nett BOC.
Biz at a glance… ⭐️ Week 1: ₹ 15 cr ⭐️ Week 2: ₹ 16.70 cr ⭐️ Week 3: ₹ 19.95 cr ⭐️ Total: ₹ 51.65 cr
— taran adarsh (@taran_adarsh) November 4, 2022
ರಿಷಬ್ ಶೆಟ್ಟಿ ಅವರ ಈ ಸಿನಿಮಾ ಹಿಂದಿಯಲ್ಲಿ ರಿಲೀಸ್ ಆದ ಕೆಲ ದಿನ ಸಾಧಾರಣ ಗಳಿಕೆ ಮಾಡಿತ್ತು. ದೀಪಾವಳಿ ನಂತರದಲ್ಲಿ ಚಿತ್ರಕ್ಕೆ ಬಾಯಿಮಾತಿನ ಪ್ರಚಾರ ಸಿಕ್ಕಿದೆ. ಇದು ಚಿತ್ರಕ್ಕೆ ವರದಾನವಾಗಿದೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಈಗಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲಿ ಈ ಚಿತ್ರ ರಿಲೀಸ್ ಆಗಿ ತಿಂಗಳ ಮೇಲಾದರೂ ಚಿತ್ರದ ಅಬ್ಬರ ಕಡಿಮೆ ಆಗಿಲ್ಲ.