ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿದ ಝೈದ್ ಖಾನ್; ‘ಬನಾರಸ್’ ಸಿನಿಮಾದ ಮೊದಲ ದಿನದ ಗಳಿಕೆ ಇಷ್ಟೊಂದಾ?

Banaras Movie Collection: ಪ್ರತಿ ಚಿತ್ರದಲ್ಲೂ ಭಿನ್ನ ಕಥೆಗಳನ್ನು ಜಯತೀರ್ಥ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಬಾರಿ ‘ಬನಾರಸ್​’ ಮೂಲಕ ಹೊಸ ಮಾದರಿಯ ಕಥೆಯೊಂದಿಗೆ ಅವರು ಬಂದಿದ್ದಾರೆ.

ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿದ ಝೈದ್ ಖಾನ್; ‘ಬನಾರಸ್’ ಸಿನಿಮಾದ ಮೊದಲ ದಿನದ ಗಳಿಕೆ ಇಷ್ಟೊಂದಾ?
ಸೋನಲ್-ಝೈದ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 05, 2022 | 2:00 PM

ಶಾಸಕ ಜಮೀರ್ ಅಹ್ಮದ್ ಮಗ ಝೈದ್ ಖಾನ್ (Zaid Khan) ನಟನೆಯ ಮೊದಲ ಸಿನಿಮಾ ‘ಬನಾರಸ್​’ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅನುಭವಿ ಹೀರೋಗಳಂತೆ ಅವರು ನಟನೆ ಮಾಡಿ ತೋರಿಸಿದ್ದಾರೆ. ಟೈಮ್​ ಟ್ರಾವೆಲಿಂಗ್, ಟೈಮ್ ಲೂಪ್ ವಿಚಾರಗಳನ್ನು ಇಟ್ಟುಕೊಂಡು ‘ಬನಾರಸ್’ ಸಿನಿಮಾ (Banaras Movie) ಸಿದ್ಧವಾಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ ಮೊದಲ ದಿನವೇ ಅಬ್ಬರದ ಕಲೆಕ್ಷನ್ ಮಾಡಿದೆ. ಈ ಮೂಲಕ ಮೊದಲ ಚಿತ್ರದಲ್ಲೇ ಝೈದ್ ಖಾನ್ ಗೆದ್ದು ಬೀಗಿದ್ದಾರೆ.

ರಿಷಬ್ ಶೆಟ್ಟಿ ನಟನೆಯ ‘ಬೆಲ್ ಬಾಟಂ’ ಸಿನಿಮಾ ಯಶಸ್ಸು ಕಂಡಿತ್ತು. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಜಯತೀರ್ಥ ಅವರೇ ‘ಬನಾರಸ್’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರತಿ ಚಿತ್ರದಲ್ಲೂ ಭಿನ್ನ ಕಥೆಗಳನ್ನು ಜಯತೀರ್ಥ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಬಾರಿ ‘ಬನಾರಸ್​’ ಮೂಲಕ ಹೊಸ ಮಾದರಿಯ ಕಥೆಯೊಂದಿಗೆ ಅವರು ಬಂದಿದ್ದಾರೆ.

‘ಬನಾರಸ್’ ಸಿನಿಮಾ ಮೊದಲ ದಿನ ಬರೋಬ್ಬರಿ 3 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೊಸ ನಟನ ಚಿತ್ರಕ್ಕೆ ಈ ಪರಿ ಮೆಚ್ಚುಗೆ ಸಿಗೋದು ತುಂಬಾನೇ ಅಪರೂಪ. ಆದರೆ, ಝೈದ್ ಖಾನ್ ಅವರು ಈ ವಿಚಾರದಲ್ಲಿ ಗೆದ್ದಿದ್ದಾರೆ. ಅವರು ಮೊದಲ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಸಿನಿಮಾಗೆ ಬಾಯಿಮಾತಿನ ಪ್ರಚಾರ ಚೆನ್ನಾಗಿಯೇ ಸಿಕ್ಕಿದೆ. ಇನ್ನು, ನಾನಾ ಕಡೆಗಳಿಗೆ ತೆರಳಿ ಚಿತ್ರತಂಡದವರು ಪ್ರಚಾರ ಮಾಡಿದ್ದು ಸಹಕಾರಿ ಆಗಿದೆ.

ಇದನ್ನೂ ಓದಿ
Image
‘ಬನಾರಸ್’ ನೋಡಿ ಜಮೀರ್ ಅಹ್ಮದ್ ಎದುರು ಹೊಸ ಬೇಡಿಕೆ ಇಟ್ಟ ಅಭಿಮಾನಿ
Image
Banaras Movie Review: ಇದು ‘ಮಾಯಾ’ಗಂಗೆಯ ಬನಾರಸ್; ಝೈದ್ ಖಾನ್​ ಕ್ಲಾಸ್-ಮಾಸ್

ಕನ್ನಡ ಚಿತ್ರರಂಗದ ಮೇಲೆ ಪರಭಾಷೆಯವರು ಕಣ್ಣು ಇಟ್ಟಿದ್ದಾರೆ. ಇಲ್ಲಿ ರಿಲೀಸ್ ಆಗುವ ಚಿತ್ರಗಳನ್ನು ಅವರೂ ವೀಕ್ಷಿಸುತ್ತಾರೆ. ‘ಬನಾರಸ್’ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ ಹಾಗೂ ಇತರ ಭಾಷೆಗಳಲ್ಲಿ ರಿಲೀಸ್ ಆಗಿರುವುದರಿಂದ ಪರಭಾಷೆಯವರೂ ಸಿನಿಮಾ ವೀಕ್ಷಿಸಿದ್ದಾರೆ. ಹೀಗಾಗಿ, ಗಳಿಕೆ ಹೆಚ್ಚಿದೆ. ಇಂದು (ನವೆಂಬರ್ 5) ಹಾಗೂ ನಾಳೆ (ನವೆಂಬರ್ 6) ವೀಕೆಂಡ್ ಇದೆ. ಈ ಸಂದರ್ಭದಲ್ಲಿ ಸಿನಿಮಾ ಉತ್ತಮ ಗಳಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ‘ಬನಾರಸ್’ ನೋಡಿ ಜಮೀರ್ ಅಹ್ಮದ್ ಎದುರು ಹೊಸ ಬೇಡಿಕೆ ಇಟ್ಟ ಅಭಿಮಾನಿ

Banaras Movie Review: ಇದು ‘ಮಾಯಾ’ಗಂಗೆಯ ಬನಾರಸ್; ಝೈದ್ ಖಾನ್​ ಕ್ಲಾಸ್-ಮಾಸ್

‘ಬನಾರಸ್​’ ಸಿನಿಮಾದ ಕಥೆ ಕನ್ನಡದ ಪಾಲಿಗೆ ಹೊಸತು. ಹೀಗಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗುತ್ತಿದೆ. ಝೈದ್ ಖಾನ್ ನಟನೆಯನ್ನು ಜನರು ಮೆಚ್ಚಿಕೊಂಡಿದ್ದಾರೆ. ನಟಿ ಸೋನಲ್ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ